Advertisement
ತನ್ನ ಸರ್ವಿಸ್ ಪಿಸ್ತೂಲ್‌ನಿಂದ ಸ್ವತಃ ಬಾಯಿಗೆ ಗುಂಡಿಕ್ಕಿಕೊಂಡ ಅವರನ್ನು ಬೋಂಬೆ ಆಸ್ಪತ್ರೆಗೆ ಸಾಗಿಸು ವಷ್ಟರಲ್ಲಿ ಕೊನೆಯುಸಿರೆಳೆದಿದ್ದ ಹಿಮಾಂಶು ರಾಯ್ ಅವರ ಮೃತದೇಹವನ್ನು ಜಿ. ಟಿ. ಆಸ್ಪತ್ರೆಗೆ ಸಾಗಿಸಿ ಅಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಅಂತಿಮ ಸಂಸ್ಕಾರ ನಡೆಸಲಾಗಿತ್ತು.
Related Articles
Advertisement
ಕೆಲಸದ ಒತ್ತಡ ಕೂಡ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪೊಲೀಸ್ ಅಧಿಕಾರಿಗಳು ಯಾವಾಗಲೂ ಸಂಘರ್ಷ ಮತ್ತು ಒತ್ತಡ ದೊಂದಿಗೆ ಬದುಕಬೇಕಾಗುತ್ತದೆ. ರಜೆ ಸಿಗದೆ ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂದು ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಯ್ ಅವರು ಹಲವು ಸವಾಲುಗಳನ್ನು ಎದುರಿಸಿದ್ದ ಯಶಸ್ವಿ ವ್ಯಕ್ತಿಯಾಗಿದ್ದಾರೆ ಎಂದು ನಿವೃತ್ತ ಅಧಿಕಾರಿಗಳು ತಿಳಿಸಿದ್ದಾರೆ.
ರಾಯ್ ಅವರ ಫಿಟೆ°ಸ್ ಪ್ರಶ್ನಾತೀತವಾಗಿದೆ. ಆದರೆ ಅವರು ಹೋರಾಟ ನಡೆಸುತ್ತಿದ್ದ ಕಾಯಿಲೆ ಮಾತ್ರ ನಿರ್ಣಾಯಕ ಹಂತದಲ್ಲಿದ್ದು, ಅದನ್ನು ಅವರು ಹೆಚ್ಚು ಸಮಯ ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಅರುಪ್ ಪಟ್ನಾಯಕ್ ಅವರು ತಿಳಿಸಿದ್ದಾರೆ.
ರಾಯ್ ಅವರನ್ನು ಆಗಾಗ ಮಿಸ್ಟರ್ ಐಪಿಎಸ್ ಎಂದು ಕರೆಯುತ್ತಿದ್ದ ಮಾಜಿ ಡಿಜಿಪಿ ಅರವಿಂದ್ ಇನಾಂದಾರ್ ಅವರು, ರಾಯ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಗ್ಗೆ ತನಗೆ ಗೊತ್ತಿತ್ತು. ಆದರೆ ಅವರು ಅದರೊಂದಿಗೆ ಹೋರಾಡಿ ಬದುಕುವ ಬಗ್ಗೆ ನಾನು ನಂಬಿದ್ದಾಗಿ ತಿಳಿಸಿದ್ದಾರೆ.
ರಾಯ್ ಆತ್ಮಹತ್ಯೆಗೆ ಶರಣಾಗುವ ಹೇಡಿಯಲ್ಲ : ವೈದ್ಯರ ಆತಂಕ
ಮುಂಬಯಿ : ಕ್ಯಾನ್ಸರ್ ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಹಿಮಾಂಶು ರಾಯ್ ಅವರು ಆತ್ಮಹತ್ಯೆಗೆ ಶರಣಾಗುವ ಹೇಡಿಯಲ್ಲ ಎಂದು ಅವರನ್ನು ಉಪಚರಿಸುತ್ತಿದ್ದ ವೈದ್ಯರೊಬ್ಬರು ತಿಳಿಸಿದ್ದಾರೆ.
ರಾಯ್ ಅವರು ಇತ್ತೀಚೆಗಿನ ದಿನಗಳಲ್ಲಿ ಕ್ಯಾನ್ಸರ್‌ನಿಂದ ಮುಕ್ತಿ ಹೊಂದಿದ್ದರು. ಎಪ್ರಿಲ್ 30 ರಂದು ಪಿಇಟಿ ಸ್ಕ್ಯಾನಿಂಗ್‌ನಲ್ಲಿ ಅವರ ದೇಹದಲ್ಲಿ ಕ್ಯಾನ್ಸರ್ ಅಂಶ ಕಂಡು ಬಂದಿರಲಿಲ್ಲ. ರಾಯ್ ಅವರು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದರು. ಅವರ ಆತ್ಮಹತ್ಯೆಗೆ ಕ್ಯಾನ್ಸರ್ ಕಾರಣ ಅಲ್ಲ ಎಂದು ನನಗೆ ಅನುಮಾನವಿದೆ ಎಂದು ಡಾ| ರಾಜ್ ನಗರ್ಕರ್ ಅವರು ತಿಳಿಸಿದ್ದಾರೆ.ಎಟಿಎಸ್ ವಿಭಾಗದಲ್ಲಿ ಮಹತ್ವಪೂರ್ಣ ಪದವಿಯನ್ನು ಹೊಂದಿದ್ದ ಅವರು ಶುಕ್ರವಾರ ಮುಂಬಯಿ ನರಿಮನ್ ಪಾಯಿಂಟ್‌ನ ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾದರು ಎಂಬ ವಿಷಯವನ್ನು ತಿಳಿದು ಬಹಳಷ್ಟು ನೋವಾಯಿತು. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. 2016 ಫೆಬ್ರವರಿಯಲ್ಲಿ ರಾಯ್ ಅವರಿಗೆ ಬೋನ್ ಕ್ಯಾನ್ಸರ್ ಆಗಿತ್ತು. ರಾಯ್ ಅವರು ಆನಂತರ ಪುಣೆಯಲ್ಲಿ ಥೆರಪಿಯನ್ನು ಮಾಡಿಸಿಕೊಂಡಿದ್ದರು. ಆನಂತರ ಇಂಜೆಕ್ಷನ್‌ನೊಂದಿಗೆ ಔಷಧಿಯನ್ನು ನಿಯಮಿತವಾಗಿ ಪಡೆದುಕೊಳ್ಳುತ್ತಿದ್ದರು. ಅಲ್ಲದೆ ಪ್ರತಿಯೊಂದಕ್ಕೂ ಸಲಹೆಯನ್ನು ಪಡೆಯುತ್ತಿದ್ದರು. ಪ್ರಾರಂಭದಲ್ಲಿ ಅವರ ದೇಹದಲ್ಲಿ 44 ಟ್ಯೂಮರ್ ಕಂಡು ಬಂದಿತ್ತು. 2002ರಲ್ಲಿ ಅವರ ಕಿಡ್ನಿಯಲ್ಲಿ ಟ್ಯೂಮರ್ ಕಂಡು ಬಂದಿದೆ. ಕಳೆದ ಹದಿನೆಂಟು ವರ್ಷಗಳಿಂದ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು. ಎಪ್ರಿಲ್ 30ರಂದು ನಡೆಸಿದ ಸ್ಕಾÂನಿಂಗ್‌ನಲ್ಲಿ ಕ್ಯಾನ್ಸರ್ ಪತ್ತೆಯಾಗಿರಲಿಲ್ಲ. ಇದರಿಂದ ರಾಯ್ ಅವರು ಬಹಳ ಸಂತೋಷದಿಂದ ಮನೆಗೆ ತೆರಳಿದ್ದರು ಅಲ್ಲದೆ ಶೀಘ್ರದಲ್ಲಿ ಸೇವೆಗೆ ಮರಳುವುದಾಗಿ ತಿಳಿಸಿದ್ದರು. ಕಳೆದ ಮೂರು ವಾರಗಳ ಹಿಂದೆ ರಾಯ್ ಅವರೊಂದಿಗೆ ಮಾತನಾಡಿದ್ದೆ. ಕ್ಯಾನ್ಸರ್‌ನ್ನು ಗೆದ್ದ ನಾನು ಇತರ ಕ್ಯಾನ್ಸರ್ ಪೀಡಿತರೊಂದಿಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳ ಬೇಕು ಎಂದು ತಿಳಿಸಿ ಬಹಳ ಉತ್ಸಾಹದಿಂದ ಇದ್ದರು ಎಂದು ಡಾ| ರಾಜ್ ನಗರ್ಕರ್ ತಿಳಿಸಿದ್ದಾರೆ. ಹಿಮಾಂಶು ಅವರ ಆತ್ಮಹತ್ಯೆ ಚೀಟಿಯಲ್ಲಿ ಮಾನಸಿಕ ಒತ್ತಡ ಹಾಗೂ ಕ್ಯಾನ್ಸರ್‌ನಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದೇನೆ ಎಂದು ತಿಳಿಸಲಾಗಿದೆ. ಕಳೆದ 18 ವರ್ಷಗಳಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇದೀಗ ಕ್ಯಾನ್ಸರ್‌ನಿಂದ ಮುಕ್ತರಾಗುವ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ದುರಂತ ವಾಗಿದೆ. ಇದು ಹಲವಾರು ಅನು ಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ ಎಂದು ಪುಣೆಯ ಮೆಡಿಕಲ್ ಆಂಕಾಲಜಿಸ್ಟ್ ಡಾ| ಅನಂತ್ ಭೂಷಣ್ ರಾನಡೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.