ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಮೊದಲ ಹಂತದ 68 ಕ್ಷೇತ್ರಗಳಲ್ಲಿ ಶನಿವಾರ (ನವೆಂಬರ್ 12) ಶಾಂತಿಯುತ ಮತದಾನ ನಡೆದಿದೆ. ಗುಡ್ಡಗಾಡು ಪ್ರದೇಶದ ಮತದಾರರು ಚುನಾವಣೆಯಲ್ಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಮತ್ತು ಬಿಜೆಪಿಯ ಮಾಜಿ ಅಧ್ಯಕ್ಷ ಸತ್ಪಾಲ್ ಸಿಂಗ್ ಸತ್ತಿ ಸೇರಿದಂತೆ 412 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸಂಜೆ 5 ಗಂಟೆಯವರೆಗೆ 65.92% ಮತದಾನವಾಗಿದೆ.ಸಿರ್ಮೋರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 72.35ರಷ್ಟು ಮತದಾನವಾಗಿದ್ದು,ಉನಾದಲ್ಲಿಶೇ 68.48 ಮತ್ತು ಲಹೌಲ್ ಮತ್ತು ಸ್ಪಿತಿಯಲ್ಲಿ ಶೇ 67.5 ರಷ್ಟು ಮತದಾನವಾಗಿದೆ.
ಗುಡ್ಡಗಾಡು ರಾಜ್ಯದ 68 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿಲ್ಲೈನಲ್ಲಿ ಅತಿ ಹೆಚ್ಚು ಶೇಕಡ 77ರಷ್ಟು ಮತದಾನವಾಗಿದ್ದು, ಸರ್ಕಾಘಾಟ್‌ನಲ್ಲಿ ಅತಿ ಕಡಿಮೆ ಶೇಕಡ 55.40ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಲಾಹೌಲ್ ಮತ್ತು ಸ್ಪಿತಿಯ ತಾಶಿಗಂಗ್‌ನಲ್ಲಿರುವ ವಿಶ್ವದ ಅತಿ ಎತ್ತರದ ಮತಗಟ್ಟೆ ಬೂತ್‌ನಲ್ಲಿ ಶನಿವಾರ 98.08% ಮತದಾನವಾಗಿದೆ. 52 ನೋಂದಾಯಿತ ಮತದಾರರಲ್ಲಿ, 51 ಮಂದಿ ಹಿಮಾಚಲ ಪ್ರದೇಶದಲ್ಲಿ ಮತದಾನದ ನಡುವೆ ಹೊಸ ರಾಜ್ಯ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ.
105 ವರ್ಷ ವಯಸ್ಸಿನ ಮತದಾರೆ ನರೋ ದೇವಿ, ಚುರಾ ಅಸೆಂಬ್ಲಿ ಕ್ಷೇತ್ರದಲ್ಲಿ ಮತ ಚಲಾಯಿಸಿ ಯುವ ಜನತೆಗೆ ಮಾದರಿಯಾಗಿದ್ದಾರೆ.