ನವದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭೆಯ 68 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 413 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಾಗಿ ಕಣಕ್ಕಿಳಿದಿದ್ದಾರೆ. ಏತನ್ಮಧ್ಯೆ ರಾಜಸ್ಥಾನ ಚುನಾವಣಾ ಕಾವಲು ಸಮಿತಿ(ಎಡಿಆರ್) ಬಿಡುಗಡೆ ಮಾಡಿರುವ ವರದಿಯಲ್ಲಿ ಅಭ್ಯರ್ಥಿಗಳ ಆದಾಯ, ಅಪರಾಧ ಹಿನ್ನೆಲೆ ಬಹಿರಂಗಗೊಂಡಿದೆ.
ಇದನ್ನೂ ಓದಿ:ಸಕ್ಕರೆ ಆರತಿ ಮಾಡುವವರು ಈಗ ಫುಲ್ ಬ್ಯುಸಿ: ಕಣ್ಮರೆಯಾಗುತ್ತಿದೆ ಸಂಪ್ರದಾಯ
ಶ್ರೀಮಂತ ಶಾಸಕ ಯಾರು?
ವರದಿಯ ಪ್ರಕಾರ, ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಂದಾಜು ಶೇ.23ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ. ಕಳೆದ ಐದು ವರ್ಷಗಳಲ್ಲಿ 58 ಶಾಸಕರ ಪೈಕಿ 49 ಶಾಸಕರ ಆದಾಯ ಹೆಚ್ಚಳವಾಗಿದೆ. ಚೌಪಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶಾಸಕ ಬಲ್ಬೀರ್ ಸಿಂಗ್ ವರ್ಮಾ ಶ್ರೀಮಂತ ಶಾಸಕರಾಗಿದ್ದಾರೆ. 2017ರಲ್ಲಿ ವರ್ಮಾ ಒಟ್ಟು ಆಸ್ತಿ 90.73 ಕೋಟಿ ರೂಪಾಯಿಯಷ್ಟಿದ್ದು, ಈ ಬಾರಿ ಅವರ ಆದಾಯ 128.45 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
Related Articles
ಶಾಸಕರ ಆದಾಯ ಹೆಚ್ಚಳ:
ಮಾಂಡಿ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಶರ್ಮಾ 2017ರಲ್ಲಿ ಸಲ್ಲಿಸಿದ ಅಫಿಡವಿತ್ ನಲ್ಲಿ ಒಟ್ಟು ಆಸ್ತಿ ಮೌಲ್ಯ 40.24 ಕೋಟಿ ರೂಪಾಯಿಯಾಗಿತ್ತು. ಈ ಬಾರಿಯ ಆದಾಯ 57.84 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಾಂಗ್ರೆಸ್ ಶಾಸಕರಾದ ವಿಕ್ರಮಾದಿತ್ಯ ಸಿಂಗ್ ಮತ್ತು ಅಶೀಶ್ ಬುಟೆಲ್ಸ್ ಆದಾಯ ಕೂಡಾ ಹೆಚ್ಚಳವಾಗಿದೆ. ಅಷ್ಟೇ ಅಲ್ಲ ಬಿಜೆಪಿ ಐವರು, ಕಾಂಗ್ರೆಸ್ ನ 4 ಶಾಸಕರ ಆದಾಯ ಏರಿಕೆಯಾಗಿರುವುದಾಗಿ ವರದಿ ತಿಳಿಸಿದೆ.
ಮತ್ತೊಂದೆಡೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಮಂಗಳವಾರ (ನ.08) ಕಾಂಗ್ರೆಸ್ ಪಕ್ಷದ 26 ಮುಖಂಡರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.