Advertisement

ಹಿಮಾಚಲ : ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾದ ಬಂಡಾಯ

02:47 PM Dec 09, 2022 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದೆ.

Advertisement

ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಬಂಡಾಯಗಾರರು ಎಂಟು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ನಿರೀಕ್ಷೆಯನ್ನು ಹಾಳುಮಾಡಿದರೆ, ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೊಡೆತ ಬಿದ್ದಿದೆ.

ಕಣದಲ್ಲಿದ್ದ ಒಟ್ಟು 99 ಸ್ವತಂತ್ರರ ಪೈಕಿ 28 ಮಂದಿ ಬಂಡಾಯ ಅಭ್ಯರ್ಥಿಗಳಾಗಿದ್ದರು. ನಲಗಢದಿಂದ ಕೆ ಎಲ್ ಠಾಕೂರ್, ಡೆಹ್ರಾದಿಂದ ಹೋಶಿಯಾರ್ ಸಿಂಗ್ ಮತ್ತು ಹಮೀರ್‌ಪುರದಿಂದ ಆಶಿಶ್ ಶರ್ಮಾ ಗೆದ್ದ ಮೂವರು ಪಕ್ಷೇತರರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿದ್ದರು. ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಲಾಗಿತ್ತು. ಠಾಕೂರ್ ಅವರು 2012 ರಲ್ಲಿ ಗೆದ್ದಿದ್ದರು ಆದರೆ 2017 ರಲ್ಲಿ ಸೋತಿದ್ದರು ಮತ್ತು ಬಿಜೆಪಿಯು ಎರಡು ಅವಧಿಯ ಕಾಂಗ್ರೆಸ್ ಶಾಸಕರಾಗಿದ್ದ ಲಖ್ವಿಂದರ್ ಸಿಂಗ್ ರಾಣಾ ಅವರನ್ನು ಚುನಾವಣಾ ಕಣಕ್ಕೆ ಇಳಿಸಿತ್ತು.

ಡೆಹ್ರಾದಿಂದ ಹಾಲಿ ಸ್ವತಂತ್ರ ಶಾಸಕ ಸಿಂಗ್, ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು ಆದರೆ ಪಕ್ಷವು ರಮೇಶ್ ಧವಾಲಾಗೆ ಟಿಕೆಟ್ ನೀಡಿತು ಮತ್ತು ಹಮೀರ್‌ಪುರದಿಂದ ಆಶಿಶ್ ಶರ್ಮಾ ಕೂಡ ಬಿಜೆಪಿ ಬಂಡಾಯಗಾರರಾಗಿದ್ದರು.

ಬಂಡಾಯ ಅಭ್ಯರ್ಥಿಗಳು ಕಿನ್ನೌರ್, ಕುಲು, ಬಂಜಾರ್, ಇಂದೋರಾ ಮತ್ತು ಧರ್ಮಶಾಲಾದಲ್ಲಿ ಬಿಜೆಪಿಯ ಗೆಲುವನ್ನು ಕಸಿದರೆ,ಪಚ್ಚಾಡ್, ಚೋಪಾಲ್, ಅನ್ನಿ ಮತ್ತು ಸುಲಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಅವಕಾಶಕ್ಕೆ ಅಡ್ಡಿಯಾಯಿತು.

Advertisement

ಸ್ವತಂತ್ರ ಮತ್ತು ಇತರ ಸಣ್ಣ ಪಕ್ಷಗಳ ಒಟ್ಟು ಮತಗಳ ಪ್ರಮಾಣವು 10.39 ಶೇಕಡಾವಾಗಿದೆ. ಕಿನ್ನೌರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗತ್ ಸಿಂಗ್ ನೇಗಿ ಅವರ ಗೆಲುವಿನ ಅಂತರಕ್ಕಿಂತ (6,964) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿಯ ಮಾಜಿ ಶಾಸಕ ತೇಜವಂತ್ ನೇಗಿ ಶೇ.19.25ರಷ್ಟು (8,574) ಮತಗಳನ್ನು ಪಡೆದು ಬಿಜೆಪಿ ಅಧಿಕೃತ ಅಭ್ಯರ್ಥಿ ಸೂರತ್ ನೇಗಿ ಸೋಲಿಗೆ ಕಾರಣರಾದರು.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ರಾಮ್ ಸಿಂಗ್ ಶೇಕಡಾ 16.77 ಮತಗಳನ್ನು (11,937 ಮತಗಳು) ಪಡೆದರೆ, ಬಿಜೆಪಿ ಅಭ್ಯರ್ಥಿ ನರೋತಮ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ಸುರೇಂದರ್ ಠಾಕೂರ್ ವಿರುದ್ಧ 4,103 ಮತಗಳಿಂದ ಸೋಲನ್ನು ಒಪ್ಪಿಕೊಂಡರು.

ಬಿಜೆಪಿ ನಾಯಕ ಮಹೇಶ್ವರ್ ಸಿಂಗ್ ಅವರ ಪುತ್ರ ಹಿತೇಶ್ವರ್ ಸಿಂಗ್ ಶೇಕಡಾ 24.12 ಮತಗಳನ್ನು (14,568) ಪಡೆದು ಬಿಜೆಪಿ ಅಭ್ಯರ್ಥಿ ಖಿಮಿ ರಾಮ್ ಅವರನ್ನು 4,334 ಮತಗಳಿಂದ ಸೋಲಿಸುವ ಮೂಲಕ ಕುಲುವಿನ ಸನ್ನಿವೇಶವು ಭಿನ್ನವಾಗಿರಲಿಲ್ಲ.ಧರ್ಮಶಾಲಾದಲ್ಲಿ, ಬಿಜೆಪಿ ಬಂಡಾಯ ಅಭ್ಯರ್ಥಿ ವಿಪನ್ ನೆಹೆರಿಯಾ ಅವರು ಶೇಕಡಾ 12.36 ಮತಗಳನ್ನು (7,416) ಪಡೆದರು, ಇದು ಕಾಂಗ್ರೆಸ್ ಅಭ್ಯರ್ಥಿ ಸುಧೀರ್ ಶರ್ಮಾ ಅವರ ಗೆಲುವಿನ ಅಂತರಕ್ಕಿಂತ (3,285) ಹೆಚ್ಚು. ಸುಳ್ಯ ಮತ್ತು ಅನ್ನಿಯಲ್ಲಿ ಪರಿಸ್ಥಿತಿ ಭಿನ್ನವಾಗಿರಲಿಲ್ಲ, ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬಂಡಾಯಗಾರರ ನಡುವೆ ಸ್ಪರ್ಧೆ ಇತ್ತು ಮತ್ತು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳು ಮೂರನೇ ಸ್ಥಾನಕ್ಕೆ ತಳ್ಳಲ್ ಪಟ್ಟರು.

68 ಸ್ಥಾನಗಳ ಪೈಕಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆದ್ದು ಸರಕಾರ ರಚಿಸಲು ಸಿದ್ಧತೆ ನಡೆಸಿದ್ದು, ಆಡಳಿತ ನಡೆಸುತ್ತಿದ್ದ ಬಿಜೆಪಿ 25 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಹುಮತಕ್ಕೆ 35 ಸ್ಥಾನಗಳು ಅಗತ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next