ಭಾರತೀಯರು ಟ್ರ್ಯಾಕ್ ಇವೆಂಟ್‌ಗಳಲ್ಲಿ ಪದಕವೇ ಇಲ್ಲ ಎಂದು ಪರಿತಪ್ಪಿಸುತ್ತಿರುವ ಕಾಲದಲ್ಲಿ ಹುಟ್ಟಿದ ಅಸಮಾನ್ಯ ಪ್ರತಿಭೆಯೇ ಹಿಮಾ ದಾಸ್. ಈಕೆಗೆ ಈಕೆಯೇ ಸಾಟಿ. ಅಸ್ಸಾಂನ ಬಡ ಕುಟುಂಬದಲ್ಲಿ ಹುಟ್ಟಿ. ಅದರಲ್ಲೂ ಅಥ್ಲೆಟಿಕ್ಸ್‌ಗೆ ಬಂದ ಕೇವಲ 18 ತಿಂಗಳಲ್ಲೇ ಕಿರಿಯರ ವಿಶ್ವ ಚಾಂಪಿಯನ್‌ಶಿಪ್‌ನ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದು. ಎಲ್ಲರು ತನ್ನತ್ತ ತಿರುಗಿ ಮಾಡಿದ ದಿಟ್ಟೆ ಭಾರತೀಯ ನಾರಿ.
ಸುಮಾರು ವರ್ಷಗಳ ಹಿಂದೆ ಟ್ರ್ಯಾಕ್ ಇವೆಂಟ್‌ಗಳಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ತಂದುಕೊಟ್ಟಿದು ಮಿಲಾV ಸಿಂಗ್. ಇವರ ಬಳಿಕ ಭಾರತಕ್ಕೆ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಪದಕ ತಂದುಕೊಟ್ಟವರು ಯಾರೂ ಇರಲಿಲ್ಲ. ಕೆಲವು ದಿನಗಳ ಹಿಂದೆ ಈ ಕುರಿತಂತೆ ಅಥ್ಲೆಟಿಕ್ಸ್ ದಿಗ್ಗಜ ಮಿಲಾV ಸಿಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಬೇಸರವನ್ನು ಕೂಡ ವ್ಯಕ್ತಪಡಿಸಿದ್ದರು. ಟ್ರ್ಯಾಕ್‌ನಲ್ಲಿ ಪದಕ ಗೆಲ್ಲಬಲ್ಲ ಅಥ್ಲೀಟ್‌ಗಳನ್ನು ಕಾಣುವುದು ನನ್ನ ಕನಸು ಎಂದಿದ್ದರು. ಈ ಕನಸನ್ನು ಹಿಮಾ ದಾಸ್ ಈಗ ನನಸು ಮಾಡಿದ್ದಾರೆ. ಮುಂಬರುವ ಒಲಿಂಪಿಕ್ಸ್‌ನಲ್ಲಿ ಹಿಮಾ ದಾಸ್ ಚಿನ್ನದ ನಗು ಚೆಲ್ಲುವ ಭರವಸೆಯನ್ನು ಭಾರತೀಯರಲ್ಲಿ ಮೂಡಿಸಿದ್ದಾರೆ.
ಅಸ್ಸಾಂನ ಭತ್ತದ ಹುಡುಗಿ: ಹಿಮಾ ದಾಸ್ ಅಸ್ಸಾಂನವರು. ಭತ್ತ ಬೆಳೆಯುವ ರೈತನ ಮಗಳು. ಹುಟ್ಟಿದ್ದು 2000 ಜ.9ಕ್ಕೆ. ಫಿನ್‌ಲಾÂಂಡ್‌ನ ತಾಂಪೆರೆ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನ 400 ಮೀ. ವೈಯಕ್ತಿಕ ವಿಭಾಗದ ಓಟದಲ್ಲಿ ಹಠಾತ್ ಚಿನ್ನದ ಪದಕ ಗೆದ್ದರು. ಭಾರತಕ್ಕೆ ಕಿರಿಯರ ಕೂಟದಲ್ಲಿ ಪದಕ ಗೆದ್ದುಕೊಟ್ಟ ಮೊದಲ ಭಾರತೀಯೆ ಎನ್ನುವ ದಾಖಲೆಯನ್ನೂ ನಿರ್ಮಿಸಿದ್ದರು. ಆಗಲೇ ವಿಶ್ವಕ್ಕೆ ಹಿಮಾ ದಾಸ್ ಎಂದರೆ ಯಾರು ಎಂದು ಗೊತ್ತಾಗಿದ್ದು.
ಕಾಮನ್ವೆಲ್ತ್‌ನಲ್ಲಿ ಚಿನ್ನ ಮಿಸ್: ಹಿಮಾ ದಾಸ್ ಕಾಮನ್‌ವೆಲ್ತ್‌ನಲ್ಲಿ ಪಾಲ್ಗೊಂಡಿದ್ದರು. 400 ಮೀ. ವೈಯಕ್ತಿಕ ವಿಭಾಗದಲ್ಲಿ 51.32 ಸೆಕೆಂಡ್ಸ್‌ನಲ್ಲಿ ಗುರಿ ಸೇರಿ 6ನೇ ಸ್ಥಾನಕ್ಕೆ ತೃಪ್ತಿಕೊಟ್ಟವರು. ಆದರೆ ಕಿರಿಯರ ಕೂಟದಲ್ಲಿ 400 ಮೀ. ಓಟವನ್ನು 51.46 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಚಿನ್ನ ಕೊರಳಿಗೇರಿಸಿಕೊಂಡರು.
ಹೇಮಂತ್ ಸಂಪಾಜೆ