Advertisement
ಕಸ್ತೂರ್ಬಾ ನಗರ ವಾರ್ಡ್‌ನಲ್ಲಿ ಚರಂಡಿ ಹೂಳೆತ್ತುವ ಕಾರ್ಯ ನಡೆದಿಲ್ಲ. ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಿಲ್ಲ. ಕುದ್ಮಾರು ಶಾಲೆಗೆ ತೆರಳುವ ರಸ್ತೆಯುದ್ದಕ್ಕೂ ಬದಿಗಳಲ್ಲಿ ಮರಗಳಿದ್ದು, ಅವುಗಳ ಬುಡ ಸವೆದು ಉರುಳಿ ಬೀಳಲು ಸಿದ್ಧವಾಗಿವೆ. ಬಿಸಿಎಂ ಕಾಲನಿ ರಸ್ತೆಯಲ್ಲಿ ಬ್ರಹತ್ ಗಾತ್ರದ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಮರ ಮಗುಚಿ ಬಿದ್ದಲ್ಲಿ ಈ ಭಾಗದಲ್ಲಿ ಹಾದುಹೋದ ಹಲವು ವಿದ್ಯುತ್ ಕಂಬಗಳಿಗೆ ಹಾನಿ ಉಂಟು ಮಾಡಲಿದೆ. ಈ ರಸ್ತೆಯಲ್ಲಿ ನಿತ್ಯ ಹಲವರು ಓಡಾಡುತ್ತಿದ್ದು, ಭೀತಿ ಆವರಿಸಿದೆ.
ಡಿಸಿಎಂ ಕಾಲನಿ ಸನಿಹದಲ್ಲಿ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ ರಸ್ತೆ ಬದಿಯ ಮಣ್ಣನ್ನು ಇನ್ನೂ ತೆರವುಗೊಳಿಸಿಲ್ಲ. ರಸ್ತೆ ಬದಿಗಳ ಸ್ಲಾಬ್‌ಗಳು ಬಿರುಕು ಬಿಟ್ಟಿವೆ. ಪಾದಚಾರಿಗಳು, ವಾಹನಗಳು ಅಪಾಯಕ್ಕೆ ಸಿಲುಕಿದ ಉದಾ ಹರಣೆಗಳಿವೆ. ವಾರ್ಡ್‌ನಲ್ಲಿ ಕಾರ್ಮಿಕ ಕಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಟ್ರೀ ಕಟ್ಟಿಂಗ್ ನಡೆದಿಲ್ಲ
ವಾರ್ಡ್ ವ್ಯಾಪ್ತಿಯಲ್ಲಿ ಅಳವಡಿಸಿರುವ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಸಣ್ಣ ಗಾಳಿ ಮಳೆ ಬಂದರೂ ವಿದ್ಯುತ್ ವ್ಯತ್ಯಯವಾಗುತ್ತದೆ. ಮೆಸ್ಕಾಂ ರಸ್ತೆಯ ಇಕ್ಕೆಲಗಳಲ್ಲಿ “ಟ್ರೀ’ ಕಟ್ಟಿಂಗ್ ಇನ್ನೂ ನಡೆಸಿಲ್ಲ. ಬುಡ್ನಾರು ಶಾಲೆ ಬಳಿ ಮರಗಳಿರುವ ಕೆಳಭಾಗದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮರಗಳು ಬಾಗಿ ಅದರ ಮೇಲೆ ಬೀಳುವ ಹಂತಕ್ಕೆ ತಲುಪಿವೆ.
Related Articles
ವಾರ್ಡ್‌ನ ವಿವಿಧ ಭಾಗಗಳಲ್ಲಿ ಬಡ ಕುಟುಂಬಗಳು ವಾಸಿಸುತ್ತಿವೆ. ಕಾಲನಿಗಳೂ ಇವೆ. ಸ್ಥಳೀಯ ನಿವಾಸಿಗಳಲ್ಲಿ ಕೆಲವರು ಸೂರು ವಂಚಿತರೂ ಇದ್ದಾರೆ. ಸುಮಾರು ಏಳೆಂಟು ಮಂದಿ ಸೂರಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಮನೆಗಳ ದುರಸ್ತಿಯಾಗದೇ ಅನೇಕ ಕುಟುಂಬಗಳು ಹಳೆಯ ಮನೆಗಳಲ್ಲಿ ಈಗ ವಾಸವಾಗಿವೆ. ಮಳೆಗಾಲದಲ್ಲಿ ಹೇಗೆ ಜೀವನ ನಡೆಸುವುದು ಎನ್ನುವ ಆತಂಕ ಅವರೆಲ್ಲರನ್ನು ಕಾಡುತ್ತಿದೆ.
Advertisement
30 ಮನೆಗಳಿಗೆ ಕೃತಕ ನೆರೆ ಭೀತಿಡಯಾನ-ಎಂಜಿಎಂ ರಸ್ತೆಯ ಪಕ್ಕದಲ್ಲಿ ಹೊಳೆಯೊಂದು ಹರಿಯುತ್ತಿದೆ. ಇದು ಮುಂದಕ್ಕೆ ಕಲ್ಸಂಕ ಬಳಿ ಇಂದ್ರಾಣಿ ನದಿ ಸೇರುತ್ತದೆ. ಹೊಳೆಯಲ್ಲಿ ತುಂಬಿದ ಹೂಳು ತೆರವುಗೊಳಿಸಿಲ್ಲ. ಹೊಳೆಯಲ್ಲಿ ಎಂಟಕ್ಕೂ ಅಧಿಕ ತೆಂಗಿನ ಮರಗಳು ಬಿದ್ದುಕೊಂಡಿವೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗದೆ ಕೃತಕ ನೆರೆ ಸೃಷ್ಟಿಯಾಗುತ್ತದೆ. ಇದು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿ ಸಮಸ್ಯೆ ಉಂಟಾಗುತ್ತದೆ. ಮಳೆಗಾಲ ಬಂತೆಂದರೆ ನಡುಕ
ಕಳೆದ ಬಾರಿಯ ಮಳೆಗಾಲ ಇಲ್ಲಿ ಭಾರೀ ಸಮಸ್ಯೆ ಸೃಷ್ಟಿಸಿತ್ತು. ಹೊಳೆ ಬದಿಯಲ್ಲಿ ಕೆಲವು ಮನೆಯ ಫೌಂಡೇಶನ್‌ವರೆಗೆ ಮಳೆ ನೀರು ಬರುತ್ತದೆ. ಕೆಲವು ಮನೆಗಳು ಮುಳುಗಡೆಯಾಗುತ್ತವೆ. ಈ ಬಾರಿ ಕೂಡ ಅದೇ ಭೀತಿಯಲ್ಲಿ ನಿವಾಸಿಗಳಿದ್ದಾರೆ. ತೋಡಿನ ಬದಿಯಲ್ಲಿ 30ಕ್ಕೂ ಅಧಿಕ ಮನೆಗಳಿದ್ದು, ಮಳೆಗಾಲ ಬಂತು ಎನ್ನುವಾಗ ಅವರಿಗೆ ನಡುಕ ಶುರುವಾಗುತ್ತದೆ. ಲಿಖಿತ ಮಾಹಿತಿ ಸಲ್ಲಿಕೆ
ವಾರ್ಡ್ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಬಗ್ಗೆ ನಗರಸಭೆಗೆ ಲಿಖಿತವಾಗಿ ತಿಳಿಸಿದ್ದೇನೆ. ಕೆಲವು ತುರ್ತು ಕಾಮಗಾರಿ ನಡೆದಿವೆ. ಮುಖ್ಯವಾಗಿ ರಸ್ತೆ ಬದಿಗಳ ಅಪಾಯಕಾರಿ ಮರ ತೆರವು ಹಾಗೂ ತೋಡಿನ ಹೂಳೆತ್ತುವ ಕೆಲಸ ಮಳೆ ಆರಂಭವಾಗುವ ಮೊದಲೇ ಆಗಬೇಕಿದೆ.
– ರಾಜು, ಕಸ್ತೂರ್ಬಾ ನಗರ ವಾರ್ಡ್ ಸದಸ್ಯ ಚರಂಡಿಯಲ್ಲಿ ಹೂಳು
ಚರಂಡಿಯ ಕೆಲವು ಕಡೆಗಳಲ್ಲಿ ಹೂಳು ತುಂಬಿಕೊಂಡಿದೆ. ಸಾಧಾರಣ ಮಳೆಗೆ ಸಮಸ್ಯೆಯಾಗದಿದ್ದರೂ ದೊಡ್ಡ ಮಳೆ ಸಮಸ್ಯೆ ತರಬಹುದು.
– ರಾಧಾಕೃಷ್ಣ ಕೆ.ಜಿ., ಸ್ಥಳಿಯ ನಿವಾಸಿ