ನಿಧಾನವಾಗಿ ಗತ ವೈಭವವನ್ನು ಕಳೆದುಕೊಂಡ ಹಾಕಿಯನ್ನು ಮುಖ್ಯ ಭೂಮಿಕೆಗೆ ತರಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹಾಕಿ ಸಂಸ್ಥೆ 2013ರಿಂದ ಆಯೋಜಿಸುತ್ತಿರುವ ಹಾಕಿ ಇಂಡಿಯಾ ಲೀಗ್ ತನ್ನದೇ ಛಾಪನ್ನು ಮೂಡಿಸುತ್ತಿದೆ.
ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) 2017 ಯಶಸ್ವಿಯಾಗಿ ಮುಕ್ತಾಯವಾಗಿದೆ. ಭಾರತೀಯ ಹಾಕಿ ಸಂಸ್ಥೆ ಆಯೋಜಿಸಿದ ಈ ಲೀಗ್ ದೇಶದಲ್ಲಿ ಯುವ ಆಟಗಾರರನ್ನು ಹುಟ್ಟುಹಾಕಿದೆ. ಜತೆಗೆ ಹಾಕಿಯತ್ತ ಕ್ರೀಡಾಭಿಮಾನಿಗಳನ್ನು ಆಕರ್ಷಿಸುವಲ್ಲಿ ಯಶಸ್ಸು ಕಂಡಿದೆ.
ಭಾರತದಲ್ಲಿ ಹಾಕಿ ಒಂದು ಕಾಲಕ್ಕೆ ದೇಶದ ಕಿಚ್ಚು, ಕೀರ್ತಿ, ಹಿರಿಮೆಯಾಗಿತ್ತು. ಭಾರತವೆಂದರೆ ಹಾಕಿ, ಹಾಕಿ ಎಂದರೆ ಭಾರತ ಎನ್ನುವ ಕಾಲವೊಂದಿತ್ತು. ಅಷ್ಟರ ಮಟ್ಟಿಗೆ ಭಾರತ ಬಲಿಷ್ಠ ತಂಡವಾಗಿ ವಿಶ್ವದ ಎಲ್ಲ ತಂಡಗಳನ್ನು ಹೆಡೆಮುರಿ ಕಟ್ಟಿ ಹಾಕಿತ್ತು. ಕಾಲಕ್ರಮೇಣ ತನ್ನ ವೈಭವವನ್ನು ಕಳೆದುಕೊಂಡಿತು. ಆ ಸ್ಥಾನವನ್ನು ಭಾರತದಲ್ಲಿ ಕ್ರಿಕೆಟ್ ತನ್ನದಾಗಿಸಿಕೊಂಡಿತು. ಈಗಿನ ಸ್ಥಿತಿಯಲ್ಲಿ ಭಾರತದಲ್ಲಿ ಕ್ರಿಕೆಟ್‌ಗಿರುವ ಪ್ರಚಾರ ಹಾಕಿಗಿಲ್ಲ.
ನಿಧಾನವಾಗಿ ಗತ ವೈಭವವನ್ನು ಕಳೆದುಕೊಂಡ ಹಾಕಿಯನ್ನು ಮುಖ್ಯ ಭೂಮಿಕೆಗೆ ತರಲು ಹಲವು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಹಾಕಿ ಸಂಸ್ಥೆ 2013ರಿಂದ ಆಯೋಜಿಸುತ್ತಿರುವ ಹಾಕಿ ಇಂಡಿಯಾ ಲೀಗ್ ತನ್ನದೇ ಛಾಪನ್ನು ಮೂಡಿಸುತ್ತಿದೆ. ಈ ವರ್ಷ ಜನವರಿ 21ರಿಂದ ಫೆಬ್ರವರಿ 26ರ ವರೆಗೆ ನಡೆದ ಲೀಗ್‌ನಲ್ಲಿ ಕಳಿಂಗ ಲ್ಯಾನ್ಸರ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಬಾಂಗ್ ಮುಂಬೈ ರನ್ನರ್ ಅಪ್ ಸ್ಥಾನ ಪಡೆದಿದೆ.
ಈ ಬಾರಿ ಕೂಟದಲ್ಲಿ ಕಳಿಂಗ ಲ್ಯಾನ್ಸರ್, ದಬಾಂಗ್ ಮುಂಬೈ, ಉತ್ತರ ಪ್ರದೇಶ ವಿಜಾರ್ಡ್ಸ್,
ದೆಹಲಿ ವೇವ್‌ರೈಡರ್, ರಾಂಚಿ ರಾಯ್ಸ, ಪಂಜಾಬ್ ವಾರಿಯರ್ ಪಾಲ್ಗೊಂಡಿದ್ದವು. ಈ ಎಲ್ಲಾ ತಂಡದಲ್ಲಿಯೂ ಭಾರತೀಯ ಯುವ ಆಟಗಾರರು ಮಿಂಚಿರುವುದು ವಿಶೇಷ.
ಪ್ರಶಾಂತ ಕೆ.ಪಿ.