Advertisement

ಬೆಳೆ ಹಾನಿ ಪರಿಹಾರಕ್ಕೆ ಹೈಕ ರೈತ ಸಂಘ ಒತ್ತಾಯ

11:43 AM Sep 01, 2017 | Team Udayavani |

ಆಳಂದ: ಪ್ರಸಕ್ತ ಸಾಲಿನ ಹಾಳಾದ ಉದ್ದು, ಹೆಸರು ಬೆಳೆಗೆ 10 ಸಾವಿರ ರೂ. ಪರಿಹಾರ ನೀಡುವುದು
ಸೇರಿದಂತೆ ಒಟ್ಟು 10 ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಹೈಕ ರೈತ ಸಂಘದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಬಸ್‌ನಿಲ್ದಾಣದಿಂದ ಪ್ರಮುಖ ರಸ್ತೆಗಳ ಮೂಲಕ ತಹಶೀಲ್ದಾರ ಕಚೇರಿ ವರೆಗೆ ಹಮ್ಮಿಕೊಂಡ ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ ಕಚೇರಿ ವರೆಗೆ ತಲುಪಿದ ಬಳಿಕ ಮುಖಂಡರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಸಂಸ್ಥಾಪಕ ಅಧ್ಯಕ್ಷ ದಯಾನಂದ ಪಾಟೀಲ, ಕಾರ್ಯದರ್ಶಿ ಡಿ.ಬಿ. ನಾಯಕ, ಉಪಾಧ್ಯಕ್ಷ ಆದಿನಾಥ ಹೀರಾ, ತಾಲೂಕು ಅಧ್ಯಕ್ಷ ರಾಜಶೆಖರ ಹರಿಹರ ಖಜೂರಿ ಮಾತನಾಡಿದರು.

ದೇಶದಲ್ಲಿ 14 ಸಾವಿರ ರೈತರ ಆತ್ಮಹತ್ಯೆ ನಡೆದರೂ ಕೇಂದ್ರ ಸರ್ಕಾರ ಸುಮ್ಮನೆ ಕುಳಿತಿರುವುದು ಸರಿಯಲ್ಲ. ಸಾಲಮನ್ನಾ ಮಾಡಿ ರೈತರ ಸರಣಿ ಆತ್ಮಹತ್ಯೆ ತಡೆಯಬೇಕು.

ರಾಜ್ಯ ಸರ್ಕಾರ 50 ಸಾವಿರ ರೂ. ಸಾಲಮನ್ನಾ ಮಾಡಿ ಎರಡು ತಿಂಗಳಾದರೂ ರೈತರ ಖಾತೆಗಳಿಗೆ ಹಣ ಜಮಾ ಮಾಡಿಲ್ಲ. ರಾಜ್ಯದಲ್ಲಿ ಎರಡು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಲ್ಲಿ ದೊಡ್ಡ ಬರಗಾಲವಿತ್ತು. ಆಗ ರೈತರ ಸಾಲಮನ್ನಾ ಮಾಡಿದ್ದರೆ 1500
ರೈತರ ಜೀವ ಉಳಿಯತ್ತಿತ್ತು. ಈಗ ಮಾಡಿದ ಸಾಲಮನ್ನಾಕ್ಕೆ ಕೂಡಲೇ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

Advertisement

ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಅನೇಕ ರೈತರಿಗೆ ಸಿಕ್ಕಿಲ್ಲ. ಕೂಡಲೇ ಹಣ ನೀಡಬೇಕು. ಸ್ವಾಮಿನಾಥನ್‌ ವರದಿ ಜಾರಿಗೊಳಿಸಬೇಕು. ಪ್ರತಿಟನ್‌ ಕಬ್ಬಿಗೆ 3500 ರೂ. ಸಕ್ಕರೆ ಕಾರ್ಖಾನೆಗಳು ಕೊಡಬೇಕು. ಬಾಕಿ ಹಣ ಪಾವತಿಸಬೇಕು. ಕೃಷಿಹೊಂಡ ಬಿಲ್‌ ಪಾವತಿಗೆ ಕ್ರಮಕೈಗೊಳ್ಳಬೇಕು ಎಂದು
ಒತ್ತಾಯಿಸಿದರು.

ಮಹಿಳಾ ಘಟಕದ ಉಪಾಧ್ಯಕ್ಷೆ ಭಾರತಿಬಾಯಿ ಜಿವಣಗಿ, ಯುಗಾಂತ್ರಿ ದೇಶಮಾನೆ, ಸಿದ್ಧರಾಮ ಹೆಬಳಿ, ಶ್ರೀಮಂತರಾವ್‌ ಪಾಟೀಲ, ಮಹಾಂತಯ್ಯ ಎಸ್‌. ಹಿರೇಮಠ, ಶ್ರೀಶೈಲ ಕೆ. ಭೀಂಪುರೆ, ಮಹಿಳಾ ಅಧ್ಯಕ್ಷೆ ಶಕುಂತಲಾ, ಶೋಭಾರಾಣಿ, ಸಿದ್ಧಮ್ಮ, ನೀಲಮ್ಮ, ಚಂದ್ರಕಾಂತ ಖೋಬರೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next