Advertisement

ಹಿಜಾಬ್‌ ಧರಿಸುವಂತೆ ಪ್ರಚೋದನೆ: ಮೂವರ ಬಂಧನ

09:41 PM Feb 19, 2022 | Team Udayavani |

ಬೆಂಗಳೂರು: ಯಲಹಂಕ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸುವಂತೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೂವರ ವಿರುದ್ಧ ಯಲಹಂಕ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

Advertisement

ಆರೋಪಿಗಳಾದ ಶಿವಾಜಿನಗರದ ನಿವಾಸಿ ಸೈಯ್ಯದ್‌ ಜುನೇದ್‌ (23), ಸೂರಜ್‌ ದೀಪ್ತಾ (29), ಸಚ್ಚಿ ಹೆಗೆª (23) ವಿರುದ್ಧ ಎಫ್‌ಐಅರ್‌ ದಾಖಲಾಗಿದೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಯಲಹಂಕ ಸರ್ಕಾರಿ ಪಿಯು ಹಾಗೂ ಪದವಿ ಕಾಲೇಜು ಬಳಿ ಯಲಹಂಕ ಪಿಎಸ್‌ಐ ಸುನೀಲ್‌ ಕುಮಾರ್‌ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಕಾಲೇಜು ಬಳಿ ನಿಂತಿದ್ದ ಆರೋಪಿಗಳು ಕಾಲೇಜಿಗೆ ಬರುವ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಹಿಜಾಬ್‌ ಧರಿಸಿವಂತೆ ಪ್ರಚೋದನೆ ನೀಡುತ್ತಿದ್ದರು.

ಕಾಲೇಜು ಸುತ್ತಲಿನ ಪ್ರದೇಶದಲ್ಲಿ ಜೋರಾಗಿ ಕೂಗಿಕೊಂಡು ಅಶಾಂತಿ ಉಂಟು ಮಾಡುತ್ತಿದ್ದರು. ಅಲ್ಲದೇ, ತಮ್ಮ ಪರಿಚಿತರಿಗೆ ಕರೆ ಮಾಡಿ ಮತ್ತಷ್ಟು ಜನರನ್ನು ಸ್ಥಳಕ್ಕೆ ಕರೆದುಕೊಂಡು ಬರುವಂತೆ ಮೊಬೈಲ್‌ಗ‌ಳ ಮೂಲಕ ಸೂಚಿಸುತ್ತಿದ್ದರು. ಶಾಂತಿ, ನೆಮ್ಮದಿ ಕದಡುತ್ತಾ ಸಾರ್ವಜನಿಕ ತೊಂದರೆ ನೀಡುತ್ತಿದ್ದರು. ಹೀಗೆ ವರ್ತಿಸದಂತೆ ಆರೋಪಿಗಳಿಗೆ ಎಚ್ಚರಿಕೆ ನೀಡಿದರೂ ಲೆಕ್ಕಿಸದೇ ಹಿಜಾಬ್‌ ಧರಿಸುವಂತೆ ಜೋರಾಗಿ ಕೂಗಾಡುತ್ತಿದ್ದರಿಂದ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next