ಚಿಕ್ಕಮಗಳೂರು: ಹಿಜಾಬ್ ಧರಿಸುವುದು ನಮ್ಮಸಂಸ್ಕೃತಿ. ಅದನ್ನು ಬಿಡಲಾಗದು. ಬೇಕಾದರೆವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡಿ ಎಂದುಮಲೆನಾಡು ವಿದ್ಯಾಸಂಸ್ಥೆಯಲ್ಲಿ ಅಧಿ ಕಾರಿಗಳುಮತ್ತು ಪೋಷಕರು ನಡೆಸಿದ ಸಭೆಯಲ್ಲಿಪೋಷಕರು ತಿಳಿಸಿದರು. ಸಭೆಯಲ್ಲಿ ಮನ್ಸೂರ್ ಮಾತನಾಡಿ,ಬೇರೆಯವರು ಬೇಕಾದರೆ ಕೇಸರಿ ಶಾಲುಹಾಕಿಕೊಂಡು ಬರಲಿ.
ನಾವು ಪ್ರಶ್ನೆ ಮಾಡುವುದಿಲ್ಲ,ಆದರೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವುದನ್ನುತಡೆಯಬೇಡಿ ಎಂದು ಮನವಿ ಮಾಡಿದರು.ಮುಖಂಡ ಸಿ.ಎನ್.ಅಕ್ಮಲ್ ಮಾತನಾಡಿ,ಕರಾವಳಿಯಲ್ಲಿ ಆರಂಭಗೊಂಡ ಹಿಜಾಬ್‌ವಿವಾದ ಈಗ ಕರ್ನಾಟದ ವಿವಿಧ ಜಿಲ್ಲೆಗಳಿಗೆಹರಡಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ತೊಂದರೆ ಏನು ಎಂದು ಪ್ರಶ್ನಿಸಿದರು.ಡಿವೈಎಸ್ಪಿ ಪ್ರಭು ಮಾತನಾಡಿ,ನ್ಯಾಯಾಲಯದ ಆದೇಶವನ್ನು ಸರ್ಕಾರ, ಶಿಕ್ಷಣಸಂಸ್ಥೆಗಳು, ಅಧಿ ಕಾರಿಗಳು, ಸಾರ್ವಜನಿಕರು ಪಾಲಿಸಬೇಕಾಗುತ್ತದೆ.
ಇಲ್ಲದಿದ್ದರೆ ಕೋರ್ಟ್‌ಆದೇಶ ಧಿಕ್ಕರಿಸಿದಂತಾಗುತ್ತದೆ. ಹಾಗಾಗಿ ಪ್ರತಿದಿನ ವಾದ, ಪ್ರತಿವಾದ ನಡೆಯುತ್ತಿದ್ದು, ಅಂತಿಮತೀರ್ಪು ಬರುವವರೆಗೂ ಶಾಂತಿ ಕಾಪಾಡಲುಮುಂದಾಗಬೇಕೆಂದು ಮನವಿ ಮಾಡಿದರು.ಆದೇಶ ಜಾರಿ ಸಮಿತಿಯ ಸೋಮಶೇಖರ್,ತಹಶೀಲ್ದಾರ್ ಕಾಂತರಾಜ್ ಮಾತನಾಡಿ,ಹಿಜಾಬ್‌ಗ ಅವಕಾಶ ಕೋರಿ ವಿದ್ಯಾರ್ಥಿಗಳುಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳುಯಾವುದನ್ನೂ ಸರಿಯಾಗಿ ಅರಿತಿಲ್ಲ, ಹಾಗಾಗಿಪೋಷಕರು ಅವರ ಮನವೊಲಿಸಬೇಕೆಂದು ಕೋರಿದರು. ಎರಡು ತಿಂಗಳು ಕಾಲೇಜಿಗೆರಜೆ ನೀಡುವ ಮೂಲಕ ಆನ್‌ಲೈನ್ ತರಗತಿನಡೆಸಬೇಕೆಂದು ಪೋಷಕರು ಸಲಹೆ ನೀಡಿದರು.ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ|ಡಿ.ಎಲ್.ವಿಜಯಕುಮಾರ್ ಮಾತನಾಡಿ, ಶಿಕ್ಷಣ ಸಂಸ್ಥೆಆರಂಭಗೊಂಡು 60 ವರ್ಷಗಳಾಗಿದ್ದು,ಯಾವ ತಾಪತ್ರಯವೂ ಇರಲಿಲ್ಲ, ತರಗತಿಗಳುಉತ್ತಮ ರೀತಿಯಲ್ಲಿ ನಡೆಯುತ್ತಿದ್ದವು. ಈಗನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು,ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.
ಧರಣಿ ನಿರತ ವಿದ್ಯಾರ್ಥಿಗಳಿಗೆ ಹಾಜರಾತಿನೀಡಬೇಕು. ತರಗತಿಗೆ ಗೈರಾಗುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಮಾಡಬೇಕು.ಇಂಟರ್‌ನಲ್ ಪರೀಕ್ಷೆ ಮುಂದೂಡಬೇಕೆಂಬವಿದ್ಯಾರ್ಥಿಗಳ ಬೇಡಿಕೆಯನ್ನು ಅಲ್ಪಸಂಖ್ಯಾತರವಿಭಾಗದ ಜಿಲ್ಲಾಧ್ಯಕ್ಷ ನಯಾಜ್ ಅಹ್ಮದ್‌ತಿಳಿಸಿದರು. ಅದಕ್ಕೆ ಒಪ್ಪದ ಡಾ| ಡಿ.ಎಲ್.ವಿಜಯಕುಮಾರ್, ಸರ್ಕಾರ ಆಫ್‌ಲೈನ್‌ತರಗತಿ ನಡೆಸಲು ಸೂಚಿಸಿರುವುದರಿಂದ ಆನ್‌ಲೈನ್‌ಗೆ ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು.