Advertisement

ಚಿಕ್ಕಮಗಳೂರಿನಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ: ಪ್ರಾಂಶುಪಾಲರೊಂದಿಗೆ ವಾಗ್ವಾದ

02:45 PM Feb 16, 2022 | Team Udayavani |

ಚಿಕ್ಕಮಗಳೂರು: ನಗರದ ಮೂರು ಖಾಸಗಿ ಕಾಲೇಜುಗಳಲ್ಲಿ ಬುಧವಾರ ಹಿಜಾಬ್ ವಿವಾದ ಭುಗಿಲೆದ್ದಿದೆ. ನಗರದ ರಾಮನಹಳ್ಲಿಯಲ್ಲಿರುವ ಮೌಂಟೆನ್ ವೀವ್ ಕಾಲೇಜು, ಎಸ್ ಪಿಜೆ ಹಾಗೂ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಬುಧವಾರ ಬೆಳಗ್ಗೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿ ಗೇಟಿನ ಎದುರೇ ತಡೆದು ನಿಲ್ಲಿಸಿದ್ದಾರೆ.

Advertisement

ಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬರುವಂತಿಲ್ಲ, ಹಿಜಾಬ್ ತೆಗೆದೇ ಕಾಲೇಜಿಗೆ ಬರುವಂತೆ ಪ್ರಾಂಶುಪಾಲರು, ಶಿಕ್ಷಕರು, ಪೊಲೀಸರು ಮಕ್ಕಳ ಬಳಿ ಮನವಿ ಮಾಡಿಕೊಂಡಿದ್ದು, ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು ಅದನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಮಲೆನಾಡು ವಿದ್ಯಾಸಂಸ್ಥೆ ಎದುರು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಆದರೆ ಕಾಲೇಜು ಸಿಬ್ಬಂದಿ ಹಿಜಾಬ್ ತೆಗೆಯದ ಹೊರತು ಕಾಲೇಜು ತರಗತಿಗೆ ಹಾಜರಾಗಲು ಬಿಡದ ಪರಿಣಾಮ ಕಾಲೇಜು ಅವರಣದಲ್ಲಿ ಮಕ್ಕಳು ಪ್ರಾಂಶುಪಾಲರೊಂದಿಗೆ ವಾಗ್ವಾದ ಕ್ಕಿಳಿದರು.

ಇನ್ನು ಮೌಂಟೆನ್ ವೀವ್ ಕಾಲೇಜು ಎದುರೂ ಈ ಸಂಬಂಧ ವಿದ್ಯಾರ್ಥಿನಿಯರು ಕಾಲೇಜು ಆಡಳಿತದ‌ ನಡುವೆ ಮಾತಿನ ಚಕಮಕಿ‌ ನಡೆದಿದ್ದು, ಈ ವೇಳೆ ನಗರದ ಮಸೀದಿಯೊಂದರ ಗುರುಗಳು ಕಾಲೇಜು ಪ್ರಾಂಶುಪಾಲರೊಮದಿಗೆ ಕೆಲ ಹೊತ್ತು ಚರ್ಚಿಸಿ ಹಿಜಾಬ್ ನೊಂದಿಗೆ ವಿದ್ಯಾರ್ಥಿನಿಯರು ಕಾಲೇಜಿಗೆ ಬರಲು ಅವಕಾಶ ನಿಡಲೇ ಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಅವಕಾಶ ನೀಡದಿದ್ದಲ್ಲಿ ಮಕ್ಕಳನ್ನು ಶಾಲಾ‌ಕಾಲೇಜಿಗೆ ಕಳುಹಿಸಲ್ಲ ಎಂದು ಎಚ್ಚರಿಸಿದರು.

ಇದನ್ನೂ ಓದಿ:ಚಿಂಚೋಳಿ: ಹಿಜಾಬ್ ಧರಿಸಿಕೊಂಡೇ ಕ್ಲಾಸಿಗೆ ಎಂಟ್ರಿಯಾದ ವಿದ್ಯಾರ್ಥಿನಿಯರು

ಆದರೆ ಕಾಲೇಜು ಅಡಳಿತ ಧರ್ಮ ಗುರುಗಳ ಮನವಿಗೆ ಪುರಸ್ಕರಿಸದೇ ನ್ಯಾಯಾಲಯದ ಆದೇಶ ಪಾಲಿಸಬೇಕಿದೆ. ಹಿಜಾಬ್ ತೆಗೆದು ಕಾಲೇಜಿಗೆ ಬರಬೇಕೆಂದು ತಿಳಿಸಿದರು.

Advertisement

ಒಟ್ಟಾರೆ ಎರಡು ಕಾಲೇಜಿನ ಎದುರು ಹಿಜಾಬ್ ಗಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದು ವಾಗ್ವಾದ ನಡೆಸುತ್ತಿದ್ದು, ಇದಕ್ಕೆ ಮಕ್ಕಳು ಒಪ್ಪದಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಾಲೇಜು ಎದುರು ಮಕ್ಕಳೊಂದಿಗೆ ಪೊಷಕರೂ ನೆರೆದಿದ್ದು, ಪೊಲೀಸರು ಪರಿಸ್ತಿತಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next