Advertisement
ಈಗಾಗಲೇ ಹಲವರು ಇಲ್ಲಿಯ ಅಪಘಾತಗಳಲ್ಲಿ ಮರಣವನ್ನು ಹೊಂದಿದ್ದಾರೆ. ಹೆದ್ದಾರಿಯಲ್ಲಿ ವಾಹನ ಗಳೂ ಅತೀ ವೇಗದಿಂದ ಸಂಚರಿಸುತ್ತಿರುತ್ತವೆ. ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದು. ಇಲ್ಲಿ ಸುರಕ್ಷತೆ ವ್ಯವಸ್ಥೆ ಇಲ್ಲದ ಕಾರಣ, ಚೂರು ಹೆಚ್ಚು ಕಡಿಮೆಯಾದರೂ ವಾಹನಗಳು ಗುಂಡಿಗೆ ಬೀಳಬೇಕು ಇಲ್ಲವೇ ಬೇರೆ ವಾಹನಗಳಿಗೆ ಢಿಕ್ಕಿಹೊಡೆಯಬೇಕಾದ ಸ್ಥಿತಿ ಇದೆ. ಇದರೊಂದಿಗೆ ಇಲ್ಲಿನ ಜಂಕ್ಷನ್‌ಗಳು, ವೃತ್ತ ಭಾಗದಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಅದಾವುದೂ ಆಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜತೆಗೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ.
Related Articles
ಹೆದ್ದಾರಿಯ ಡಾಮರು ಕಾಮಗಾರಿ ನಡೆದ ಬಳಿಕ ಫೆ. 7ರಂದು ಒಂದೇ ದಿನ ಇಬ್ಬರು ದ್ವಿಚಕ್ರ ವಾಹನ ಸವಾರರು ಅಪಘಾತದಿಂದ ಮೃತಪಟ್ಟಿದ್ದರು. ಅದರ ಮರುದಿನ ಬಂಟ್ವಾಳ ಪೊಲೀಸ್ ಇಲಾಖೆ ಡಿವೈಎಸ್‌ಪಿ ಅವರ ನೇತೃತ್ವದಲ್ಲಿ ಹೆದ್ದಾರಿಯ ಪರಿಶೀಲನ ಕಾರ್ಯ ನಡೆಸಿತ್ತು. ಕಲ್ಲಡ್ಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್, ಪೈಬರ್ ಕೋನ್‌ಗಳನ್ನು ಅಳವಡಿಸಲಾಗಿತ್ತು. ಜತೆಗೆ ಹೆದ್ದಾರಿಗೆ ಸಂಬಂಧಪಟ್ಟ ಎಂಜಿನಿಯರ್‌ಗಳನ್ನು ಕರೆಸಿ ಅಪಘಾತಗಳಿಗೆ ಹೆದ್ದಾರಿಯ ಅವ್ಯವಸ್ಥೆಯೂ ಕಾರಣ ಎನ್ನಲಾಗಿತ್ತು.
Advertisement
ರಿಪ್ಲೆಕ್ಟರ್ಗಳಿಲ್ಲಸಾಮಾನ್ಯವಾಗಿ ರಸ್ತೆಗಳ ಡಾಮರು ಕಾಮಗಾರಿ ಮುಗಿದ ಬಳಿಕ ರಾತ್ರಿ ಹೊತ್ತು ವಾಹನ ಚಾಲಕರು/ ಸವಾರರನ್ನು ಎಚ್ಚರಿಸುವ ರಿಪ್ಲೆಕ್ಟರ್‌ಗಳನ್ನು ಹಾಕ ಲಾಗುತ್ತದೆ. ಅಂತಹ ಯಾವುದೇ ರಿಪ್ಲೆಕ್ಟರ್‌ಗಳನ್ನು ಆಳವಡಿಸಿಲ್ಲ. ಜತೆಗೆ ಕ್ಯಾಟ್ ಐ(ರಾತ್ರಿ ಹೊತ್ತಿನಲ್ಲಿ ಬೆಳಗುವ ನಾಮಫಲಕ)ಗಳನ್ನೂ ಅಳವಡಿಸಿಲ್ಲ. ಹೆದ್ದಾರಿ ಬದಿ ಅಪಾಯಕಾರಿ
ಕಾಮಗಾರಿ ನಡೆದಂತೆ ಹೆದ್ದಾರಿಯ ಬದಿಯಲ್ಲಿ ಎತ್ತರವಾಗುತ್ತದೆ. ಆಗ ಬದಿಗೆ ಮಣ್ಣು ಹಾಕಿ ಸಮತಟ್ಟು ಮಾಡಬೇಕು. ಪ್ರಸ್ತುತ ಬಿ.ಸಿ.ರೋಡಿನಿಂದ ಅಡ್ಡ ಹೊಳೆವರೆಗೆ ನಡೆದ ಕಾಮಗಾರಿಯ ಸಂದರ್ಭ ಎಲ್ಲೂ ಮಣ್ಣು ಹಾಕಿಲ್ಲ. ಹೀಗಾಗಿ ಹೆದ್ದಾರಿ ಸಾಕಷ್ಟು ಎತ್ತರದಲ್ಲಿದ್ದು, ದ್ವಿಚಕ್ರ ವಾಹನಗಳಿಗೆ ಸಾಕಷ್ಟು ಅಪಾ ಯಕಾರಿ. ಹೆದ್ದಾರಿಯಲ್ಲಿ ಘನ ವಾಹನಗಳೇ ಹೆಚ್ಚಾಗಿ ಸಾಗುತ್ತಿದ್ದು, ಪರಸ್ಪರ ಓವರ್‌ಟೇಕ್ ಮಾಡುವ ವೇಳೆ ಎದುರಿನಿಂದ ಬರುವ ವಾಹನಗಳನ್ನು ಹೆದ್ದಾರಿಯಿಂದ ಕೆಳಗೆ ಇಳಿಸಬೇಕಾದ ಸ್ಥಿತಿ ಇದೆ. ಇದೂ ಅಪಘಾತಕ್ಕೆ ಕಾರ ಣವಾಗುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ.