Advertisement

ಕಸಾಯಿಖಾನೆ ಸ್ಥಳಾಂತರಕ್ಕೆ ಆಗ್ರಹಿಸಿ ಹೆದ್ದಾರಿ ಬಂದ್‌

11:59 AM Mar 13, 2018 | |

ಕಲಬುರಗಿ: ತಾಲೂಕಿನ ನದಿ ಸಿನ್ನೂರ ಗ್ರಾಮದಲ್ಲಿ ನಡೆಯುತ್ತಿರುವ ದನಗಳ ಕಸಾಯಿಖಾನೆಯನ್ನು ಸ್ಥಳಾಂತರಿಸ ಬೇಕೆಂದು ಆಗ್ರಹಿಸಿ ವೀರ ಕನ್ನಡಿಗರ ಸೇನೆಯ ಕಾರ್ಯಕರ್ತರು ಹೆದ್ದಾರಿ ಬಂದ್‌ ಮಾಡಿ ರಸ್ತೆತಡೆ ನಡೆಸಿದರು.

Advertisement

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕೂಡಲೇ ನದಿ ಸಿನ್ನೂರಲ್ಲಿರುವ ಕಸಾಯಿಖಾನೆಯ
ಪರವಾನಗಿ ರದ್ದುಪಡಿಸಲು ಒತ್ತಾಯಿಸಿದರು. ಗ್ರಾಮದಲ್ಲಿರುವ ಕಸಾಯಿಖಾನೆಯಿಂದ ಕೆಟ್ಟವಾಸನೆ
ಹರಡುವ ಮೂಲಕ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳು
ಹೆಚ್ಚಲು ಕಾರಣವಾಗಿದೆ. ಕಾರಣ ಕಸಾಯಿಖಾನೆ ಪರವಾನಗಿ ರದ್ದು ಗೊಳಿಸಬೇಕೆಂದು ಒತ್ತಾಯಿಸಿದರು.
 
ಸಿದ್ದು ಕಂದಗಲ್‌, ಮಡಿವಾಳಪ್ಪ ಬಿರಾದಾರ, ಶಿವಕುಮಾರ ಜಂಬಗಿ, ಆನಂದ ಜಿ., ಗುಂಡಪ್ಪ, ಶ್ರೀರಾಮಸೇನೆಯ ಶರಣು ಕೋಳಕೂರ, ದಶರಥ ದೇಸಾಯಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next