Advertisement

10 ದಿನಗಳ ಗಡುವು;ಬಾಳೆಗಿಡ ನೆಟ್ಟು ಪ್ರತಿಭಟನೆ ಎಚ್ಚರಿಕೆ

01:21 AM Jan 31, 2022 | Team Udayavani |

ಕುಂದಾಪುರ: ಯಾರೇ ಹೋರಾಡಲಿ ನಾವಂತೂ ಕಾಮಗಾರಿ ಮಾಡುವುದೇ ಇಲ್ಲ ಎಂಬಂತೆ ಹಠಕ್ಕೆ ಬಿದ್ದ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ನವಯುಗ ಕಂಪೆನಿಗೆ ಪಾಠ ಕಲಿಸಲು ಕುಂದಾಪುರದ ನಾಗರಿಕರು ಮುಂದಾಗಿದ್ದಾರೆ. ಹೆದ್ದಾರಿ ಸಮಸ್ಯೆ ಹಾಗೂ ಸರ್ವಿಸ್‌ ರಸ್ತೆಯ ಸಮಸ್ಯೆ ಇತ್ಯರ್ಥ ಪಡಿಸಲು 10 ದಿನಗಳ ಗಡುವು ನೀಡಿದ್ದು ಸರಿಪಡಿಸದೇ ಇದ್ದರೆ ರಸ್ತೆಯ ಹೊಂಡಗಳಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

Advertisement

ದುರವಸ್ಥೆ
ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳು ಒಂದೆರಡಲ್ಲ. ಕಾಮಗಾರಿಗಳು ಬಾಕಿಯಾಗಿ ಅದೆಷ್ಟು ಬಾರಿ ಆಡಳಿತಗಾರರು, ಸಾರ್ವಜನಿಕರು, ಹೋರಾಟಗಾರರು ಗಮನ ಸೆಳೆದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಂತೂ ರಸ್ತೆಗೂ ತಮಗೂ ಸಂಬಂಧವೇ ಇಲ್ಲದಂತೆ ಇದೆ. ಅಷ್ಟಿದ್ದರೂ ನವಯುಗ ಸಂಸ್ಥೆ ವಾಹನ ಮಾಲಕರಿಂದ ಸುಂಕ ವಸೂಲಿ ಮಾಡುತ್ತಿದೆ. ರಸ್ತೆ ದುರವಸ್ಥೆಗೆ ತಾವು ಸ್ಪಂದಿಸಬೇಕಿಲ್ಲ ಎಂಬ ಮನೋಧೋರಣೆ ತಳೆದಂತಿದೆೆ. ಸರ್ವಿಸ್‌ ರಸ್ತೆಯ ಹೊಂಡಗಳ ಕಡೆಗೆ ಗಮನವೇ ಹರಿಸಿದಂತಿಲ್ಲ. ವಿನಾಯಕ ಥಿಯೇಟರ್‌ ಪಕ್ಕದಿಂದ ಶಾಸ್ತ್ರೀ ಸರ್ಕಲ್‌ವರೆಗೆ ಬರಲು ಸಮಯ ಹೆಚ್ಚೇ ಬೇಕಾಗುತ್ತದೆ. ಅಲ್ಲಲ್ಲಿ ಹೊಂಡ, ಅಲ್ಲಲ್ಲಿ ಹಂಪ್‌ಗಳು ಇವೆ.

ಸರ್ಕಲ್‌ನಲ್ಲಿ
ಶಾಸ್ತ್ರೀ ಸರ್ಕಲ್‌ನಲ್ಲಿ ಹಾದು ಹೋದ ರಸ್ತೆಯಲ್ಲಿ ಹೊಂಡಗಳಿವೆ. ಈವತ್ತಿನ ವರೆಗೂ ಇದನ್ನು ಮುಚ್ಚಿದ ಉದಾಹರಣೆಯೇ ಇಲ್ಲ. ಅಸಲಿಗೆ ಇದು ಕುಂದಾಪುರ ನಗರದ ಪ್ರವೇಶ ಬಿಂದು. ಆದರೆ ಪ್ರವೇಶವೇ ಬಲು ಕಠಿನ ಎಂಬಂತೆ ಹೊಂಡಗುಂಡಿಯಲ್ಲಿ ಬರಬೇಕು. ಧೂಳೆಬ್ಬಿಸಿಕೊಂಡು ಇರಬೇಕು. ಬಸ್ಸಿಗೆ ಕಾಯುವವರು ಇದನ್ನೇ ತಿನ್ನುತ್ತಿರಬೇಕು. ಎಲ್ಲಿಯವರೆಗೆ ಸರ್ವಿಸ್‌ ರಸ್ತೆ ಬರುತ್ತದೆ ಎಂಬ ಸ್ಪಷ್ಟಸೂಚಿ ಕೊಡದ ಕಾರಣ ಶಾಸಿŒ ವೃತ್ತದ ಅಭಿವೃದ್ಧಿ ಕೂಡಾ ಈವರೆಗೆ ಆಗಿಲ್ಲ. ಸರ್ಕಲ್‌ನಲ್ಲಿ ನವಯುಗ ಸಂಸ್ಥೆ ಹಾಕಿದ ಹೈಮಾಸ್ಟ್‌ ಲೈಟ್‌ ಬೆಳಗುವುದು ನಿಲ್ಲಿಸಿ ಯಾವುದೋ ಕಾಲವಾಗಿದೆ.

ಇದನ್ನೂ ಓದಿ:ಮತ್ತೆ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಪೆಗಾಸಸ್‌ ಗೂಢಚರ್ಯೆ ವಿವಾದ

ಸೂಚನೆ ನಿರ್ಲಕ್ಷ್ಯ
ಕೇಂದ್ರ ಸಚಿವೆ, ಶಾಸಕರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌, ಪುರಸಭೆ ಆಡಳಿತ ಇವಿಷ್ಟು ಮಂದಿ ನೀಡಿದ ಯಾವುದೇ ಸಲಹೆ, ಸೂಚನೆ, ಮಾರ್ಗದರ್ಶನವನ್ನು ಈವರೆಗೆ ಹೆದ್ದಾರಿ ಪ್ರಾಧಿಕಾರವಾಗಲೀ, ಗುತ್ತಿಗೆದಾರ ಸಂಸ್ಥೆಯಾಗಲೀ ಅನುಷ್ಠಾನ ಮಾಡಿದ್ದೇ ಇಲ್ಲ. ಹೆದ್ದಾರಿಯಲ್ಲಿ ಬೀದಿದೀಪ, ನಗರಕ್ಕೆ ಹೆದ್ದಾರಿಯಿಂದ ಪ್ರವೇಶ ಕಲ್ಪಿಸುವಿಕೆ, ಸರ್ವಿಸ್‌ ರಸ್ತೆಗಳ ದುರಸ್ತಿ, ಸರ್ವಿಸ್‌ ರಸ್ತೆಗಳಿಂದ ನಗರದ ಒಳರಸ್ತೆಗಳಿಗೆ ಹೋಗುವಲ್ಲಿ ಸಮರ್ಪಕ ದುರಸ್ತಿ, ಸರಿಯಾದ ಪಾದಚಾರಿ ಪಥ ನಿರ್ಮಾಣ, ಹೆದ್ದಾರಿ ಬದಿಯ ಚರಂಡಿ ಸರಿಪಡಿಸುವಿಕೆ, ಫ‌ಲಕ ಅಳವಡಿಸುವಿಕೆ, ಸ್ವಾಗತ ಕಮಾನು ಅಳವಡಿಸುವಿಕೆ, ಪ್ರಯಾಣಿಕ ತಂಗುದಾಣ ಸೇರಿದಂತೆ ಒಂದೂ ಬೇಡಿಕೆಗಳು ಈವರೆಗೆ ಈಡೇರಿಲ್ಲ. ಈಡೇರಿಸುವ ಭರವಸೆಯೂ ದೊರೆತಿಲ್ಲ. ಕಾಟಾಚಾರಕ್ಕೆ ಎಂಬಂತೆ ತಲೆಯಾಡಿಸುವ ಸ್ವಭಾವ ಹೊರತು ಅದನ್ನು ಅನುಷ್ಠಾನ ಮಾಡಲು ಈವರೆಗೆ ಪ್ರಯತ್ನವೇ ಮಾಡಿದಂತಿಲ್ಲ. ಹಾಗೊಂದು ವೇಳೆ ಮಾಡದೇ ಇರಲು ಕಾರಣವೇನು ಎನ್ನುವುದು ಕೂಡ ಬೆಳಕಿಗೆ ಬಂದಿಲ್ಲ.

Advertisement

ಪ್ರತಿಭಟನೆ
ಫ್ಲೈಓವರ್‌, ಅಂಡರ್‌ಪಾಸ್‌ ಕಾಮಗಾರಿ ಸಕಾಲದಲ್ಲಿ ನಡೆಯದೇ ಹತ್ತು ವರ್ಷಗಳ ಕಾಲ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ ಎಂದಾಗುವಾಗ ಹೆದ್ದಾರಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು. ಸಂಸದರು ಸಭೆ ನಡೆಸಿದರು. ಶಾಸಕರು ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಸಹಾಯಕ ಕಮಿಷನರ್‌ ಕೇಸು ದಾಖಲಿಸಿದರು. ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಸೂಚನೆ ನೀಡಿದರು. ಅಂತೂ ಇಂತೂ ಕುಂಟುತ್ತಾ, ಉರುಳುತ್ತಾ ಸಾಗಿದ ಅಂಡರ್‌ಪಾಸ್‌ , ಫ್ಲೈಓವರ್‌ ಕಾಮಗಾರಿ ಮುಗಿದು ವರ್ಷವಾಗುತ್ತಾ ಬಂತು. ಅದರ ನಂತರ ಗುತ್ತಿಗೆದಾರ ಸಂಸ್ಥೆ ಈ ಕಡೆ ತಲೆ ಹಾಕಿ ನೋಡಿಲ್ಲ. ಅಂದು ಬಾಕಿಯಾದ ಕಾಮಗಾರಿಗಳು ಇನ್ನೂ ಹಾಗೆಯೇ ಇವೆ. ಇದೀಗ ಮತ್ತೂಮ್ಮೆ ಪ್ರತಿಭಟನೆಗೆ ಸಾರ್ವಜನಿಕರು ಸಜ್ಜಾಗಿದ್ದಾರೆ. ಈ ಹಿಂದೆ ನಡೆದ ಪ್ರತಿಭಟನೆ ಪಕ್ಷಾತೀತವಾಗಿ ನಡೆದಿತ್ತು. ಈ ಬಾರಿಯೂ ಪಕ್ಷಾತೀತವಾಗಿ ಪ್ರತಿಭಟನೆ ನಡೆಯಲಿದೆ.

ಬಾಳೆಗಿಡ ನೆಟ್ಟು ಪ್ರತಿಭಟನೆ
ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆಯ ಅವ್ಯವಸ್ಥೆಯ ಕುರಿತು ಅದೆಷ್ಟು ಬಾರಿ ಜನಪ್ರತಿನಿಧಿಗಳು ಸೂಚಿಸಿದರೂ ಕೆಲಸ ಆಗಲಿಲ್ಲ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ಹಾಗೂ ಜನರ ಬೇಡಿಕೆಗೆ ಸ್ಪಂದನವೇ ದೊರೆಯುವುದಿಲ್ಲ ಎಂದರೆ ಪ್ರತಿಭಟನೆಯೊಂದೇ ನಮಗಿರುವ ದಾರಿ. ಇದು ಜನಪ್ರತಿನಿಧಿ, ಸರಕಾರದ ವಿರುದ್ಧ ಅಲ್ಲ. ಕಾಮಗಾರಿ ನಡೆಯಬೇಕು, ಸರ್ವಿಸ್‌ ರಸ್ತೆಗಳ ಹೊಂಡ ಮುಚ್ಚಬೇಕು ಎನ್ನುವುದಷ್ಟೇ ನಮ್ಮ ಆಗ್ರಹ. ಇದಕ್ಕಾಗಿ 10 ದಿನಗಳ ಗಡುವು ನೀಡುತ್ತೇವೆ. ಅದರೊಳಗೆ ಸರಿಯಾಗದೇ ಇದ್ದರೆ 50 ಹೊಂಡಗಳಲ್ಲಿ ಬಾಳೆಗಿಡ ನೆಡುತ್ತೇವೆ.
-ಶಂಕರ ಅಂಕದಕಟ್ಟೆ,
ಬಿಜೆಪಿ ಅಧ್ಯಕ್ಷರು, ಕುಂದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next