Advertisement
ಮಂಗಳೂರು ಮಹಾನಗರ ಪಾಲಿಕೆ ಮತ್ತು ಅಡ್ಯಾರ್ ಗ್ರಾ.ಪಂ.ನ ಗಡಿ ಪ್ರದೇಶವಾದ್ದರಿಂದ, ಎರಡು ಆಡಳಿತಗಳು ಈ ಸಮಸ್ಯೆಗೆ ಮುಕ್ತಿ ಕಾಣಿಸುವಲ್ಲಿ ಅಷ್ಟಾಗಿ ಗಮನ ಹರಿಸಿದಂತಿಲ್ಲ. ಇದು ಕಸ ಎಸೆಯುವವರಿಗೆ ವರವಾಗಿ ಪರಿಣಮಿಸಿದ್ದು, ದಿನದಿಂದ ದಿನಕ್ಕೆ ಇಲ್ಲಿನ ಕಸದ ರಾಶಿ ಹೆಚ್ಚಾಗುತ್ತಿದೆ.
Related Articles
Advertisement
ಬೀದಿ ಬದಿಯಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಈಗ ಗ್ರಾಮ ಮಟ್ಟದಲ್ಲಿ ಜಾರಿಯಲ್ಲಿದೆ. ಆದರೆ ದಂಡದ ಕುರಿತಂತೆ ಜನರಲ್ಲಿ ಹೆದರಿಕೆಯೇ ಇಲ್ಲ ಎನ್ನಬಹುದು. ಕೆಲವರು ರಾತ್ರಿ ವೇಳೆ ಅಥವಾ ಬೆಳಕು ಹರಿಯುವ ಮುನ್ನ ಕಸವನ್ನು ಸುರಿದು ಹೋಗುವುದರಿಂದ ಪತ್ತೆ ಮಾಡುವುದೂ ಅಧಿಕಾರಿಗಳ ಪಾಲಿಗೆ ಕಷ್ಟವಾಗಿದೆ. ಈ ಹಿಂದೆ ಒಂದು ಬಾರಿ ತ್ಯಾಜ್ಯದಲ್ಲಿದ್ದ ಬಿಲ್‌ನ ಆಧಾರದಲ್ಲಿ ಹೊಟೇಲ್ ಒಂದಕ್ಕೆ ದಂಡ ವಿಧಿಸಲಾಗಿತ್ತು. ಕಸ ಎಸೆಯುವುದು ಕಂಡು ಬಂದು ಸಾರ್ವಜನಿಕರು ಯಾರಾದರೂ ಪ್ರಶ್ನಿಸಲು ಹೋದರೆ ಅಂತಹವರನ್ನು ಗದರಿಸುವ ಉದಾಹರಣೆಯೂ ಇದೆ.
ಜನರಲ್ಲೂ ಇಲ್ಲವಾಗಿದೆ ಕಾಳಜಿ
ರಸ್ತೆ ಬದಿಯಲ್ಲಿ ಕಸ ಎಸೆಯಬಾರದು ಎನ್ನುವ ಕನಿಷ್ಠ ಜ್ಞಾನ ಜನರಲ್ಲೂ ಇಲ್ಲ. ಪರಿಸರ ಕಾಳಜಿಯಂತೂ ಮೊದಲೇ ಇಲ್ಲ. ಇಲ್ಲಿ ಕಸ ಎಸೆಯುವವರು ಬಹುತೇಕ ಗ್ರಾಮೀಣ ಭಾಗದ ಮಂದಿಯೇ ಎನ್ನಬಹುದು. ವಾಹನಗಳಲ್ಲಿ ಬಂದು ಎಸೆದು ಜಾಗ ಖಾಲಿ ಮಾಡುತ್ತಾರೆ. ಇಂದು ಎಲ್ಲ ಗ್ರಾಮಗಳಲ್ಲಿ ಮನೆ-ಮನೆ ಕಸ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದೆ. ಆದರೂ ಈ ರೀತಿ ತಂದು ಎಸೆಯುವುದು ಬೇಜವಾಬ್ದಾರಿಯ ಪರಮಾವಧಿ ಎನ್ನುವುದು ಪರಿಸರ ಪ್ರಿಯರ ಅಭಿ ಪ್ರಾಯ. ರಸ್ತೆ ಬದಿಯಲ್ಲಿ ನಿಂತರೆ ಕನಿಷ್ಠ 10 ಮಂದಿಯನ್ನು ಕಸ ಹಾಕುವವರನ್ನು ಹಿಡಿದು ದಂಡ ಹಾಕಬಹುದಾಗಿದೆ.