Advertisement

ಮಲೆನಾಡು ರಸ್ತೆ ಚಳವಳಿ: ಬೆಳ್ಳೂರು ಪಂಚಾಯತ್‌ ಸಮಿತಿ ರಚನೆ

03:46 PM Feb 26, 2017 | Team Udayavani |

ಬದಿಯಡ್ಕ: ಮಲೆನಾಡ ಮಾರ್ಗಗಳ ಶೋಚನಿಯಾವಸ್ಥೆ ಯನ್ನು ಕೊನೆಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಬದಿಯಡ್ಕ 
ಪಿ. ಡಬುಡಿ ಕಾರ್ಯಾಲಯದ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 14ನೇ ದಿನ ತಲುಪಿರುತ್ತದೆ ಈ ಮುಷ್ಕರವನ್ನು ಬೆಂಬಲಿಸಲು ಬೆಳ್ಳೂರು ಪಂಚಾಯತ್‌ ಸಮಿತಿಯನ್ನು ರೂಪಿಕರಿಸಲು ತಿರ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ, ಧಾರ್ಮಿಕ ಮುಂದಾಳು ಕಲ್ಲಗ ಚಂದ್ರಶೇಖರ ರಾವ್‌ ಅಧ್ಯಕ್ಷತೆ   
ವಹಿಸಿ ಮಾತನಾಡಿ, ಮಲೆನಾಡು ಪ್ರದೇಶವನ್ನು ಅವಗಣಿ ಸುವ ಸರಕಾರಗಳ ಕ್ರಮ ಇನ್ನು ಮುಂದುವರಿದು ಜನರ ತಾಳ್ಮೆಯನ್ನು ಇನ್ನು ಪರಿಕ್ಷಿಸಲು ಆಧಿಕಾರಿಗಳು ತೀರ್ಮಾನಿಸಿದಲ್ಲಿ ಈಗ ಸಮಾಧನವಾಗಿ ನಡೆಯುವ ಮುಷ್ಕರವು ಒಂದು ಕಲಾಪವಾಗಿ ಬದಲಾಗುವ ಸಾಧ್ಯತೆ ಇದೆ. ಹಾಗೇನಾದರು ಸಂಭವಿಸಿದ ಅದರ ಪೂರ್ಣ ಜವಾಬ್ದಾರರು ಆಧಿಕಾರಿಗಳೆ ಆಗಿರುತ್ತಾರೆ ಎಂದು ಹೇಳಿದರು. ಸಭೆಯಲ್ಲಿ ದಾಮೋದರ ಬಲ್ಲಾಳ್‌, ಚಳವಳಿ ಸಮಿತಿಯ ಅಧ್ಯಕ್ಷ ಮಾಹಿನ್‌ ಕೇಳ್ಳೋಟ್‌, ಬದಿಯಡ್ಕ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಎಸ್‌.ಎನ್‌.ಮಯ್ಯ, ಆಶ್ರಫ್‌ ಮುನಿಯೂರು ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಂಚಾಯತ್‌ ಮಟ್ಟದಲ್ಲಿ ನೂತನ ಸಮಿತಿಯನ್ನು ರೂಪಿಸಲು  ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next