Advertisement

ನ್ಯೂಜಿಲ್ಯಾಂಡ್‌ನ‌ಲ್ಲಿ ಅಧಿಕ ರನ್‌: ದಾಖಲೆಯತ್ತ ಧೋನಿ

12:30 AM Jan 22, 2019 | Team Udayavani |

ವೆಲ್ಲಿಂಗ್ಟನ್‌: ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಸತತ 3 ಅರ್ಧ ಶತಕ ಬಾರಿಸಿ ಬ್ಯಾಟಿಂಗ್‌ ಫಾರ್ಮ್ಗೆ ಮರಳಿದ ಮಹೇಂದ್ರ ಸಿಂಗ್‌ ಧೋನಿ ಈಗ ನ್ಯೂಜಿಲ್ಯಾಂಡಿನಲ್ಲೂ ಇದೇ ಮಟ್ಟದ ಆಟ ಪ್ರದರ್ಶಿಸುವರೇ ಎಂಬ ಕುತೂಹಲ ಮೂಡಿದೆ. ಆಗ ಧೋನಿ ನ್ಯೂಜಿಲ್ಯಾಂಡ್‌ನ‌ಲ್ಲಿ ಅತ್ಯಧಿಕ ರನ್‌ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

Advertisement

ಸದ್ಯ ಈ ಸಾಧಕರ ಯಾದಿಯಲ್ಲಿ ಧೋನಿಗೆ 3ನೇ ಸ್ಥಾನ. 18 ಪಂದ್ಯಗಳಿಂದ 652 ರನ್‌ ಪೇರಿಸಿರುವ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನದಲ್ಲಿದ್ದರೆ, 12 ಪಂದ್ಯಗಳಿಂದ 598 ರನ್‌ ಗಳಿಸಿರುವ ವೀರೇಂದ್ರ ಸೆಹವಾಗ್‌ ಆವರಿಗೆ 2ನೇ ಸ್ಥಾನ. ಸಚಿನ್‌ ದಾಖಲೆಯನ್ನು ಮೀರಿಸಿ ಅಗ್ರಸ್ಥಾನಕ್ಕೆ ಏರಬೇಕಾದರೆ ಧೋನಿ ಇನ್ನು 197 ರನ್‌ ಗಳಿಸಬೇಕಿದೆ. ಇದು 5 ಪಂದ್ಯಗಳ ಸರಣಿಯಾದ್ದರಿಂದ ಧೋನಿ ಮುಂದೆ ದಾಖಲೆಯ ಅವಕಾಶವೊಂದು ತೆರೆಯಲ್ಪಡುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next