Advertisement

ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸುಧಾರಣೆ

01:15 PM Nov 06, 2021 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಗಾಳಿ ವೇಗ ಹೆಚ್ಚಾದ ಪರಿಣಾಮ, ನಗರದಲ್ಲಿ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಈ ಗಾಳಿ ಮುಂದಿನ ಎರಡು ದಿನಗಳಲ್ಲಿ ಮಾಲಿನ್ಯಕಾರಕ ಅಂಶಗಳನ್ನು ಮತ್ತಷ್ಟು ಹೊರಹಾಕುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ‘ಸಮೀರ್ ಆ್ಯಪ್’ ಅಂಕಿ ಅಂಶಗಳ ಪ್ರಕಾರ, ಶನಿವಾರ ನವೆಂಬರ್ 5 ರಂದು ಬೆಳಗ್ಗೆ 8 ಗಂಟೆಗೆ ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ತೀವ್ರ ವಿಭಾಗದಲ್ಲಿ 449 ರಷ್ಟಿತ್ತು. ಶುಕ್ರವಾರ 462 ಆಗಿದೆ.

ಇದನ್ನೂ ಓದಿ:ಮತ್ತೆ ಮಿಂಚಿದ ಮನೀಷ್ ಪಾಂಡೆ: ಹ್ಯಾಟ್ರಿಕ್ ಗೆಲುವು ದಾಖಲಿಸಿದ ಕರ್ನಾಟಕ ತಂಡ

ದೆಹಲಿ ಸರಕಾರ ಪಟಾಕಿ ನಿಷೇಧ ಹೇರಿದ್ದರೂ, ಹಲವಾರು ಜನರು ದೀಪಾವಳಿಯ ಸಂದರ್ಭದಲ್ಲಿ ರಸ್ತೆಗಳಲ್ಲಿ ಪಟಾಕಿಗಳನ್ನು ಸಿಡಿಸಿದ್ದಾರೆ. ಇದು ಗಾಳಿಯ ಗುಣಮಟ್ಟ ಹದಗೆಡಲು ಕಾರಣವಾಗಿದೆ. ಇನ್ನೊಂದೆಡೆ ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹೆಚ್ಚಿರುವುದು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next