ಮಂಗಳೂರು: ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು (INCOIS) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶಗಳಿಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ಮತ್ತು ಉಬ್ಬರದ ಅಲರ್ಟ್ ನೀಡಿದೆ. ಈ ಅಲರ್ಟ್ ಜುಲೈ 19 ರಂದು ಸಂಜೆ 05 :30ರಿಂದ ಜುಲೈ 21 ರ ರಾತ್ರಿ 11.30 ರ ವರೆಗೆ ಜಾರಿಯಲ್ಲಿರುತ್ತದೆ.
ಉಡುಪಿ ಕರಾವಳಿಯ ಬೈಂದೂರಿನಿಂದ ಕಾಪುವರೆಗಿನ ಕರಾವಳಿಯಲ್ಲಿ 3.5 ರಿಂದ 3.7 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದ್ದು, ಹೆಚ್ಚಿನ ಅಲೆಗಳ ಎಚ್ಚರಿಕೆ ನೀಡಲಾಗಿದೆ. 10.0 ರಿಂದ 12.0 ಸೆಕೆಂಡುಗಳ ಅವಧಿಯಲ್ಲಿ ಮತ್ತು 2.6 ರಿಂದ 2.8 ಮೀಟರ್‌ಗಳ ಎತ್ತರದಲ್ಲಿ ಭಾರೀ ಅಲೆಗಳು ಅಪ್ಪಳಿಸಲಿವೆ.
ಉತ್ತರ ಕನ್ನಡದಲ್ಲಿ ಮಾಜಾಳಿಯಿಂದ ಭಟ್ಕಳದವರೆಗೆ ಹೆಚ್ಚಿನ ಅಲೆಯ ಎಚ್ಚರಿಕೆ ನೀಡಲಾಗಿದೆ. 3.8 ರಿಂದ 4.0 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚಿನ ಅಲೆಗಳನ್ನು ನಿರೀಕ್ಷಿಸಲಾಗಿದೆ. 10.0 ರಿಂದ 12.0 ಸೆಕೆಂಡುಗಳ ಅವಧಿಯಲ್ಲಿ ಮತ್ತು 2.9 ರಿಂದ 3.0 ಮೀಟರ್‌ಗಳ ಎತ್ತರದ ಅಲೆಗಳು ಅಪ್ಪಳಿಸಲಿವೆ.
INCOIS ಸಲಹೆಯು ಸಣ್ಣ ಹಡಗುಗಳನ್ನು ನೀರಿಗೆ ಇಳಿಸಬಾರದು. ಹತ್ತಿರದ ಮನರಂಜನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎನ್ನಲಾಗಿದ್ದು, ಈ ವೇಳೆ ಕಡಲ್ಕೊರೆತ ಮತ್ತು ಭಾರೀ ಅಲೆಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
ದಕ್ಷಿಣ ಕನ್ನಡದಲ್ಲಿ ಮುಲ್ಕಿಯಿಂದ ಮಂಗಳೂರಿನವರೆಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ನೀಡಲಾಗಿದ್ದು, 3.2 ರಿಂದ 3.4 ಮೀಟರ್ ವರೆಗೆ ಎತ್ತರದ ಅಲೆಗಳು ಬರುವ ನಿರೀಕ್ಷೆಯಿದೆ. 10.0 ರಿಂದ 12.0 ಸೆಕೆಂಡುಗಳ ಅವಧಿಯಲ್ಲಿ ಮತ್ತು 2.4 ರಿಂದ 2.5 ಮೀಟರ್‌ಗಳ ಎತ್ತರದಲ್ಲಿ ಅಲೆಗಳು ಅಪ್ಪಳಿಸಲಿವೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಅಧಿಕಾರಿಗಳು ಸಮುದ್ರ ಕಾರ್ಯಾಚರಣೆಗಳು ನಡೆಸದಂತೆ ಮತ್ತು ಹತ್ತಿರದ ದಡದಲ್ಲಿ ಎಚ್ಚರಿಕೆಯಿಂದಿರಲು ಸಲಹೆ ನೀಡಿದ್ದಾರೆ.