Advertisement

ತೋಟದ ಶೆಡ್ ಮೇಲೆ ಪೊಲೀಸರ ಮಿಂಚಿನ ದಾಳಿ: 269 ಸಿಲಿಂಡರ್ ಗಳು ವಶ

06:51 PM Aug 01, 2023 | Team Udayavani |

ಕುಣಿಗಲ್ : ಆಟೋ ರಿಕ್ಷಾ ಕಿಟ್‌ಗಳಿಗೆ ರೀಫಿಲಿಂಗ್ ಮಾಡಲು ಆಕ್ರಮವಾಗಿ ಸಂಗ್ರಹಿಸಿ ಇಟ್ಟಿದ ಗ್ಯಾಸ್ ಸಿಲಿಂಡರ್ ಶೆಡ್ ಮೇಲೆ ಮಿಂಚಿನ ದಾಳಿ ನೆಡೆಸಿದ ಕುಣಿಗಲ್ ಪೊಲೀಸರು ವಿವಿಧ ಇಂಧನ ಕಂಪನಿಗೆ ಸೇರಿದ ಲಕ್ಷಾಂತರೂ ಮೌಲ್ಯದ 269 ಸಿಲಿಂಡರ್, ರೀಫಿಲಿಂಗ್ ಸಾಮಾಗ್ರಿ, ಬೊಲೆರೋ ವಾಹನವನ್ನು ವಶಕ್ಕೆ ಪಡೆದ, ಘಟನೆ ತಾಲೂಕಿನ ಕಸಬಾ ಹೋಬಳಿ ಬೋರಲಿಂಗನಪಾಳ್ಯ ಗ್ರಾಮದಲ್ಲಿ ನಡೆದಿದೆ.

Advertisement

ಬೋರಲಿಂಗನಪಾಳ್ಯ ಗ್ರಾಮದ ಕುಮಾರ್ ಎಂಬುವರು ಆಟೋ ರಿಕ್ಷಾ ಕಿಟ್‌ಗಳಿಗೆ ರೀಫಿಲಿಂಗ್ ಮಾಡಲು ಬೋರಲಿಂಗನಪಾಳ್ಯ ಗ್ರಾಮದ ನೇರಳೆ ಮಾರಮ್ಮನ ದೇವಸ್ಥಾನದ ಹಿಂಭಾಗದ ಲೇಔಟ್ ಬಳಿಯ ತೆಂಗಿನ ತೋಟದ ಶೆಡ್‌ನಲ್ಲಿ ಆಕ್ರಮವಾಗಿ ಸಿಲಿಂಡರ್‌ಗಳನ್ನು ಶೇಖರಣೆ ಮಾಡಿ ಇಟ್ಟಿದ್ದರು, ಖಚಿತ ಮಾಹಿತಿ ಮೇರೆಗೆ ಕುಣಿಗಲ್ ವೃತ್ತ ನಿರೀಕ್ಷಕ ವಿ.ಎಂ.ಗುರುಪ್ರಸಾದ್ ಅವರ ನೇತೃತ್ವದಲ್ಲಿ ಪೊಲೀಸರು ಕಳೆದ ರಾತ್ರಿ ದಾಳಿ ನಡೆಸಲು ಮುಂದಾದರು ಪೊಲೀಸರ ವಾಹನ ಬರುವುದನ್ನು ಗಮನಿಸಿದ ಆರೋಪಿ ಕುಮಾರ್, ಶೆಡ್‌ಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾದನ್ನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಳಿಕ ಪೊಲೀಸರು ಶೆಡ್ ಬೀಗವನ್ನು ತೆಗೆದಾಗ ಶೆಡ್ ಒಳಗೆ ಗೋ ಗ್ಯಾಸ್ ಕಂಪನಿಯ ತುಂಬಿದ ಡೋಮಾಸ್ಟಿಕ್ ಸಿಲಿಂಡರ್ 160 ಖಾಲಿ ಸಿಲಿಂಡರ್ 20 ಹೆಚ್.ಪಿ ಕಂಪನಿಯ ತುಂಬಿದ ವಾಣಿಜ್ಯ ಸಿಲಿಂಡರ್ 18, ಖಾಲಿ ಸಿಲಿಂಡರ್ ೫೮, ಇಂಡಿಯನ್ ವಾಣಿಜ್ಯ ಸಿಲಿಂಡರ್ 2, ಮಿನಿ ಖಾಲಿ ಸಿಲಿಂಡರ್ 10, ಆಟೋ ಕಿಟ್ ಖಾಲಿ ಸಿಲಿಂಡರ್ 1 ಸೇರಿದಂತೆ ಒಟ್ಟು 269 ಸಿಲಿಂಡರ್ ಹಾಗೂ ಸಿಲಿಂಡರ್ ರೀಫಿಲಿಂಗ್ ಸಾಮಾಗ್ರಿಗಳು, ಸಿಲಿಂಡರ್ ಸಾಗಾಣೆ ಮಾಡುವ ಬೋಲೇರೋ ಗಾಡಿಯನ್ನು ವಶಕ್ಕೆ ಪಡೆದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ದಾಳಿಯಲ್ಲಿ ಕಾನ್ಸ್ಟೇಬಲ್‌ಗಳಾದ ಮಲ್ಲಿಕಾರ್ಜುನ್, ಪುಟ್ಟರಾಜು, ಷಡಕ್ಷರಿ ಮತ್ತಿತರರು ಪಾಲ್ಗೊಂಡಿದರು.

Advertisement

Udayavani is now on Telegram. Click here to join our channel and stay updated with the latest news.

Next