Advertisement

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ರೆಡ್ಡಿಗೊಲ್ಲವಾರಹಳ್ಳಿ ಸರ್ಕಾರಿ ಶಾಲೆ

04:29 PM Feb 03, 2021 | Team Udayavani |

ಚಿಕ್ಕಬಳ್ಳಾಪುರ: ಉದ್ಯೋಗ ಖಾತ್ರಿ ಯೋಜನೆ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಮೊತ್ತೂಂದೆಡೆ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಗ್ರಾಮದಲ್ಲಿ ದಾನಿಗಳ ನೆರವಿನಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿ ಅಭಿವೃದ್ಧಿಗೊಂಡಿದೆ.

Advertisement

ಗ್ರಾಮದಲ್ಲಿ 1931ರಲ್ಲಿ ಸ್ಥಾಪಿಸಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 42 ಬಾಲಕಿಯರು, 44 ಬಾಲಕರು ಸೇರಿದಂತೆ 86 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಸುಜಲ ಯೋಜನೆಯ ಕಟ್ಟಡ ಸಹಿತ 09 ಕೊಠಡಿಗಳಿದ್ದು, ಆ ಪೈಕಿ 03 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು,ಅದನ್ನು ನೆಲಸಮ ಮಾಡಲು ಇಲಾಖೆಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಅದು ಹೊರತುಪಡಿಸಿ ಬೇರೆ ಕೊಠಡಿಗಳು ಸುಣ್ಣಬಣ್ಣಗಳಿಂದ ಕಂಗೊಳಿಸಿ ಯಾವುದೇ ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲದಂತಿದೆ.

ದಾನಿಗಳ ನೆರವು: ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್‌, ಮಳೆ ಕೊಯ್ಲು, ಪೌಷ್ಟಿಕ ತೋಟ ಹಾಗೂ ಅಡುಗೆ ಕೋಣೆಗಳನ್ನು  ಅಭಿವೃದ್ಧಿಗೊಳಿಸುವ ಜೊತೆಗೆ ಆಟದ ಮೈದಾನ ಹಾಗೂ ಶಾಲಾ ಕೊಠಡಿಗಳ ಗೋಡೆಗಳನ್ನು ಸುಣ್ಣಬಣ್ಣಗಳಿಂದ ಕಂಗೊಳಿಸಿ ಕಲಿಕಾ ಕೇಂದ್ರಗಳನ್ನು ಮಾಡಲಾಗುತ್ತಿದೆ. ಆದರೆ ರೆಡ್ಡಿಗೊಲ್ಲವಾರಹಳ್ಳಿ ಶಾಲೆಯಲ್ಲಿ ಸರ್ಕಾರದ ನೆರವು ಇಲ್ಲದೇ ದಾನಿಗಳ ಸಹಕಾರದಿಂದ ಶಾಲೆಯ ಸ್ವರೂಪವೇ ಬದಲಾಗಿದೆ.

ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್‌ ಅವರ ಆಸಕ್ತಿಯಿಂದಾಗಿ ಶಾಲೆ ಅಭಿವೃದ್ಧಿಗೊಂಡಿದೆ. ಗ್ರಾಮಸ್ಥರು ಸಹ ಸಹಕಾರ ನೀಡಿದ್ದಾರೆ.

ಹಳೆ ವಿದ್ಯಾರ್ಥಿಗಳ ನೆರವು: ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಂದು ವಾಟ್ಸ್‌ಪ್‌ ಗ್ರೂಪ್‌ ಸಹ ರಚಿಸಲಾಗಿದ್ದು, ಅದರಲ್ಲಿ 17 ವಿದ್ಯಾರ್ಥಿಗಳು ಈ ಶಾಲೆಯ ಅಭಿವೃದ್ಧಿಗೆ ತಮ್ಮದೇ ಅದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಪ್ರಮುಖವಾಗಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಕರಿಗಾನಪಾಳ್ಯದ ಆನಂದ್‌ರೆಡ್ಡಿ ಅವರು ಉದಾರವಾಗಿ ಕೊಡುಗೆ ನೀಡಿದ್ದಾರೆ. ದಾನಿಗಳ ನೆರವಿನಿಂದ ಕಾಂಪೌಂಡ್‌ ನಿರ್ಮಾಣ, ಕಾಂಪೌಂಡ್‌ಗೆ ವರ್ಲಿ ಚಿತ್ರ ಕಲೆಯ ಮೂಲಕ ಶೃಂಗಾರ ಮಾಡಲಾಗಿದೆ.

Advertisement

ಕಲಿಕೆ ಪೂರಕ ಸೌಲಭ್ಯ: ದಾನಿಗಳಾದ ಆನಂದ್‌ರೆಡ್ಡಿ ಅವರು ಶಾಲೆಯ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವ ಸೌಲಭ್ಯಗಳನ್ನು ಇಲ್ಲಿ ಒದಗಿಸಿದ್ದಾರೆ. ಪ್ರಮುಖವಾಗಿ ಪ್ರೊಜೆಕ್ಟರ್‌, ಬ್ಯಾಂಡ್‌ಸೆಟ್‌, ಫರ್ನಿಚರ್, ಆಸನಗಳು, ಗ್ರಂಥಾಲಯಕ್ಕೆ ಟೇಬಲ್‌, ವಿದ್ಯಾರ್ಥಿಗಳಿಗೆ ಶುದ್ಧ ನೀರು ಪೂರೈಕೆ ಮಾಡಲು ವಾಟರ್‌ ಫಿಲ್ಟರ್‌ ಹಾಗೂ ಹೈಟೆಕ್‌ ಮಾದರಿಯ 20 ಡೆಸ್ಕ್ಗಳನ್ನು ಸಹ ಒದಗಿಸಿದ್ದಾರೆ.

 ಇದನ್ನೂ ಓದಿ :ಬಾಗಲಕೋಟೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 8 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಜಪ್ತಿ

ಚಿಕ್ಕಬಳ್ಳಾಪುರದ ನರೇಶ್‌ ಎಂಬುವವರು 04 ಗ್ರೀನ್‌ ಬೋರ್ಡ್‌ ಮತ್ತು ಜಿಲ್ಲಾ ಶಾಶ್ವತ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಂಬರೀಶ್‌ ಹಾಗೂ ಸದಸ್ಯರು ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.ಸಹ ಒಂದು ಬೋರ್ಡ್‌ ಒದಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next