ಬೆಂಗಳೂರು: 2021-22ನೇ ಸಾಲಿನ ಅಂತರ್ ಘಟಕ ವಿಭಾಗದ ಹೊರಗಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕೋರಿಕೆ/ಪರಸ್ಪರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸುವ ವೇಳಾಪಟ್ಟಿ ಪ್ರಕಟವಾಗಿದೆ. ಜ.24ರಿಂದ ಫೆ.3ರ ವರೆಗೆ ಪ್ರಕ್ರಿಯೆ ನಡೆಯಲಿದೆ.
ಕೌನ್ಸೆಲಿಂಗ್ ಅನ್ನು ಜೂಮ್ ಸಭೆಯ ಮೂಲಕ ವರ್ಚುಯಲ್ ವೇದಿಕೆಯಲ್ಲಿ ನಡೆಸಲಾಗುತ್ತದೆ. ಅಂತಿಮ ಆದ್ಯತಾ ಕೌನ್ಸೆಲಿಂಗ್ ಪಟ್ಟಿಯನ್ನು ಹಾಗೂ ಖಾಲಿ ಹುದ್ದೆಗಳ ಮಾಹಿತಿಯನ್ನು ಈಗಾಗಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಅಂತಿಮ ಆದ್ಯತಾ ಕೌನ್ಸೆಲಿಂಗ್ ಪಟ್ಟಿಯಲ್ಲಿನ ಶಿಕ್ಷಕರು ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಮೂಲ ಅರ್ಜಿ, ಕೋರಿರುವ ಆದ್ಯತೆಯ ಮೂಲ ದಾಖಲೆಗಳೊಂಇಗೆ ಕೌನ್ಸೆಲಿಂಗ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ. ಶಿಕ್ಷಕರು ತಮಗೆ ನೀಡಿರುವ ರ್‍ಯಾಂಕ್‌ನ ಆಧಾರದಲ್ಲಿ ಗುರುತಿನ ಚೀಟಿಯೊಂದಿಗೆ ಕೌನ್ಸೆಲಿಂಗ್‌ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ:ವಾರಾಂತ್ಯದ ಕರ್ಫ್ಯೂ ತೆರವು ಹಿನ್ನೆಲೆ: ಮತ್ತೆ ಯಥಾಸ್ಥಿತಿಗೆ “ನಮ್ಮ ಮೆಟ್ರೋ’- ಬಸ್ ಸೇವೆ
ಕೋರಿಕೆ ವರ್ಗಾವಣೆ ವೇಳಾಪಟ್ಟಿ: ಪ್ರೌಢಶಾಲಾ ಸಹ ಶಿಕ್ಷಕರಿಗೆ ಜ.24ರಿಂದ ಫೆ.1ರ ವರೆಗೆ ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ. ಫೆ.2ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ದೈಹಿಕ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಯಲಿದೆ.
ಫೆ.3ರಂದು ಅಂತರ್ ಘಟಕ ವಿಭಾಗದ ಹೊರಗಿನ ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ನಡೆಯಲಿದೆ.