ಬೆಂಗಳೂರು : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರು ಬೀದಿ ಕಾಳಗ ಮಾಡಿಕೊಂಡಿರುವ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದ್ದು, ಸಮಾಜದ ಯುವ ಪೀಳಿಗೆ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಮೂಡಿಸಿದೆ.
ಘಟನೆಯ ಬಳಿಕ ತೀವ್ರ ಮುಜುಗರಕ್ಕೆ ಗುರಿಯಾಗಿರುವ ಶಿಕ್ಷಣ ಸಂಸ್ಥೆ ಪೋಷಕರನ್ನು ಶಾಲೆಗೆ ಕರೆಸಿ ಸಭೆ ನಡೆಸಿದೆ.
20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪರಸ್ಪರ ಗ್ಯಾಂಗ್ ವಾರ್ ಮಾಡಿಕೊಂಡಿದ್ದು, ಬೇಸ್ ಬಾಲ್ ಸ್ಟಿಕ್ ಗಳನ್ನೂ ರೌಡಿಗಳ ಮಾದರಿಯಲ್ಲಿ ಹೊಡೆದಾಟಕ್ಕೆ ಬಳಸಿಕೊಂಡಿದ್ದಾರೆ. ಪರಸ್ಪರ ಬಟ್ಟೆಗಳನ್ನು ಹರಿದಾಡಿ, ರಕ್ತ ಸುರಿಯುವ ರೀತಿಯಲ್ಲಿ ಹೊಡೆದಾಡಿ ಕೊಂಡಿದ್ದಾರೆ.
ಹೊಡೆದಾಟಕ್ಕೂ ಮುನ್ನ ಇನ್ಸ್ಟಾ ಗ್ರಾಂನಲ್ಲಿ ಸವಾಲು ಹಾಕಿ ಹುಡುಕಿಕೊಂಡು ಬಂದು ಹೊಡೆಯುತ್ತೇವೆ ಎಂದು ಸವಾಲು, ಪ್ರತಿ ಸವಾಲು ಹಾಕಿರುವುದಾಗಿ ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ತೆರಳಿ ಘಟನೆಯ ಬಗ್ಗೆ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಇದುವರೆಗೆ ವಿದ್ಯಾರ್ಥಿನಿಯರ ಕಾಳಗದ ಕುರಿತು ಯಾವುದೇ ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿಲ್ಲ.