ಶಹಾಪುರ: ಸರ್ಕಾರದ ಪ್ರಗತಿ ಪರ ಯೋಜನೆಗಳು ಸದುಪಯೋಗ ಪಡಿಸಿಕೊಂಡು ಗ್ರಾಮಾಭಿವೃದ್ಧಿಗೆ ಮುಂದಾಗಬೇಕು. ಶೈಕ್ಷಣಿಕವಾಗಿ ಕೇಂದ್ರ ಬಿಂದುವಾದ ಹತ್ತಿಗೂಡೂರ ಗ್ರಾಮದಲ್ಲಿ ವಿವಿಧ ಕಾರ್ಯ ಯೋಜನೆಗಳು ಜಾರಿಗೆ ಸಿದ್ಧಪಡಿಸಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ 40 ಲಕ್ಷ.ರೂ. ವೆಚ್ಚದ 5 ಶಾಲಾ ಕೋಣೆಗಳ ನಿರ್ಮಾಣಕ್ಕೆ ಅಡಿಗಲ್ಲು ನೇರವೇರಿಸಿ ಮಾತನಾಡಿದ ಅವರು, ಶೈಕ್ಷಣಿಕ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಮೊರಾರ್ಜಿ, ಕಿತ್ತೂರ ರಾಣಿ ಚನ್ನಮ್ಮ, ಆದರ್ಶ ವಸತಿ ಶಾಲೆಗಳನ್ನು ನಿರ್ಮಾಣ ಮಾಡಲು ಚಿಂತನೆ ಮಾಡಲಾಗುವುದು.
ಅಲ್ಲದೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಹೊಂದಿದ ಹತ್ತಿಗೂಡೂರ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಬೇಕಿದೆ. ಅದಕ್ಕೆ ಗ್ರಾಮಸ್ಥರ ಸಹಕಾರ ನೀಡಬೇಕು. ಕೇಂದ್ರ ಸ್ಥಾನವಾದ ಹತ್ತಿಗೂಡೂರನಲ್ಲಿ ಕಾಲೇಜು ಸ್ಥಾಪನೆ ಮಾಡುವುದರ ಮುಖಾಂತರ ಈ ಭಾಗದ ವಿದ್ಯಾರ್ಥಿ ಸಮುದಾಯಕ್ಕೆ ಅನೂಕೂಲ ಮಾಡಿಕೊಡಲಾಗುತ್ತದೆ.
ಈ ನಿಟ್ಟಿನಲ್ಲಿ ಪ್ರಸ್ತಾವನೆ ಕಳಿಸಲಾಗುತ್ತಿದೆ. ಗ್ರಾಮಾಭಿವೃದ್ಧಿಗೆ 75 ಲಕ್ಷ.ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಮುಂದೆ ಕಾಮಗಾರಿ ಕಾರ್ಯರಂಭ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಹಯ್ನಾಳಪ್ಪ ಟಣಕೆದಾರ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಮುಖಂಡರಾದ ಮಲ್ಲಿಕಾರ್ಜುನ ಬೀರನೂರ, ತಾಪಂ ಸದಸ್ಯ ಬಸವಂತರಡ್ಡಿ ಸಾಹು, ಮಾಜಿ
ಜಿಪಂ ಸದಸ್ಯ ಸಿದ್ಧಲಿಂಗರಡ್ಡಿ ಸಾಹು ಸೇರಿದಂತೆ ಈರಣ್ಣ ಮಾಮನಿ, ಭೀಮರಾಯ ಹೊಸಮನಿ, ಶರಣಪ್ಪ ಟಣಕೆದಾರ, ಸಿದ್ದಣ್ಣ ಟಣಕೆದಾರ ಆಗಮಿಸಿದ್ದರು. ಶಾಲಾಯ ಮುಖ್ಯಗುರು ಬಸಪ್ಪ ಇದ್ದರು.