ಬೆಂಗಳೂರು: ಕೋರಮಂಗಲದ ಜಕ್ಕಸಂದ್ರದಲ್ಲಿ ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ ಸಂಬಂಧ ಸ್ಥಳದ ಪರಿಶೀ ಲನೆ ನಡೆಸಲು ಅಧಿಕಾರಿಯೊಬ್ಬರನ್ನು ನಿಯೋಜಿ ಸಲು ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತಂತೆ ಜಯಪ್ಪ ಲೇಔಟ್ ನಿವಾಸಿ ಚಂದ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾ. ಎ.ಎಸ್.ಓಕಾ ಹಾಗೂ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ತಿಳಿಸಿರುವಂತೆ ಒತ್ತುವರಿಯಾಗಿದೆ ಎನ್ನಲಾದ ಸಾರ್ವಜನಿಕ ರಸ್ತೆ ಪರಿಶೀಲನೆ ನಡೆಸಲು ಅಧಿ ಕಾರಿಯೊಬ್ಬರನ್ನು ಬಿಬಿಎಂಪಿ ನೇಮಿಸಬೇಕು. ಆ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಅಲ್ಲದೇ ಅರ್ಜಿ ಸಂಬಂಧ ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂ ಡಿತು. ಜಕ್ಕಸಂದ್ರ ಎಕ್ಸ್‌ಟೆನನ್‌ನಲ್ಲಿ ಮೊದಲನೇ ಬಿ ಅಡ್ಡರಸ್ತೆಯು ಒಂದು ಸಾರ್ವಜನಿಕ ರಸ್ತೆ. 20 ಅಡಿ ವಿಸ್ತೀರ್ಣದ ಈ ರಸ್ತೆಯನ್ನು ಸಾರ್ವಜನಿಕರು 30- 35 ವರ್ಷದಿಂದ ಬಳಸುತ್ತಿದ್ದಾರೆ.
ಆದರೆ, ಅದನ್ನು ಸ್ಥಳೀಯ ನಿವಾಸಿಗಳಾದ ಎಸ್.ವೆಂಕಟೇಶ ಮೂರ್ತಿ ಮತ್ತವರ ಪತ್ನಿ ಪದ್ಮಾವತಿ ಒತ್ತುವರಿ ಮಾಡಿದ್ದಾರೆ. ರಸ್ತೆ ಮೇಲೆ ಗೋಡೆ ಕಟ್ಟಿದ್ದು, ವಿದ್ಯುತ್, ನೀರು ಕೊಳವೆ ಸಂಪರ್ಕ ಕಡಿತಗೊಳಿಸಿದ್ದಾರೆಂದು ಅರ್ಜಿಯಲ್ಲಿ ದೂರಲಾ ಗಿದೆ. ಈ ಕುರಿತು ಬಿಬಿಎಂಪಿಗೆ 2018ರ ಜು. 26 , 2019ರ ಮಾ.3ರಂದು ಸ್ಥಳೀಯರು ದೂರು ಸಲ್ಲಿಸಿದ್ದರು.
ಜತೆಗೆ, ಕೋರಮಂಗಲ ಠಾಣೆಗೂ 2019ರ ಮಾ.2ರಂದು ದೂರು ನೀಡಲಾಗಿದೆ. ಈವರೆಗೂ ಒತ್ತುವರಿ ತೆರವುಗೊಳಿಸಿ, ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ಆದ್ದರಿಂದ ಮೊದಲನೇ ಬಿ ಅಡ್ಡ ರಸ್ತೆಯ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ಮತ್ತು ಒತ್ತುವರಿದಾರರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.