Advertisement

ಅವತಿಂಕಾ ಪಾತ್ರಕ್ಕೆ ಡಬ್ಬಿಂಗ್‌ ಮಾಡಿಸದಂತೆ ಹೈ ನಿರ್ದೇಶನ

12:42 PM Jun 06, 2017 | |

ಬೆಂಗಳೂರು: “ರಾಜು ಕನ್ನಡ ಮೀಡಿಯಂ’ ಚಿತ್ರದ ನಟಿ ಅವಂತಿಕಾ ಶೆಟ್ಟಿ ಅವರ ಪಾತ್ರಕ್ಕೆ ಬೇರೊಬ್ಬರಿಂದ ಡಬ್ಬಿಂಗ್‌ ಮಾಡಿಸದಂತೆ ಚಿತ್ರದ ನಿರ್ಮಾಪಕರಿಗೆ ಸೋಮವಾರ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಚಿತ್ರದ ನಿರ್ಮಾಪಕರು ತಮ್ಮ ಪಾತ್ರಕ್ಕೆ ಮೂರನೇ ವ್ಯಕ್ತಿಯಿಂದ ಡಬ್ಬಿಂಗ್‌ ಮಾಡಿಸದಂತೆ ಆದೇಶಿಸಬೇಕು ಎಂದು ಅವಂತಿಕಾ ಶೆಟ್ಟಿ  ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅರವಿಂದ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಮುಂದಿನ ವಿಚಾರಣೆಯವರೆಗೆ ಅರ್ಜಿದಾರರ ಪಾತ್ರಕ್ಕೆ ಡಬ್ಬಿಂಗ್‌ ಮಾಡಿಸದಂತೆ ನಿರ್ದೇಶನ ನೀಡಿತು.

ಈ ಬಗ್ಗೆ ಚಿತ್ರ ನಿರ್ಮಾಪಕರು ಮುಚ್ಚಳಿಕೆ ಪತ್ರ ನೀಡುವಂತೆಯೂ ತಾಕೀತು ಮಾಡಿತು. ನಟಿಯ ಅರ್ಜಿ ಬಗ್ಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿ ಚಿತ್ರ ನಿರ್ಮಾಕಪರಿಗೆ ಸೂಚಿಸಿ, ಜೂ.21ಕ್ಕೆ ವಿಚಾರಣೆ ಮುಂದೂಡಿದೆ. ಅವತಿಂಕಾ ಶೆಟ್ಟಿ ಪರ ವಕೀಲರು ವಾದಿಸಿ, ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ನಟಿಸುವ ಸಂಬಂಧ ಚಿತ್ರದ ನಿರ್ಮಾಪಕ ಹಾಗೂ ತಮ್ಮ ಕಕ್ಷಿದಾರರ ನಡುವೆ 14 ಲಕ್ಷ ರೂ. ಸಂಭಾವನೆಗೆ ಒಪ್ಪಂದವಾಗಿದೆ.

ಆದರೆ ಚಿತ್ರೀಕರಣದ ಕೊನೆಯ ಹಂತದಲ್ಲಿ, ನಟಿಯನ್ನು ಕಡೆಗಣಿಸಿ ಅವರ ಪಾತ್ರಕ್ಕೆ ಬೇರೊಬ್ಬರಿಂದ ಡಬ್ಬಿಂಗ್‌ ಮಾಡಿಸಲಾಗುತ್ತಿದೆ. ಇದರಿಂದ ತಮ್ಮ ಕಕ್ಷಿದಾರರ ವೃತ್ತಿಜೀವನಕ್ಕೆ ತೊಂದರೆಯಾಗಲಿದೆ. ಹೀಗಾಗಿ ಅವರ ಪಾತ್ರದ ಡಬ್ಬಿಂಗ್‌ ನಡೆಸದಂತೆ ತಡೆ ನೀಡಬೇಕು ಎಂದು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next