Advertisement

ಜಿ.ಪಂ, ತಾಲೂಕು ಪಂಚಾಯತ್‌ ಚುನಾವಣೆ ವಿಳಂಬ: ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

12:58 PM Dec 14, 2022 | Team Udayavani |

ಬೆಂಗಳೂರು: ಜಿ.ಪಂ, ತಾಲೂಕು ಪಂಚಾಯತ್‌ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದಕ್ಕೆ ಹೈಕೋರ್ಟ್‌ ಸರ್ಕಾರಕ್ಕೆ ದಂಡ ಹಾಕಿ ಚಾಟಿ ಬೀಸಿದೆ.

Advertisement

ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.

ಇದನ್ನೂ ಓದಿ: ಹಣ ತೆಗೆದುಕೊಳ್ಳುವಾಗಲೇ ಅಧಿಕಾರಿಗಳ ದಾಳಿ.. ಸಾಕ್ಷ್ಯ ನಾಶಕ್ಕೆ ನೋಟಿನ ಕಂತೆಯನ್ನೇ ನುಂಗಲು ಯತ್ನಿಸಿದ ಪೊಲೀಸ್

ಪದೇ ಪದೇ ‌ಕಾಲಾವಕಾಶ ಕೇಳಿದ ಸರ್ಕಾರ ಹಾಗೂ ಸೀಮಾ ನಿರ್ಣಯ ಆಯೋಗದ ನಡೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಹೈಕೋರ್ಟ್, 24 ವಾರ ಕಾಲಾವಕಾಶ ನೀಡಿದರೂ ಸರ್ಕಾರ ಒಂದಿಂಚು ಮುಂದಕ್ಕೆ ಹೋಗಿಲ್ಲ. ಸರ್ಕಾರದ ಈ ನಡೆ ನ್ಯಾಯಾಲಯದ ಆದೇಶಗಳನ್ನು ‌ನಿಷ್ಕ್ರೀಯಗೊಳಿಸುವಂತಹದ್ದಾಗಿದೆ. ಜ.30ರಗೆ ತಾ.ಪಂ, ಜಿ.ಪಂ ಕ್ಷೇತ್ರ ನಿಗದಿ ಹಾಗೂ ಮೀಸಲಾತಿ ಪ್ರಕ್ರಿಯೆ ‌ಪೂರ್ಣಗೊಳಿಸುವಂತೆ ಗಡುವು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next