Advertisement

ಸಂತೆ ಮೈದಾನ ಕಬಳಿಸುವ ಯತ್ನಕ್ಕೆ ಹೈಕೋರ್ಟ್ ತಡೆಯಾಜ್ಞೆ

06:19 PM Jul 07, 2022 | Team Udayavani |

ಕೋಲಾರ: ನಗರದ ಟಿ.ಚನ್ನಯ್ಯ ಸಂತೆ ಮೈದಾನದ ಸ್ವತ್ತಿಗೆ ನಗರಸಭಾ ಸದಸ್ಯರಿಂದ ಅತಿಕ್ರಮಣ ಮತ್ತು ಕಬಳಿಕೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಚೆನ್ನಯ್ಯ ಅವರ ಪುತ್ರ ಜಿಪಂ ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ ತಿಳಿಸಿದ್ದಾರೆ.

Advertisement

ಸಂತೆ ಮೈದಾನದ ರೈತರು, ತಕರಾರಿ ವ್ಯಾಪಾರಸ್ಥರು, ಮತ್ತು ಬೆಳೆಗಾರರು ಸಂತೆ ಮೈದಾನಕ್ಕೆ ಕಾಯ್ದಿರಿಸಿದ ಸ್ವತ್ತಿನಲ್ಲಿ ಅಂದರೆ 0.22 ಗುಂಟೆ (6. 29 ಎಕರೆ ಪೈಕಿ) ಈ ಹಿಂದೆ ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ವೇಳೆಯಲ್ಲಿ ಸ್ವತ್ತಿನಲ್ಲಿ ಏಕಾಏಕಿ ನಗರಸಭಾ ಸದಸ್ಯರಾದ ಮಂಜುನಾಥ್‌ ಮತ್ತು ಇದಾಯತ್‌ವುಲ್ಲಾ ರವರುಗಳು ದೌರ್ಜನ್ಯದಿಂದ ಕೊಳವೆ ಬಾವಿ ಮತ್ತು ಗುಂಡಿ ತೋಡಿದ್ದರು.

ಕೋರ್ಟಿನ ಹಿಂದಿನ ಆದೇಶವಿದ್ದರೂ ಕಾನೂನು ಬಾಹಿರವಾಗಿ ಸಂತೆ ಮೈದಾನದ ಪ್ರದೇಶದಲ್ಲಿ ಸ್ವತ್ತನ್ನು ಮತ್ತು ವ್ಯಾಪಾರ ಮಾಡುವ ಸ್ಥಳವನ್ನು ದ್ವಂಸ ಮಾಡಿದ್ದಾರೆ ಎಂದು ದೂರಿರುವ ಅವರು, ಈ ಬಗ್ಗೆ ಸಂತೆ ಮೈದಾನದ ವರ್ತಕರು ಮತ್ತು ರೈತರು ಹೈಕೋರ್ಟ್‌ ಮೊರೆ ಹೋಗಿ ದಾಖಲೆಗಳನ್ನು ಹಾಜರು ಪಡಿಸಿದ್ದು, ಕೋರ್ಟ್‌ ಈ ಬಗ್ಗೆ ನಗರಸಭಾ ಆಯುಕ್ತರಿಗೆ ನೋಟಿಸ್‌ ಜಾರಿ ಮಾಡಿದ್ದರು. ಆಯುಕ್ತರು ಕೋರ್ಟ್‌ಗೆ ಹಾಜರಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ದಾಖಲೆ ಮತ್ತು ಹಿಂದೆ ಆದೇಶದನ್ವಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಹಿಂದೆ ನಗರಸಭಾ ಆಯುಕ್ತರಿಗೆ ನೀಡಿದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿ ರುವು ದಿಲ್ಲ. ಆದ್ದರಿಂದ ವ್ಯಾಪರಸ್ಥರು ಮತ್ತು ರೈತರು ನಗರ ಸಭಾ ಆಯುಕ್ತರು ಇದಕ್ಕೆ ಪ್ರೇರಣೆ ಕೊಟ್ಟಿದ್ದಾರೆಂದು ಆರೋಪಿಸಿದ್ದಾರೆ. ಈ ಪ್ರಕರಣದ ಪರವಾಗಿ ಉಚ್ಛ ನ್ಯಾಯಾಲಯದಲ್ಲಿ ವಕೀಲರಾದ ಎಂ.ಶಿವಪ್ರಕಾಶ್‌ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next