Advertisement

ಆಸ್ತಿ ತೆರಿಗೆ ಪಾವತಿಸಲು ಹೈಕೋರ್ಟ್‌ ಆದೇಶ

12:09 PM Aug 31, 2018 | Team Udayavani |

ಬೆಂಗಳೂರು: ಮೈಸೂರು ರಾಜಮನೆತನದ ಸಹೋದರಿಯರು ಬೆಂಗಳೂರು ಅರಮನೆ ಮೈದಾನದಲ್ಲಿ ಹೊಂದಿರುವ ಭೂಮಿಗೆ ಆಸ್ತಿ ತೆರಿಗೆ ಪಾವತಿಸಲೇಬೇಕು ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

Advertisement

ನ್ಯಾ.ವಿನೀತ್‌ ಕೊಠಾರಿ ಹಾಗೂ ನ್ಯಾ.ಎಸ್‌. ಸುಜಾತಾ ಅವರಿದ್ದ ವಿಭಾಗೀಯ ಪೀಠ ಗುರುವಾರ ಈ ತೀರ್ಪು ನೀಡಿದೆ. ಪ್ರತಿವಾದಿಗಳಾದ ಮೀನಾಕ್ಷಿದೇವಿ ಹಾಗೂ ಕಾಮಾಕ್ಷಿದೇವಿ ಅವರು ಅರಮನೆ ಮೈದಾನದಲ್ಲಿ ಹೊಂದಿರುವ ತಲಾ 28 ಎಕರೆ ಭೂಮಿಗೆ 1999ರಿಂದ 2005ರವರೆಗೆ ಆಸ್ತಿ ತೆರಿಗೆ ಪಾವತಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.

ಜತೆಗೆ ಸಕ್ಷಮ ಪ್ರಾಧಿಕಾರ ತೆರಿಗೆ ಕಟ್ಟಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬಹುದು ಎಂದೂ ಅಭಿಪ್ರಾಯಪಟ್ಟಿದೆ. 1984ರಲ್ಲಿ ತಲಾ 28 ಎಕರೆ ಪಾಲು ಪಡೆದಿದ್ದ ಸಹೋದರಿಯರಿಬ್ಬರಿಗೂ ಆಸ್ತಿ ತೆರಿಗೆ ಪಾವತಿಸುವಂತೆ ಐಟಿ ಇಲಾಖೆ ಸೂಚಿಸಿತ್ತು. ಈ ಕ್ರಮ ಪ್ರಶ್ನಿಸಿ ಸಹೋದರಿಯರು ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳನ್ನು ಮಾನ್ಯ ಮಾಡಿದ್ದ ಪ್ರಾಧಿಕಾರ, ಅರ್ಜಿದಾರರು ಹೊಂದಿರುವ ನಗರ ಪ್ರದೇಶದ ಭೂಮಿಯು ಆಸ್ತಿ ತೆರಿಗೆ ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು 2014ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಐಟಿ ಇಲಾಖೆ ಹೈಕೋರ್ಟ್‌ ಮೊರೆ ಹೋಗಿತ್ತು. ಇದೀಗ ಐಟಿ ಇಲಾಖೆ ಅರ್ಜಿಗಳನ್ನು ಮಾನ್ಯ ಮಾಡಿ, ಈ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ನೂರಾರು ಕೋಟಿ ರೂ. ತೆರಿಗೆಯನ್ನು ರಾಜಮನೆತನದ ಸಹೋದರಿಯರು ಪಾವತಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next