Advertisement

High Court Order: ಹಳೆ ಸಂಹಿತೆ ಸಿಆರ್‌ಪಿಸಿಯ ಮೊದಲ ಎಫ್ಐಆರ್‌ ರದ್ದು!

02:39 AM Oct 10, 2024 | Team Udayavani |

ಬೆಂಗಳೂರು: “ಭಾರತೀಯ ನಾಗರಿಕ ಸುರಕ್ಷ ಸಂಹಿತೆ’ (ಬಿಎನ್‌ಎಸ್‌ಎಸ್‌) 2023 ಜಾರಿಗೆ ಬಂದ ಮೇಲೆ ಪೊಲೀಸರು ಹಿಂದಿನ “ದಂಡ ಪ್ರಕ್ರಿಯಾ ಸಂಹಿತೆ’ (ಸಿಆರ್‌ಪಿಸಿ) ಅಡಿಯಲ್ಲಿ ಎಫ್ಐಆರ್‌ ದಾಖಲಿಸಿಕೊಳ್ಳುವುದನ್ನು ಒಪ್ಪಲಾಗದು ಎಂದು ಹೇಳಿರುವ ಹೈಕೋರ್ಟ್‌, ಬಿಎನ್‌ಎಸ್‌ಎಸ್‌ ಜಾರಿಗೆ ಬಂದ ದಿನ 2024ರ ಜುಲೈ 1ರಂದು ಅತ್ಯಾಚಾರ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಸಿಆರ್‌ಪಿಸಿ ಅಡಿಯಲ್ಲಿ ರಾಜ್ಯದಲ್ಲಿ ದಾಖಲಾಗಿದ್ದ ಮೊದಲ ಎಫ್ಐಆರ್‌ ಅನ್ನು ರದ್ದುಪಡಿಸಿ ಆದೇಶಿಸಿದೆ.

Advertisement

ಬಿಎನ್‌ಎಸ್‌ಎಸ್‌ ಜಾರಿಗೆ ಬಂದ ಮೇಲೆ ಸಿಆರ್‌ಪಿಸಿ ಸೆಕ್ಷನ್‌ 154ರಡಿ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್‌ ರದ್ದುಪಡಿಸಲಾಗುತ್ತಿದೆ. ಆದರೆ ದೂರಿನ ಗಂಭೀರತೆ ಆಧರಿಸಿ ಪ್ರಕರಣವನ್ನು ಪೊಲೀಸರಿಗೆ ಹಿಂದಿರುಗಿಸಲಾಗುತ್ತಿದ್ದು, ಸಿಆರ್‌ಪಿಸಿ ಸೆಕ್ಷನ್‌ 154 ಬದಲಿಗೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ 173 ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 193ರಡಿ ವಿಚಾರಣ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್‌ ಆದೇಶಿಸಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ಠಾಣೆಯಲ್ಲಿ ತಮ್ಮ ವಿರುದ್ಧ ಸಿಆರ್‌ಪಿಸಿ ಸೆಕ್ಷನ್‌ 376, 323, 506 ಹಾಗೂ 420 ಅಡಿಯಲ್ಲಿ 2024ರ ಜುಲೈ 1ರಂದು ದಾಖಲಾಗಿರುವ ಎಫ್ಐಆರ್‌ ಹಾಗೂ ಲಿಂಗಸುಗೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಡಿ ಗ್ರೂಪ್‌ ನೌಕರ ಅರುಣ್‌ ಕುಮಾರ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಆರ್‌. ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ಈ ಆದೇಶ ಮಾಡಿದೆ. ಅಲ್ಲದೆ ವಿಚಾರಣ ನ್ಯಾಯಾಲಯಗಳು ಮತ್ತು ಪೊಲೀಸ್‌ ಠಾಣೆಗಳಿಗೆ ಕೆಲವು ನಿರ್ದೇಶನಗಳನ್ನೂ ಹೈಕೋರ್ಟ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next