Advertisement

Actor Jackie Shroff ಹೆಸರು ಬಳಕೆಗೆ ಹೈಕೋರ್ಟ್‌ ನಿಷೇಧ

01:45 AM May 19, 2024 | Team Udayavani |

ಹೊಸದಿಲ್ಲಿ: ನಟ ಜಾಕಿಶ್ರಾಫ್ ಅವರ ವ್ಯಕ್ತಿತ್ವ ಹಾಗೂ ಪ್ರಚಾರದ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದಿಲ್ಲಿ ಹೈಕೋರ್ಟ್‌ ಒಂದಷ್ಟು ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸಿದೆ. ಕೃತಕ ಬುದ್ಧಿಮತ್ತೆ, ಚಾಟ್‌ಬಾಟ್‌ಗಳು ಹಾಗೂ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ನಟನ ಹೆಸರು, ಧ್ವನಿ ಅಥವಾ ಫೋಟೋಗಳನ್ನು ಅನುಮತಿಯಿ ಲ್ಲದೆ, ಯಾವುದೇ ವಾಣಿಜ್ಯ ಉದ್ದೇಶ ಗಳಿಗೆ ಬಳಸದಂತೆ ಆದೇಶಿಸಿದೆ. ಜಾಕಿಶ್ರಾಫ್ ಹೆಸರು ಬಳಸಿದ್ದ ಕೆಲವು ಅಶ್ಲೀಲ ವೀಡಿಯೋಗಳ ಲಿಂಕ್‌ಗಳನ್ನು ಅಳಿಸುವಂತೆ ನ್ಯಾ| ಸಂಜೀವ್‌ ನರುಲ ಅವರಿದ್ದ ಪೀಠವು ತನ್ನ ಮಧ್ಯಾಂತರ ಆದೇಶದಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next