ಬೆಂಗಳೂರು: ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಬಿಜೆಪಿಯಿಂದ ಪಕ್ಷದಿಂದ ಅಭ್ಯರ್ಥಿಗಳ ಘೋಷಣೆ ಆಗಲಿದೆ. ಕೋರ್ ಕಮಿಟಿ ಸಭೆ ಇದೆ. ಕಾಯ್ದು ನೋಡೋಣ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ತೀರ್ಮಾನ ಆಗಲಿದೆ ಎಂದರು.
ಅಭ್ಯರ್ಥಿ ಯಾರೆಂದು ನಾನು ಘೋಷಣೆ ಮಾಡಲು ಆಗುವುದಿಲ್ಲ. ಪಕ್ಷದಿಂದ ಘೋಷಣೆ ಮಾಡುತ್ತಾರೆ. ವೈಯಕ್ತಿಕ ಅಭಿಪ್ರಾಯ ಹೇಳುವುದು ಸೂಕ್ತವಲ್ಲ. ಪಕ್ಷದಿಂದ ಒಟ್ಟಿಗೆ ಕೂತು ನಿರ್ಧಾರ ಮಾಡುತ್ತಾರೆ ಎಂದರು.
ಇದನ್ನೂ ಓದಿ:‘ಉಪಕದನ’ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಬಗ್ಗೆ ಇಂದು ಸಂಜೆ ಕೋರ್ ಕಮಿಟಿ ನಿರ್ಧಾರ:ಸೋಮಶೇಖರ್
ಮಾಸ್ಕ್ ದಂಡ ಏರಿಕೆ ಕುರಿತು ಮಾತನಾಡಿದ ಅವರು, ಜನತೆ ಸುರಕ್ಷಿತ ದೃಷ್ಟಿಯಿಂದ ಮಾಸ್ಕ್ ದಂಡ ಏರಿಸಲಾಗಿದೆ. ಇದು ಬಹುಕಾಲ ಎದುರಿಸಬೇಕಾದ ಕಾಯಿಲೆ. ನಾವು ವೈರಸ್ ನಡುವೆಯೇ ಬದುಕಬೇಕಿದೆ. ಮಾಸ್ಕ್ ಕೋವಿಡ್-19 ಸೋಂಕಿಗೆ ರಾಮಬಾಣವಾಗಿದೆ. ಮಾಸ್ಕ್ ಬಳಕೆ ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದರು.
ನಾನೂ ಸೋಂಕಿತನಾಗಿದ್ದೆ, ಈ ವಿಚಾರ ಹಗುರವಾಗಿ ತೆಗೊದುಕೊಳ್ಳ ಬಾರದು ನಾನು ಅನಿಭವಿಸಿದ್ದು, ಮತ್ಯಾರಿಗೂ ಆಗಬಾರದು ಎಂದು ಡಿಸಿಎಂ ಹೇಳಿದರು.