Advertisement

ಸರ್ಕಾರದ ಆದೇಶಕ್ಕೆ ಹೈ ತಡೆ

11:47 AM Feb 15, 2017 | Team Udayavani |

ಬೆಂಗಳೂರು: ವಸತಿ ಯೋಜನೆ ಫ‌ಲಾನುಭವಿಗಳ ಆಯ್ಕೆ ಅಧಿಕಾರವನ್ನು ಗ್ರಾಮ ಸಭೆಯ ಬದಲು ಶಾಸಕರ ನೇತೃತ್ವದ ಜಾಗೃತ ಸಮಿತಿಗೆ ವಹಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಮಂಗಳವಾರ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ. 

Advertisement

ಗ್ರಾಮ ಸಭೆಯ ಶಾಸನಬದ್ಧ ಅಧಿಕಾರವನ್ನು ಮೊಟಕುಗೊಳಿಸಿ 2015ರಲ್ಲಿ ವಸತಿ ಇಲಾಖೆ ಹೊರಡಿಸಿದ್ದ ಆದೇಶ ರದ್ದುಗೊಳಿಸಬೇಕೆಂದು ಕೋರಿ ಉಡುಪಿಯ ನಂದನಾ ರೆಡ್ಡಿ ಹಾಗೂ ದಾಮೋದರ ಆಚಾರ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾ. ಆರ್‌.ಬಿ. ಬೂದಿಹಾಳ ಅವರಿದ್ದ ವಿಭಾಗೀಯಪೀಠ,

ವಸತಿ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ಜಾರಿಗೊಳಿಸಿತು. 

ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಸಂವಿಧಾನಾತ್ಮಕವಾಗಿ ಹಾಗೂ ಗ್ರಾಮ ಸ್ವರಾಜ್‌ ಕಾಯಿದೆಯ ಪ್ರಕಾರ ಯಾವುದೇ ಯೋಜನೆಗಳಿಗೆ ಫ‌ಲಾನುಭವಿಗಳ ಆಯ್ಕೆಯ ಹಕ್ಕು ಮತ್ತು ಅಧಿಕಾರ ಗ್ರಾಮ ಸಭೆಯದ್ದು. ಆದರೆ ಸರ್ಕಾರ ಹೊರಡಿಸುವ ಕೆಲವು ಸುತ್ತೋಲೆಗಳು ಗ್ರಾಮ ಸಭೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮತ್ತು ಸಂವಿಧಾನದತ್ತ  ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next