Advertisement
ಘಟನೆಯ ಬೆನ್ನಲ್ಲೇ ಅಲರ್ಟ್ ಆಗಿರುವ ಪೊಲೀ ಸರು ಆತಿಕ್‌ನ ಮನೆಯಿ ರುವಂಥ ಪ್ರಯಾಗ್‌ರಾಜ್‌ನ ಚಕಿಯಾ ಪ್ರದೇಶದಲ್ಲಿ ಭದ್ರತೆ ಯನ್ನು ಬಿಗಿಗೊಳಿಸಿದ್ದು, ನಿರಂತರವಾಗಿ ಗಸ್ತು ತಿರುಗು ತ್ತಿದ್ದಾರೆ. ರಾಜ್ಯಾದ್ಯಂತ ಹೈ ಅ ಲರ್ಟ್ ಘೋಷಿಸಲಾಗಿದೆ. ಉತ್ತರಪ್ರದೇಶದ ಎಲ್ಲ ಜಿಲ್ಲೆಗಳಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಭದ್ರತಾ ಕಾರಣಕ್ಕಾಗಿ ಪ್ರಯಾಗ್‌ರಾಜ್‌ನಾದ್ಯಂತ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಐವರು ಐಪಿಎಸ್ ಅಧಿ ಕಾರಿಗಳನ್ನು ಪ್ರಯಾಗ್‌ರಾಜ್‌ಗೆ ಮೇಲ್ವಿಚಾರಣೆಗಾಗಿ ಕಳು ಹಿಸಿ ಕೊಡಲಾಗಿದೆ.
Related Articles
Advertisement
ಅಪರಾಧ ಜಗತ್ತಿನಲ್ಲಿ ಹೆಸರು ಮಾಡಲು ಈ ಕೃತ್ಯ: ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ಬಂದು ಸಮಾಜವಾದಿ ಪಕ್ಷದ ಮಾಜಿ ಸಂಸದ, ಗ್ಯಾಂಗಸ್ಟರ್ ಆತಿಕ್ ಅಹ್ಮದ್ ಮತ್ತು ಅಶ್ರಫ್ನನ್ನು ಗುಂಡಿಕ್ಕಿ ಕೊಲೆಗೈದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಲವಲೇಶ್ ತಿವಾರಿ(22), ಮೋಹಿತ್ ಅಲಿಯಾಸ್ ಸನ್ನಿ(23) ಮತ್ತು ಅರುಣ್ ಮೌರ್ಯ(18) ಎಂಬವರೇ ಕೊಲೆಗಡುಕರು. ಅಪರಾಧ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಬೇಕು ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿ ಇವರು ಹೇಳಿಕೊಂಡಿದ್ದಾರೆ. ಮೂವರ ವಿರುದ್ಧವೂ ಬೇರೆ ಬೇರೆ ಪ್ರಕರಣಗಳಲ್ಲಿ ಕೇಸು ದಾಖಲಾಗಿತ್ತು. ಅವರು ಮಾದಕವ್ಯಸನಿಗಳೂ ಆಗಿದ್ದರು. ಕುಟುಂಬದ ಜತೆಗೆ ಸಂಪರ್ಕ ಹೊಂದಿರಲಿಲ್ಲ. ಯಾವುದೇ ಉದ್ಯೋಗವನ್ನೂ ಮಾಡುತ್ತಿರಲಿಲ್ಲ. ಆತಿಕ್ ಅಹ್ಮದ್ ಗ್ಯಾಂಗ್ ಅನ್ನು ನಿರ್ಮೂಲನೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಪಡೆಯಬೇಕು ಎಂಬ ಉದ್ದೇಶವನ್ನು ಇವರು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯವೆಸಗಿದ ಮೂವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಪ್ರಯಾಗ್ ರಾಜ್‌ನ ಕೋರ್ಟ್ ರವಿವಾರಆದೇಶ ನೀಡಿದೆ.
ಆರು ಮಂದಿ ಸಾವು: ಉತ್ತರ ಪ್ರದೇಶದಲ್ಲಿ ಬಹುಚರ್ಚಿತವಾಗಿರುವ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಆರು ಮಂದಿ ಪೊಲೀಸರ ಜತೆಗಿನ ಗುಂಡಿನ ಚಕಮಕಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಹತ್ತು ಮಂದಿ ವಿರುದ್ಧ ಎಫ್ಐಆರ್‌ನಲ್ಲಿ ಆರೋಪ ಮಾಡಲಾಗಿದೆ.
ಪತ್ರಕರ್ತರಿಗೆ ಮಾರ್ಗಸೂಚಿ: ಮೂವರು ಆರೋಪಿಗಳು ಮಾಧ್ಯಮ ಪ್ರತಿನಿಧಿಗಳಂತೆ ಕೆಮೆರಾ, ಮೈಕ್‌ನೊಂದಿಗೆ ಬಂದು ಅತೀಕ್-ಅಶ್ರಫ್ರನ್ನು ಕೊಲೆ ಮಾಡಿರುವ ಬೆನ್ನಲ್ಲೇ ಕೇಂದ್ರ ಸರಕಾರವು ಪತ್ರಕರ್ತರ ಸುರಕ್ಷತೆ ಮತ್ತು ಭದ್ರತೆಗಾಗಿ ಹೊಸ ಮಾರ್ಗಸೂಚಿ ಸಿದ್ಧಪಡಿಸಲು ಮುಂದಾಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಗದರ್ಶನದ ಮೇರೆಗೆ ಗೃಹ ಇಲಾಖೆಯು ಈ ಮಾರ್ಗಸೂಚಿ ಸಿದ್ಧಪಡಿಸಲಿದೆ.
ಯುಪಿಎ ಸರಕಾರಕ್ಕೆ ನೆರವಾಗಿದ್ದ ಒಂದು ಮತಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಅಸುನೀಗಿರುವ ಅತೀಕ್ ಅಹ್ಮದ್‌ನ ಒಂದು ಮತ ನೆರವಾಗಿ ಬಂದಿತ್ತು. 2008ರಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ-ಭಾರತ ಪರಮಾಣು ಒಪ್ಪಂದ ಬೇಕೋ ಬೇಡವೋ ಎಂಬ ನಿರ್ಣಯದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಪರ ಮತ ಹಾಕಲು ಆತನನ್ನು ಬಿಗಿ ಭದ್ರತೆಯಲ್ಲಿ ಸಂಸತ್‌ಗೆ ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಆತ ಸಮಾಜವಾದಿ ಪಕ್ಷದಿಂದ ಫೂಲ್‌ಪುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ. ಈ ಬಗ್ಗೆ ಹಿರಿಯ ಲೇಖಕ ರಾಜೇಶ್ ಸಿಂಗ್ ಬರೆದಿರುವ “ಬಾಹುಬಲೀಸ್ ಆಫ್ ಇಂಡಿಯನ್ ಪಾಲಿಟಿಕ್ಸ್: ಫ್ರಂ ಬುಲೆಟ್ ಟು ಬ್ಯಾಲೆಟ್’ (Baahubalis of Indian Politics: From Bullet to Ballot) ಎಂಬ ಕೃತಿಯಲ್ಲಿ ಉಲ್ಲೇಖೀಸಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೇ ಸಂವಿಧಾನವನ್ನೂ ರೂಪಿಸಿದ್ದಾರೆ. ಈ ಸಂವಿಧಾನ ಮತ್ತು ನಮ್ಮ ನೆಲದ ಕಾನೂನಿಗೆ ಶ್ರೇಷ್ಠವಾದ ಸ್ಥಾನಮಾನವಿದೆ. ಈ ಸಂವಿಧಾನದೊಂದಿಗೆ ಆಟವಾಡಲು ಯಾರಿಗೂ ಬಿಡಬಾರದು.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ