Advertisement
ಅಲ್ಲದೆ ಸರಯೂ ನದಿಯ ಘಾಟ್‌ಗಳ ಬಳಿ ಯಾತ್ರಾ ರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ, ತೊಂದರೆಗಳು ಆಗದಂತೆ ತಡೆಯುವ ನಿಟ್ಟಿನಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಇದಕ್ಕಾ ಗಿ 2.48 ಕೋಟಿ ರೂ.ಗಳ ವರೆಗಿನ ಉಪಕರಣಗಳನ್ನು ಖರೀದಿಸಲಾಗಿದೆ. ಇದರಲ್ಲಿ 4 ಹಡಗುಗಳು, 10 ಥ್ರೋ ಬಾಲ್, 10 ಲೈಫ್ ರಿಂಗ್ಸ್, 15 ಲೈಫ್ ಜಾಕೆಟ್ಸ್, 10 ರೆಸ್ಕೂé ಟ್ಯೂಬ್ಸ್, 2 ಡ್ರ್ಯಾಗನ್ ಲೈಟ್‌ಗಳೂ ಸೇರಿವೆ.
ಅತ್ಯಾಧುನಿಕ ಕ್ರ್ಯಾಶ್ ರೇಟೆಡ್ ಬೊಲ್ಲಾರ್ಡ್ಸ್
ಮಂದಿರ ಸಂಕೀರ್ಣದ ಸುತ್ತಾ ಕ್ರ್ಯಾಶ್ ರೇಟೆಡ್ ಬೊಲ್ಲಾರ್ಡ್ಸ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದು ಸಂಕೀರ್ಣದ ಗೋಡೆಗಳಿಗೆ ವಾಹನಗಳಿಂದಾಗುವ ಹಾನಿ ಯನ್ನು ತಪ್ಪಿಸು ತ್ತದೆ. ಅಲ್ಲದೇ ಜನ್ಮಭೂಮಿ ಪಥದ ಮಾರ್ಗ ವಾಗಿ ಚಲಿಸುವ ಎಲ್ಲ ವಾಹನಗಳನ್ನು ಸ್ಕ್ಯಾನ್ ಮಾಡಲಿದೆ. ಸಂಕೀರ್ಣದ ಕಟ್ಟಡಕ್ಕೆ ಗಾಡಿ ಢಿಕ್ಕಿ ಹೊಡೆಯುವ ಪರಿಸ್ಥಿತಿ ಬಂದರೆ ಕೇವಲ 3 ಸೆಕೆಂಡ್‌ಗಳಲ್ಲಿ ನೆಲದಲ್ಲಿ ಹುದುಗಿರುವ ಬೊಲ್ಲಾರ್ಡ್ಸ್‌ಗಳು ಮೇಲೆದ್ದು ಗಾಡಿಯನ್ನು ಅಡ್ಡಗಟ್ಟಲಿವೆ ಅದರ ಜತೆಗೆ ಟೈಯರ್ ಕಿಲ್ಲರ್ಸ್ ಭದ್ರತೆಯೂ ಇದ್ದು, ಇದು ವಾಹನಗಳ ಟೈರ್‌ಗಳನ್ನೇ
ಪಂಕ್ಚರ್ ಮಾಡಲಿದೆ. ವಿಶೇಷ ಕಾರ್ಯಪಡೆ ತಂಡ ನಿಯುಕ್ತಿ
ಅಯೋಧ್ಯೆ ಕಟ್ಟಡದ ಕಾವಲಿಗಾಗಿಯೇ 135 ಸಿಬಂದಿಯನ್ನೊಳಗೊಂಡ ವಿಶೇಷ ಕಾರ್ಯಪಡೆ ನಿಯೋಜಿಸಲಾಗುತ್ತಿದ್ದು, ಇದಕ್ಕಾಗಿ 5 ಕೋಟಿ ರೂ.ಗಳನ್ನು ರಾಜ್ಯಸರಕಾರ ವ್ಯಯಿಸಿದೆ. ಸಿಬಂದಿ ಸದಾ ಬುಲೆಟ್ ಪ್ರೋಫ್ ಜಾಕೆಟ್‌ಗಳನ್ನು ಧರಿಸಿಕೊಂಡು ಶಸ್ತ್ರ ಸಜ್ಜಿತರಾಗಿ ಇರಲಿದ್ದಾರೆ. ಭದ್ರತಾ ಸಿಬಂದಿಯ ವಾಹನಗಳಿಗಾಗಿಯೇ 1.02 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಹಿದೆ. ಇನ್ನು ಮಂದಿರದ ಒಳಗಿನ ಅಗ್ನಿ ಅವಘಡಗಳನ್ನು ತಡೆಯುವ ವ್ಯವಸ್ಥೆಗಾಗಿಯೇ 1.44 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.
Related Articles
11 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸ ಲಾಗುತ್ತಿದ್ದು, ಇದಕ್ಕಾಗಿ 8.56 ಕೋಟಿ ರೂ.ವೆಚ್ಚದಲ್ಲಿ ನಿಯಂತ್ರಣ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗಿದೆ. ಇದರೊಂದಿಗೆ ರಾತ್ರಿ ವೇಳೆ ಮಂದಿರ ಸಂಕೀರ್ಣದ ಕಾವಲಿಗೆ ಅಗತ್ಯವಾಗಿರುವಂಥ ಇರುಳು ಗೋಚರತೆ ಭದ್ರತಾ ವ್ಯವಸ್ಥೆ(ನೈಟ್ ವಿಷನ್ ಸಿಸ್ಟಮ್ ), ಡ್ರೋನ್ ನಿಗ್ರಹ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ.
Advertisement