Advertisement

ಹೆಸ್ಕಾಂ ಕಚೇರಿಗೆ ತೆರಳುವ ಮಾರ್ಗ ಹೊಂಡಗುಂಡಿ : ಗ್ರಾಹಕರು ನೀರಿನಲ್ಲಿ ಜಾರಿ ಬೀಳುವ ಸಾಧ್ಯತೆ

01:05 PM Sep 24, 2020 | Team Udayavani |

ಕುಮಟಾ: ಪಟ್ಟಣದ ಹೆಗಡೆ ಸರ್ಕಲ್‌ ಬಳಿಯಿರುವ ತಾಲೂಕು ವಿದ್ಯುತ್‌ ನಿರ್ವಹಣಾ ಘಟಕಕ್ಕೆ ತೆರಳುವ ರಸ್ತೆ ಸಂಪೂರ್ಣ
ಹೊಂಡಗುಂಡಿಯಾಗಿದ್ದು, ವಿದ್ಯುತ್‌ ಬಿಲ್‌ ಪಾವತಿಸಲು ಬರುವ ಗ್ರಾಹಕರು ಕೊಳಚೆ ನೀರಿನಲ್ಲಿ ಜಾರಿ ಬೀಳುವ ಸಾಧ್ಯತೆ
ಅಧಿಕವಾಗಿದೆ.

Advertisement

ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆಗೆ ನಿಗಮದ ಆವರಣದ ತುಂಬ ನೀರು ತುಂಬಿಕೊಂಡಿದ್ದು, ಅಲ್ಲಲ್ಲಿ ಹೊಂಡಮಯವಾಗಿದೆ. ಪ್ರತಿದಿನ ನೂರಾರು ಜನ ಇಲ್ಲಿ ವಿದ್ಯುತ್‌ ಬಿಲ್‌ ಪಾವತಿಸಲು ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಆಗಮಿಸುವುದರಿಂದ ಹೊಂಡಮಯ ಆವರಣದಲ್ಲಿ ಬೀಳುವ ಸಾಧ್ಯತೆ ಹೆಚ್ಚಿದೆ. ಇನ್ನು ದ್ವಿಚಕ್ರ ವಾಹನ ಸವಾರರು ಈ ಭಾಗದಲ್ಲಿ ಸಂಚರಿಸಬೇಕಾದರೆ ಆಯತಪ್ಪಿ ಬಿದ್ದ ಉದಾಹರಣೆಯೂ ಸಾಕಷ್ಟಿದೆ. ಹೆಸ್ಕಾಂ ಶೀಘ್ರ ತಗ್ಗು, ಹೊಂಡಗಳಿಂದ ಕೂಡಿದ ಪ್ರದೇಶಕ್ಕೆ ಮಣ್ಣು ತುಂಬಿ ನೀರು ನಿಲ್ಲದಂತೆ ಸೂಕ್ತ ಕ್ರಮವಹಿಸಬೇಕಾಗಿದ್ದು, ಆ ಮೂಲಕ ವಾಹನ ಸವಾರರಿಗೆ
ಹಾಗೂ ಹೆಸ್ಕಾಂ ಗ್ರಾಹಕರಿಗೆ ಸೂಕ್ತ ಸ್ಥಳದ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹೆಸ್ಕಾಂ ಕಚೇರಿ ಆವಾರದಲ್ಲಿ ನೀರು ತುಂಬಿ, ಮಣ್ಣಿನ ಗುಂಡಿಯಾಗುತ್ತಿರುವುದು ಸತ್ಯ. ಕಚೇರಿ ತಗ್ಗಿನ ಭಾಗದಲ್ಲಿರುವುದರಿಂದ ರಸ್ತೆ ಬದಿಯ ನೀರು ಇಲ್ಲಿಗೆ ಬಂದು ಶೇಖರಣೆಗೊಳ್ಳುತ್ತಿದೆ. ಈ ಬಗ್ಗೆ ಶೀಘ್ರ ಕ್ರಮವಹಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.
– ಎಂ. ಪಠಾಣ,  ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ, ಕುಮಟಾ

ಹೆಸ್ಕಾಂ ಕಚೇರಿ ಆವಾರದಲ್ಲಿ ನೀರು ನಿಂತು ಕೊಚ್ಚೆ ಗುಂಡಿಯಾಗಿರುವುದರಿಂದ ಓಡಾಡುವುದು ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಪ್ರತೀ ಮಳೆಗಾಲದ ಸಮಯದಲ್ಲೂ ಇಲ್ಲಿ ನೀರು ತುಂಬಿಕೊಂಡಿರುತ್ತದೆ. ಇದರಿಂದ ವೃದ್ಧರಿಗೆ ಹಾಗೂ ಮಹಿಳೆಯರಿಗೆ ಹೆಸ್ಕಾಂ ಕಚೇರಿಯಲ್ಲಿ ವ್ಯವಹರಿಸಲು ಓಡಾಟ ನಡೆಸುವುದು ಕಷ್ಟಸಾಧ್ಯ. ಶೀಘ್ರದಲ್ಲೇ ಸಂಬಂಧಿಸಿದ ಇಲಾಖೆ ಕಚೇರಿಯ ಆವಾರದಲ್ಲಿ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.
– ಚಂದ್ರಹಾಸ ನಾಯ್ಕ, ಚಿತ್ರಗಿ ಹೆಸ್ಕಾಂ ಗ್ರಾಹಕ

Advertisement

Udayavani is now on Telegram. Click here to join our channel and stay updated with the latest news.

Next