Advertisement

ಪಾಕ್‌ನಿಂದ ಭಾರತಕ್ಕೆ ಬರುತ್ತಿದ್ದ 300 ಕೋಟಿ ರೂ. ಮೌಲ್ಯದ ಹೆರಾಯಿನ್‌ ವಶ

08:26 PM Apr 15, 2021 | Team Udayavani |

ನವದೆಹಲಿ: ಬಂಗಾಳ ಕೊಲ್ಲಿ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಸುಮಾರು 300 ಕೋಟಿ ರೂ. ಮೌಲ್ಯದ 30 ಕೆಜಿ ಹೆರಾಯಿನ್‌ ಕಳ್ಳಸಾಗಣೆ ಮಾಡುತ್ತಿದ್ದ ಮೀನುಗಾರಿಕೆ ದೋಣಿಯೊಂದನ್ನು ಗುಜರಾತ್‌ ಕರಾವಳಿಯಾಚೆ ಕರಾವಳಿ ಭದ್ರತಾ ಪಡೆ ಹಾಗೂ ಉಗ್ರ ನಿಗ್ರಹ ದಳ (ಎಟಿಎಸ್‌) ಸಿಬ್ಬಂದಿ, ವಶಕ್ಕೆ ಪಡೆದಿದ್ದಾರೆ.

Advertisement

ಖಚಿತ ಮಾಹಿತಿಯ ಮೇರೆಗೆ ಎರಡು ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ಗುಜರಾತ್‌ ಕರಾವಳಿ ವ್ಯಾಪ್ತಿಯಲ್ಲಿ ಬರುವ ಕಛ್ ಜಿಲ್ಲೆಯ ಜಖೌ ತೀರದ ಬಳಿ ದೋಣಿಯನ್ನು ಪತ್ತೆ ಹಚ್ಚಿ, ಹೆರಾಯಿನ್‌ ಜೊತೆಗೆ ಅದರಲ್ಲಿದ್ದ 8 ಪಾಕಿಸ್ತಾನಿ ನಾಗರಿಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಭಾರತೀಯ ಕರಾವಳಿ ಪಡೆಯ (ಐಸಿಜಿ) ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ :ಧರ್ಮಶಾಲಾ : ಕರೇರಿಯ ಬೆಟ್ಟ ಪ್ರದೇಶದಲ್ಲಿ ಪಾಕ್‌ ಮೊಬೈಲ್‌ ಸಿಗ್ನಲ್‌ ಪತ್ತೆ!

ಕರಾವಳಿ ಪಡೆ ಹಾಗೂ ಎಟಿಎಸ್‌ನ ಸತತ ಕಣ್ಗಾವಲಿನಿಂದಾಗಿ ಕಳ್ಳಸಾಗಣೆದಾರರಿಗೆ ಕಳೆದೊಂದು ವರ್ಷದಿಂದ ತೀವ್ರ ಹಿನ್ನಡೆಯಾಗುತ್ತಿದೆ. ಈವರೆಗೆ ಸಮುದ್ರ ಮಾರ್ಗದಲ್ಲಿ ಬರುತ್ತಿದ್ದ ಅಂದಾಜು 5,200 ಕೋಟಿ ರೂ. ಮೌಲ್ಯದ 1.6 ಟನ್‌ನಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next