ಪೊಲೀಸ್ ಅಧಿಕಾರಿಯನ್ನೇ ಮಚ್ಚಿನಿಂದ ಕೊಚ್ಚಲು ಮುಂದಾದ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಕೇರಳದ ನೂರಂದ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಗಿರುವ ಅರುಣ್ ಕುಮಾರ್ ಇತ್ತೀಚೆಗೆ ಸಂಜೆ ವೇಳೆ ಗಸ್ತು ತಿರುಗುವಾಗ ಈ ಘಟನೆ ನಡೆದಿದೆ. ಜೀಪ್ ನಿಲ್ಲಿಸಿ, ಅರುಣ್ ಜೀಪಿನಿಂದ ಕೆಳಗಿಳಿಯುತ್ತಿದ್ದಂತೆಯೇ ಅಲ್ಲೇ ಸ್ಕೂಟರ್‌ನಲ್ಲಿದ್ದ ವ್ಯಕ್ತಿಯೊಬ್ಬ ಮಚ್ಚು ಬೀಸಿದ್ದಾನೆ.
ಅರುಣ್ ಅವರ ತೋಳಿಗೆ ಗಾಯವಾಗಿದೆ. ಆದರೂ ಸುಮ್ಮನಾಗದ ಅರುಣ್, ಆರೋಪಿಯನ್ನು ನೆಲಕ್ಕೆ ಬೀಳಿಸಿಕೊಂಡು ಆತನ ಬಳಿಯಿದ್ದ ಮಚ್ಚನ್ನು ಕಸಿದುಕೊಂಡಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು, ಜೀಪಿನೊಳಗೆ ಕೂರಿಸಿದ್ದಾರೆ. ಆರೋಪಿಯನ್ನು ನೂರಂದ್ ವಾಸಿ ಸುಗಥನ್ ಎಂದು ಗುರುತಿಸಲಾಗಿದೆ.