Advertisement

ಪಾರಂಪರಿಕ ಜಲಮೂಲ ಸಂರಕ್ಷಣೆ ಅಗತ್ಯ

11:07 AM Sep 04, 2019 | Suhan S |

ದೊಡ್ಡಬಳ್ಳಾಪುರ: ಮಳೆ ನೀರು ರಕ್ಷಣೆ ಮಾಡದಿದ್ದರೆ ಅಂತರ್ಜಲದ ಮಟ್ಟ ಕುಸಿದು, ನೀರು ಪೋಲಾಗುವುದರ ಜೊತೆಗೆ ಮಣ್ಣು ಸವಕಳಿಯಾಗಿ ಫಲವತ್ತೆತೆಯೂ ಸಹ ಕ್ಷೀಣಿಸುತ್ತದೆ ಎಂದು ಕೃಷಿ ವಿವಿ ವಿಸ್ತರಣೆ ನಿರ್ದೆಧೀ ಶಕ ಡಾ. ಎಂ.ಎಸ್‌.ನಟರಾಜ್‌ ತಿಳಿಸಿದರು.

Advertisement

ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಜಿಲ್ಲಾಡಳಿತದ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕಿನ ರೈತರಿಗೆ ಹಮ್ಮಿಕೊಂಡಿದ್ದ ಜಲಶಕ್ತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆರೆ, ಕುಂಟೆ, ಬಾವಿಗಳು ಬತ್ತಿ ಹೋಗಿವೆ. ನಂತರ ಅಂತರ್ಜಲ ಪಾತಾಳ ಸೇರುತ್ತಿದ್ದಂತೆ ಬಾವಿಗಳನ್ನು ಬಳಸಿದರು. ಮುಂದೆ ಸಾಗಿ ಕೈ ಪಂಪ್‌ಗಳ ಬಳಕೆ ಹೆಚ್ಚಾಯಿತು. ಆದರೆ, ಇದೀಗ ಕೊಳವೆ ಬಾವಿಗಳನ್ನು ಹಾಕಿ ನೀರನ್ನು ಭೂಮಿಯಿಂದ ತೆಗೆದು ಕುಡಿಯಲು ಬಳಸುವ ಸ್ಥಿತಿ ಎದುರಾಗಿದೆ. ಇದರಿಂದ ಫ್ಲೋರೈಡ್‌ನ‌ಂತಹ ವಿಷಕಾರಿ ವಸ್ತುಗಳು ಹೆಚ್ಚಾಗಿವೆ. ಶುದ್ಧ ನೀರಿಗೂ ಕುತ್ತು ಬಂದೊದಗಿದೆ. ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಇದಕ್ಕೆ ಪ್ರತಿಯೊಬ್ಬರೂ ಬೆಲೆ ತೆರಬೇಕಾಗುತ್ತದೆ ಎಂದರು.

ಗಿಡ ನೆಟ್ಟು ಮಳೆ ಪ್ರಮಾಣ ಹೆಚ್ಚಿಸಿ: ಸಕಲ ಜೀವ ಸಂಕುಲಕ್ಕೂ ನೀರನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆರೆ, ಕುಂಟೆ, ಬಾವಿಗಳನ್ನು ಉಳಿಸುವುದು ಎಲ್ಲರ ಕೆಲಸವಾಗಬೇಕು. ನೀರು ಪೋಲಾಗುವುದನ್ನು ತಡೆಗಟ್ಟುವ ಕಡೆ ಗಮನ ಹರಿಸಬೇಕು. ಮಳೆ ನೀರಿನ ಕೊಯ್ಲನ್ನು ಬಳಸಿಕೊಂಡು ನೀರು ವ್ಯರ್ಥವಾಗುವುದನ್ನು ತಡೆಗಟ್ಟಬೇಕು. ಇದರ ಜೊತೆಗೆ ಗಿಡಗಳನ್ನು ನೆಡುವ ಮೂಲಕ ಮಳೆ ಪ್ರಮಾಣ ಹೆಚ್ಚಿಸುವಂತೆ ಮಾಡಬೇಕು ಎಂದರು.

ಜಲಶಕ್ತಿ ಆಂದೋಲನ: ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನ ಗೌಡ ಮಾತನಾಡಿ, ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯವು ನೀರಿನ ಸಂರಕ್ಷಣೆ ಹಾಗೂ ಮಳೆ ನೀರು ಕೊಯ್ಲಿನ ಬಗ್ಗೆ ಜನತೆಗೆ ಅರಿವು ಮೂಡಿಸಲು ಜಲಶಕ್ತಿ ಆಂದೋಲನವನ್ನು ಪ್ರಾರಂಭಿಸಲಾಗಿದೆ. ಈ ಆಂದೋಲನ ಮುಖ್ಯ ಉದ್ದೇಶವೆಂದರೆ ನಮ್ಮ ದೇಶದಲ್ಲಿ 254 ಜಿಲ್ಲೆಗಳನ್ನು ಗುರುತಿಸಿ, ಈ ಜಿಲ್ಲೆಗಳಲ್ಲಿ ನೀರಿನ ಸಮಗ್ರ ನಿರ್ವಹಣೆ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಗಳ ಅಳವಡಿಕೆ, ಮಳೆ ನೀರು ಕೊಯ್ಲು, ಬರ ನಿರೋಧಕ ತಳಿಗಳು, ಕಡಿಮೆ ನೀರನ್ನು ಬೇಡುವ ಬೆಳೆಗಳು, ನೀರಿನ ಸಂರಕ್ಷಣೆಗೆ ಅಂತರ ಬೇಸಾಯ ಪದ್ಧತಿಗಳು, ಹೊದಿಕೆ ಬೆಳೆಗಳು ಇತ್ಯಾದಿ ಅಂಶಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವುದಾಗಿದೆ ಎಂದರು.

Advertisement

ನೀರಿನ ಸಂರಕ್ಷಣೆಗೆ ಕ್ರಮ ಅಗತ್ಯ: ಜಿಲ್ಲೆಯ ಮಳೆಯ ಹಂಚಿಕೆಯ ಚಿತ್ರಣ, ಅಕಾಲಿಕ ಮಳೆ, ಬರ ಮತ್ತು ಅಂತರ್ಜಲ ಬರಿದಾಗಿರುವುದರಿಂದ ಮಳೆಯಾಶ್ರಿತ ಪ್ರದೇಶಗಳು ಬರಡಾಗಿವೆ. ಹೀಗಾಗಿ ನೀರಿನ ಸಂರಕ್ಷಣೆ ಅನಿವಾರ್ಯವಾಗಿದೆ. ಬೆಳೆಗಳ ಇಳುವರಿ ಹೆಚ್ಚಿಸಲು ಬಿದ್ದ ಮಳೆ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಲು ನೀರಿನ ಸಂರಕ್ಷಣೆ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಜಿಪಂ ಸದಸ್ಯ ಎಚ್.ಅಪ್ಪಯ್ಯಣ್ಣ, ಜಲಶಕ್ತಿ ಅಭಿಯಾನದ ಜಂಟಿ ಕಾರ್ಯ ದರ್ಶಿ ಜಿ. ಆರ್‌. ರಾಘವೇಂದರ್‌, ನೋಡಲ್ ಅಧಿಕಾರಿ, ನಂದಿನಿ ದೇವಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ರಾಜ ಸುಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ನೀರಿನ ಸಂರಕ್ಷಣೆ ಮಾಡುವುದಾಗಿ ಪ್ರಮಾಣ ಸ್ವೀಕರಿಸಿದರು.

ತಾಂತ್ರಿಕ ಸಮಾವೇಶದಲ್ಲಿ ಕೃಷಿ ವಿವಿಯ ಹಿರಿಯ ವಿಜ್ಞಾನಿಗಳಾದ ಡಾ. ಎಂ. ಎನ್‌. ತಿಮ್ಮೇಗೌಡ, ನೀರು ಹಾಗೂ ಕೃಷಿ ಬದುಕು ಎಂಬ ವಿಷಯದ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಮುಖ್ಯ ವಿಜ್ಞಾನಿ ಡಾ. ಮೂಡಲ ಗಿರಿಯಪ್ಪ, ಮಳೆಯಾಶ್ರಿತ‌ ಭೂಮಿಯಲ್ಲಿ ಮಣ್ಣು ಮತ್ತು ನೀರಿನ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಪ್ರಾಧ್ಯಾಪಕರಾದ (ತೋಟಗಾರಿಕೆ), ಡಾ. ಕೃಷ್ಣ ಮನೋಹರ್‌, ನಿಖರ ಕೃಷಿ ಹಾಗೂ ಸೂಕ್ಷ್ಮ ನೀರಾವರಿಯ ಬಗ್ಗೆ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ನೀರಾವರಿ ಪದ್ಧತಿ ಮತ್ತು ಸೂಕ್ಷ್ಮ ನೀರಾವರಿಯಿಂದ ನೀರಿನ ಸಂರಕ್ಷಣೆಯ ವಸ್ತು ಪ್ರದರ್ಶನವನ್ನು ಏರ್ಪ ಡಿಸಲಾಗಿತ್ತು. ಜಿಪಂ ಉಪ ಕಾರ್ಯದರ್ಶಿ ಕೆ. ಕರಿ ಯಪ್ಪ, ಉಪ ಕೃಷಿ ನಿರ್ದೇಶಕರಾದ ಎಂ. ಸಿ. ವಿನುತ, , ಕುಮಾರ ಸ್ವಾಮಿ, ರೇಷ್ಮೆ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕ ಎಸ್‌. ಆರ್‌.ನಾಗರಾಜ, ಹಿರಿಯ ಸಹಾ ಯಕ ತೋಟಗಾರಿಕಾ ನಿರ್ದೇಶಕ ಸುಬ್ಬಣ್ಣ, ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಸ್ವಾಮಿ, ಇತರೆ ಅಭಿ ವೃದ್ಧಿ ಇಲಾಖೆಗಳ ಸಿಬ್ಬಂದಿ, ಜಿಕೆವಿಕೆ ಯಿಂದ ಗ್ರಾಮೀಣ ಅನುಭವಕ್ಕಾಗಿ ಆಗಮಿಸಿರುವ ವಿದ್ಯಾರ್ಥಿ ಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next