Advertisement

ಜ. 25ರಿಂದ ಹೆರಿಟೇಜ್‌ ವಿಲೇಜ್‌ ಮ್ಯೂಸಿಯಂ ವೀಕ್ಷಣೆ ಅವಕಾಶ

11:10 PM Jan 17, 2021 | Team Udayavani |

ಉಡುಪಿ: ಸರಕಾರದ ಮಾರ್ಗ ಸೂಚಿಯಂತೆ ಕೆಲವು ಬದಲಾವಣೆಯೊಂದಿಗೆ ಮಣಿಪಾಲದ ಹಸ್ತ ಶಿಲ್ಪ ಹೆರಿಟೇಜ್‌ ವಿಲೇಜ್‌ ಮ್ಯೂಸಿಯಂನಲ್ಲಿ ಜ.25ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

Advertisement

ವಿಶೇಷವಾಗಿ ಗೈಡ್‌ಗಳ ಸಹಾಯವಿಲ್ಲದೆ ವೀಕ್ಷಕರೇ ಸಂಗ್ರಹಾಲಯವನ್ನು ಒಂದು ಗಂಟೆಗಳ ಕಾಲ ನೋಡಲು “ಆನ್‌ಗೆçಡ್‌ ಟೂರ್‌’ನ್ನು ಹೊಸದಾಗಿ ಪರಿಚಯಿಸಲಾಗಿದೆ. ಇದರಂತೆ ವೀಕ್ಷಕರು ಸದ್ಯ ಸದರ್ನ್ ಟೂರ್ ಸಂಗ್ರಹಾಲಯದ ದಕ್ಷಿಣ ಭಾಗವನ್ನು ವೀಕ್ಷಿಸ ಬಹುದಾಗಿದೆ.

ಬೆಳಗ್ಗೆ 10ರಿಂದ ಮಧ್ಯಾಹ್ನ 1 ರ ವರೆಗೆ ಮತ್ತು ಮಧ್ಯಾಹ್ನ 2ರಿಂದ 5ರ ವರೆಗೆ ಸಂಗ್ರಹಾಲಯ ತೆರೆದಿರುತ್ತದೆ. ಪೂರ್ವಾಹ್ನ 12.15ರ ವರೆಗೆ ಹಾಗೂ ಸಂಜೆ 4.30ರ ವರೆಗೆ ಪ್ರವೇಶಾವಕಾಶ ಹಾಗೂ ಪ್ರವೇಶ ಪತ್ರ ನೀಡಲಾಗುತ್ತದೆ. ಗೈಡ್‌ಗಳ ಸಹಾಯದೊಂದಿಗೆ ಟೂರ್‌ ಬಯಸುವವರು ಮುಂಗಡವಾಗಿ ತಿಳಿಸಿದರೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ತಂಡದಲ್ಲಿ ಕನಿಷ್ಠ 8ರಿಂದ 10 ಜನರು ಇದ್ದರೆ ಅನುಕೂಲ.

ಶನಿವಾರ, ರವಿವಾರ ಟೂರ್ ಆಫ್ ಹೆರಿಟೇಜ್‌ ವಿಲೇಜ್‌, ನಾರ್ದನ್‌, ಸದರ್ನ್ ಟೂರ್‌, ಸೇರಿದಂತೆ ಒಟ್ಟು ಮೂರು ವಿಭಾಗದಲ್ಲಿ ಗೈಡೆಡ್‌ ಟೂರ್‌ಗಳನ್ನು ಪರಿಚಯಿಸಲಾಗಿದೆ. ವೀಕ್ಷಕರಿಗೆ ಅನು ಕೂಲವಾಗುವ ಟೂರ್‌ನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಪ್ರತೀ ಶನಿವಾರ ಮತ್ತು ರವಿವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಟೂರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಟೂರ್‌ ಆಫ್ ಹೆರಿಟೇಜ್‌ ವಿಲೇಜ್‌ಗೆ ಬೆಳಗ್ಗೆ 10 ಮತ್ತು ಸಂಜೆ 4ಕ್ಕೆ ಪ್ರವೇಶಕ್ಕೆ ಅವಕಾಶವಿದೆ. ವಿಶೇಷ ಟೂರ್‌ ವ್ಯವಸ್ಥೆ ಬೇಕಾದರವರು ಕಚೇರಿಯನ್ನು ಸಂಪರ್ಕಿಸ ಬಹುದಾಗಿದೆ. ಮಾಹಿತಿಗಾಗಿ hastashilpatrust@gmail.com, https://heritage villagemanipal.org  ನ್ನು ಸಂಪರ್ಕಿಸ ಬಹುದಾಗಿದೆ.

204 ವರ್ಷಗಳ ಇತಿಹಾಸ ಅನಾವರಣ :

Advertisement

ಗತ ಕಾಲದ ಸಾಂಸ್ಕೃತಿಕ ವೈಭವವನ್ನು ನೆನಪಿಸುವ ಐತಿಹಾಸಿಕ ಕಟ್ಟಡಗಳು, ಹಿರಿಯರು, ಪೂರ್ವಜರು ನೂರಾರು ವರ್ಷಗಳ ಕಾಲ ಬಾಳಿ ಬದುಕಿದ ಮನೆಗಳು, ಇತಿಹಾಸದಲ್ಲೇ ಕಾಣಲು ಸಿಗದ ಅಪರೂಪದ ವಿಜಯನಗರ ಕಾಲದ ಪಾರಂಪರಿಕ ದಾರು ಶಿಲ್ಪ ರಚನೆಗಳು, 12ರಿಂದ 14ನೇ ಶತಮಾನದ ಕಾಲದಲ್ಲಿ ನಿರ್ಮಿಸಿದ ಮಂದಿರ, 12ನೇ ಶತಮಾನದ ವೀರಶೈವ ಜಂಗಮರ ಮಠ, 204 ವರ್ಷಗಳ ಸುಂದರ ಕಾಷ್ಟ ರಚನೆಗಳಿಂದ ಕೂಡಿದ ಕೇರಳ ಶೈಲಿಯಲ್ಲಿ ನಿರ್ಮಿಸಲಾದ ಕುಂಜೂರು ಚೌಕಿ ಮನೆ, ಕರಾವಳಿಯ ವಿಶೇಷವಾಗಿ ತುಳುನಾಡಿನ ಜಾನಪದ ಹಾಗೂ ವಿಶಿಷ್ಟವಾಗಿ ಆರಾಧಿಸಲ್ಪಡುವ ಭೂತಾರಾಧನೆಗೆ ಸಂಬಂಧಿಸಿದ ಮರದ ರಚನೆಗಳು ಹೆರಿಟೇಜ್‌ ವಿಲೇಜ್‌ ಮ್ಯೂಸಿಯಂನಲ್ಲಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next