Advertisement

“ಮುತ್ತಣ್ಣ’ಚಿತ್ರವನ್ನು ನೋಡಲಿಕ್ಕೆ ಇಲ್ಲಿವೆ ಏಳು ಕಾರಣಗಳು!

05:13 PM Oct 09, 2017 | |

ಕಳೆದ ವಾರದಂತೆ ಈ ವಾರ ಸಹ ಹಲವು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ವಿಶೇಷವೆಂದರೆ, ಈ ವಾರ ಶಿವರಾಜಕುಮಾರ್‌ ಅವರ ಹಳೆಯ ಚಿತ್ರವಾದ “ಮುತ್ತಣ್ಣ’ ಸಹ ಮತ್ತೂಮ್ಮೆ ಬಿಡುಗಡೆಯಾಗುತ್ತಿರುವುದು. “ಮುತ್ತಣ್ಣ’ ಚಿತ್ರವು 1994ರಲ್ಲಿ ಬಿಡುಗಡೆಯಾಗಿತ್ತು. ಈಗ 23 ವರ್ಷಗಳ ನಂತರ 2ಕೆ 7.1 ಡಿಜಿಟಲ್‌ ಸೌಂಡ್‌ನ‌ಲ್ಲಿ ಬಿಡುಗಡೆಯಾಗುತ್ತಿದೆ.

Advertisement

ಚಿತ್ರದ ನಿರ್ಮಾಪಕ ಎಲ್‌. ಸೋಮಣ್ಣ ಗೌಡರೇ ಹಳೆಯ ಚಿತ್ರಕ್ಕೆ ಸುಮಾರು 30 ಲಕ್ಷ ಖರ್ಚು ಮಾಡಿ, ಹೊಸ ತಂತ್ರಜ್ಞಾನ ಅಳವಡಿಸಿ, ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲಾ ಸರಿ, 23 ವರ್ಷಗಳ ಹಿಂದೆ  ಬಿಡುಗಡೆಯಾದ “ಮುತ್ತಣ್ಣ’ ಚಿತ್ರವನ್ನು ಪ್ರೇಕ್ಷಕರು ಏಕೆ ನೋಡಬೇಕು. ಯಾಕೆ ನೋಡಬೇಕು ಎಂಬುದಕ್ಕೆ ನಿರ್ಮಾಪಕ ಏಳು ಕಾರಣಗಳನ್ನು ನೀಡಿದ್ದಾರೆ. ಆ ಕಾರಣಗಳು ಇಲ್ಲಿವೆ.

1) ಪ್ರಥಮ ಬಾರಿಗೆ ಶಿವರಾಜಕುಮಾರ್‌ ಅವರು ಸ್ವಂತ ಬ್ಯಾನರ್‌ನಿಂದ ಹೊರಗಡೆ ಬ್ಯಾನರ್‌ನಲ್ಲಿ ನಟಿಸಿರುವ ಚಿತ್ರ.

2) ಪ್ರಥಮ ಬಾರಿಗೆ ಶಿವರಾಜಕುಮಾರ್‌ ಅವರು ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರ.

3) ಪ್ರಥಮ ಬಾರಿಗೆ ಗೀತಾ ಶಿವರಾಜಕುಮಾರ್‌ ಅವರು ಕಾಸ್ಟೂಮ್‌ ಡಿಸೈನ್‌ ಮಾಡಿದ ಚಿತ್ರ.

Advertisement

4) ಪ್ರಥಮ ಬಾರಿಗೆ ಶಿವರಾಜಕುಮಾರ್‌ ಅವರ ಸುಪುತ್ರಿ ನಿರುಪಮಾ ಶಿವರಾಜಕುಮಾರ್‌ ನಟಿಸಿರುವ ಚಿತ್ರ.

5) ಪ್ರಥಮ ಬಾರಿಗೆ ಹಂಸಲೇಖ ಅವರು “ಮುತ್ತಣ್ಣ ಪೀಪಿ ಊದುವ …’ ಹಾಡಿಗೆ 80 ಪಿಟೀಲುಗಳನ್ನು ಬಳಸಿರುವ ಚಿತ್ರ.

6) ಪ್ರಥಮ ಬಾರಿಗೆ ಛಾಯಾಗ್ರಾಹಕ ಆರ್‌. ಮಧುಸೂಧನ್‌ ಅವರು ಎರಡು ಕ್ಯಾಮೆರಾಗಳನ್ನು ಬಳಸಿ ಸಂಪೂರ್ಣ ಚಿತ್ರವನ್ನು ಚಿತ್ರೀಕರಿಸಿದ ಚಿತ್ರ.

7) ಪ್ರಥಮ ಬಾರಿಗೆ ಚೆನ್ನೈನ ಸ್ಟಂಟ್‌ ಮಾಸ್ಟರ್‌ ರಾಜ ರಾಜೇಶ್‌ ಅವರು, ಶಿವರಾಜಕುಮಾರ್‌ ಅವರ ದ್ವಿಪಾತ್ರದ ಸಾಹಸಗಳನ್ನು ಸಂಯೋಜಿಸಿರುವ ಚಿತ್ರ.

ಇವೇ ಆ ಏಳು ವಿಶೇಷ ಕಾರಣಗಳು. ಅಂದಹಾಗೆ, “ಮುತ್ತಣ್ಣ’ ಚಿತ್ರವನ್ನು ಎಂ.ಎಸ್‌. ರಾಜಶೇಖರ್‌ ನಿರ್ದೇಶಿಸಿದ್ದು, ಚಿತ್ರಕ್ಕೆ ಹಂಸಲೇಖ ಅವರು ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ. ಇನ್ನು ಚಿತ್ರದಲ್ಲಿ ಶಿವರಾಜಕುಮಾರ್‌ ಅವರೊಂದಿಗೆ ಸುಪ್ರಿಯಾ, ಶಶಿಕುಮಾರ್‌, ಭವ್ಯಶ್ರೀ ರೈ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next