Advertisement

Choo Mantar: ಕೊನೆಗೂ ಅಖಾಡಕ್ಕೆ ಶರಣ್

02:40 PM Jan 10, 2025 | Team Udayavani |

ಶರಣ್‌ ನಟನೆಯ “ಛೂ ಮಂತರ್‌’ ಚಿತ್ರ ಇಂದು ತೆರೆಕಾಣುತ್ತಿದೆ. ಶರಣ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. “ಕರ್ವ’ ನವನೀತ್‌ ನಿರ್ದೇಶನ ಈ ಚಿತ್ರಕ್ಕಿದ್ದು, ತರುಣ್‌ ಶಿವಪ್ಪ ಈ ಚಿತ್ರದ ನಿರ್ಮಾಪಕರು. “ಛೂ ಮಂತರ್‌’ ಮೇಲೆ ನಿರ್ದೇಶಕ ನವನೀತ್‌ ಕೂಡಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Advertisement

ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನವನೀತ್‌, “”ಛೂ ಮಂತರ್‌ ಇದೊಂದು ಫ್ಯಾನ್ಸಿ ಲೋಕ. ಹೈಪರ್‌ ಲಿಂಕ್‌ ಇರುವ ಮೂರು ಭಿನ್ನ ಕಥೆಗಳು ಜೊತೆಗೆ ಸಾಗುವ ಚಿತ್ರ ಇದಾಗಿದ್ದು, ನಾಯಕ ಎಲ್ಲಾ ಕಥೆಯಲ್ಲಿ ಇರುತ್ತಾನೆ. ಶರಣ್‌ ಅವರು ಇಲ್ಲಿವರೆಗೆ ಪೂರ್ಣ ಪ್ರಮಾಣದ ಹಾರರ್‌ ಸಿನಿಮಾಗಳನ್ನು ಮಾಡಿಲ್ಲ. ಇದು ಅವರ ಕೆರಿಯರ್‌ನ ಮೊದಲ ಔಟ್‌ ಅಂಡ್‌ ಔಟ್‌ ಹಾರರ್‌ ಸಿನಿಮಾ. ನಾವು ಉತ್ತರಾಖಂಡ್‌ಗೆ ತೆರಳಿ ಹಿಮದಲ್ಲಿ ಶೂಟಿಂಗ್‌ ಮಾಡಿದ್ದೇವೆ’ ಎಂಬುದು ನಿರ್ದೇಶಕ ನವನೀತ್‌ ಮಾತು.

ನಟ ಶರಣ್‌ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ನಾನು ಒಬ್ಬ ಕಾಮಿಡಿಯನ್‌. ಆದರೆ ನನಗೆ ವೈಯಕ್ತಿವಾಗಿ ಹಾರರ್‌ ಚಿತ್ರಗಳು ಅಂದರೆ ತುಂಬಾ ಇಷ್ಟ. “ಛೂ ಮಂತರ್‌’ ನಾನು ಇಷ್ಟುಪಟ್ಟು ಮಾಡಿದ ಚಿತ್ರ. ಚಿತ್ರ ಇಷ್ಟು ಅದ್ಭುತವಾಗಿ ಮೂಡಿಬರಲು ಕಾರಣ ನವನೀತ್‌. ನಾನು ಅವರ ಗ್ರೌಂಡ್‌ನ‌ಲ್ಲಿ ಒಬ್ಬ ಆಟಗಾರ ಅಷ್ಟೇ. ಚಿತ್ರದಲ್ಲಿ ಕಾಮಿಡಿ ಇದೆಯಾ ಅನ್ನುವುದು ಎಲ್ಲರ ಪ್ರಶ್ನೆ. ಈ ಚಿತ್ರದಲ್ಲಿ ಹಾರರ್‌ ಇದೆ, ಕಾಮಿಡಿನೂ ಇದೆ. ಆದರೆ ಈ ಚಿತ್ರದಲ್ಲಿ ದೆವ್ವ ಬರೋದು ಹೆದರಿಸಲು, ನಗಿಸಲು ಅಲ್ಲ. ಬೇರೆ ಕಾಮಿಡಿ ದೃಶ್ಯಗಳು ಇವೆ. ಚಿತ್ರದಲ್ಲಿ ಗೌತಮ್‌ ಅನ್ನುವ ದೆವ್ವ ಓಡಿಸುವವನ ಪಾತ್ರ ನನ್ನದು. ಜನರಿಗೆ ಸಂಪೂರ್ಣ ಮನರಂಜನೆ ಈ ಚಿತ್ರದ ಮೂಲಕ ಸಿಗಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next