ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಕಸ್ಟಮ್ಸ್ ಇನ್ಸ್‌ಪೆಕ್ಟರ್ ಆಗಿದ್ದ ಹೇಮರಾಜ್ ಗುರ್ಜರ್ ಎಂಬಾರ ಸಿಐಎಸ್‌ಎಫ್ ಮಹಿಳಾ ಪೊಲೀಸ್ ಕಾನ್‌ಸ್ಟೆàಬಲ್ ಮೇಲೆ ಅತ್ಯಾಚಾರವೆಸಗಿ ರಾಜಿ ಸಂಧಾನದ ಬಳಿಕ ತಣ್ಣಗಾಗಿದ್ದ ಪ್ರಕರಣ ಮತ್ತೆ ವಿವಾದ ಸೃಷ್ಟಿಸಿದೆ.
ರಾಜಿ ಸಂಧಾನದ ಬಳಿಕ ತನ್ನನ್ನು ಮದುವೆಯಾಗಿ ಸಂಸಾರ ಆರಂಭಿಸಿದ ಹೇಮರಾಜ್ ಗುರ್ಜರ್, ಮತ್ತೆ ಬಿಟ್ಟು ಹೋಗಿದ್ದಾರೆ ಎಂದು ಸಂತ್ರಸ್ತ ಮಹಿಳಾ ಕಾನ್‌ಸ್ಟೆàಬಲ್ ಮತ್ತೂಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
2016ರಿಂದ ಕಸ್ಟ್‌ಮ್ಸ್ ಇನ್ಸ್‌ಪೆಕ್ಟರ್ ಆಗಿರುವ ಹೇಮರಾಜ್ ಗುರ್ಜರ್ ತನಗೆ ಪರಿಚಿತನಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದೆವು. ವಿವಾಹ ಮಾಡಿಕೊಳ್ಳುವುದಾಗಿ ನಂಬಿಸಿದ ಹೇಮರಾಜ್ ನಿರಂತರ ಅತ್ಯಾಚಾರ ಎಸಗಿದ್ದು, ಕೊನೆಗೆ ಮದುವೆಯಾಗಲು ನಿರಾಕರಿಸಿದ್ದ ಎಂದು ಆರೋಪಿಸಿ 2017ರ ಮಾರ್ಚ್‌ನಲ್ಲಿ ಸಿಐಎಸ್‌ಎಫ್ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು. ತನಿಖೆ ನಡೆಸಿದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಮಧ್ಯೆ ಹೇಮರಾಜ್ ಈ ಪ್ರಕರಣದಿಂದ ಖುಲಾಸೆಯಾಗುವ ಸಲುವಾಗಿ ರಾಜಿ ಸಂಧಾನ ಮಾಡಿಕೊಳ್ಳಲು ಮುಂದಾಗಿದ್ದ. ಇದಕ್ಕೆ ನಾನೂ ಒಪ್ಪಿದ್ದು, ಅದರಂತೆ “ರಾಜಿ ಸಂಧಾನ’ದ ನಾಟಕವಾಡಿ ಮದುವೆಯ ನೆಪದಲ್ಲಿ ಹಣೆಗೆ ಅರಿಶಿಣ ಕುಂಕುಮ ಇಟ್ಟು ಒಟ್ಟಿಗೆ ಬಾಳ್ಳೋಣ ಎಂದು ಮಾತುಕೊಟ್ಟಿದ್ದ.
ಅದರಂತೆ ಸಂಸಾರ ಆರಂಭಿಸಿದ್ದೆವು. ಆದರೆ, ಕೆಲವೇ ತಿಂಗಳಲ್ಲಿ ತನಗೆ ತಿಳಿಸದೆ ದೆಹಲಿಗೆ ತೆರಳಿ ಮೊದಲನೇ ಪತ್ನಿ ಜೊತೆ ವಾಸಿಸುತ್ತಿದ್ದಾನೆ. ಆದ್ದರಿಂದ ಪ್ರಕರಣದ ಖುಲಾಸೆಯಾಗುವ ಉದ್ದೇಶದಿಂದ ವಿವಾಹದ ನೆಪದಲ್ಲಿ ಅತ್ಯಾಚಾರ ಎಸಗಿ ವಂಚಿಸಿರುವ ಆರೋಪಿ ವಿರುದ್ಧ ಕ್ರಮ ಜರುಗಿಸುಂತೆ ಸಿಐಎಸ್‌ಎಫ್ ಮಹಿಳಾ ಪೊಲೀಸ್ ಕಾನ್‌ಸ್ಟೆàಬಲ್ ದೂರಿನಲ್ಲಿ ಕೋರಿದ್ದಾರೆ ಎಂದು ಯಲಹಂಕ ನ್ಯೂಟೌನ್ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ಮುಂದುವರಿಸಲಾಗಿದ್ದು, ಏರ್ ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳ ಜತೆ ಈಗಾಗಲೇ ಚರ್ಚಿಸಲಾಗಿದೆ. ಆರೋಪಿ ಹೇಮರಾಜ್ ದೆಹಲಿಗೆ ವರ್ಗಾವಣೆ ಮಾಡಿಕೊಂಡು ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿದ್ದು, ನೋಟಿಸ್ ಕಳುಹಿಸಿಕೊಡಲಾಗುವುದು ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿ ಹೇಳಿದ್ದಾರೆ.