ಕುಂದಾಪುರ: ಹೆಮ್ಮಾಡಿ ಕಟ್‌ಬೆಲೂ¤ರು ಗ್ರಾ.ಪಂ. ವ್ಯಾಪ್ತಿಯ ಮನೆ, ನಿವೇಶನ ರಹಿತರು ಅಂತಿಮ ಪಟ್ಟಿಯನ್ನು ಸ್ಥಳೀಯ ಗ್ರಾ.ಪಂ. ವತಿಯಿಂದ ಸಿದ್ಧಪಡಿಸಿ 2 ವರ್ಷ ಕಳೆದರೂ ಈ ತನಕ ಸರಕಾರ ನಿವೇಶನ ಸ್ಥಳ ಮಂಜೂರು ಮಾಡದ ಕ್ರಮವನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರತ್ನ ನಾಡ ತೀವ್ರವಾಗಿ ಖಂಡಿಸಿದರು.
ಹೆಮ್ಮಾಡಿ, ಕಟ್‌ಬೆಲೂ¤ರು ಗ್ರಾ.ಪಂ. ವ್ಯಾಪ್ತಿಯ ಬಡ ನಿವೇಶನ ರಹಿತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಸ್ಥಳ ಲಭ್ಯವಿದ್ದರೂ ಸ್ಥಳೀಯಾಡಳಿತ ನಿವೇಶನ ಸ್ಥಳ ಮಂಜೂರು ಮಾಡುವುದಕ್ಕೆ ವಿಳಂಬ ಧೋರಣೆ ಅನುಸರಿಸುವುದನ್ನು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನೆ°ಲೆಯಲ್ಲಿ ಭೂಮಿಯ ಹಕ್ಕಿನ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಎ. 18ರಂದು ಬೈಂದೂರು ಕ್ಷೇತ್ರ ಶಾಸಕ ಕೆ. ಗೋಪಾಲ ಪೂಜಾರಿ ಮನೆ ಚಲೋ ಹೋರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡ ನಿವೇಶನ ರಹಿತರಿಗೆ ನಿವೇಶನ ಸ್ಥಳ ಹಕ್ಕು ಪತ್ರ ಕೈಗೆ ಸಿಗುವ ತನಕ ಹೋರಾಟವನ್ನು ಹಂತ ಹಂತವಾಗಿ ಮುಂದಕ್ಕೆ ಹಾಕಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿ ಕ್ಷೇತ್ರದ ಶಾಸಕರು ಸಮ್ಮಾನ, ಉದ್ಘಾಟನೆ, ಶಂಕು ಸ್ಥಾಪನೆಯಂತಹ ಜನ ಮರಳು ಕಾರ್ಯಕ್ರಮಗಳಲ್ಲಿ ಮುಳುಗದೆ ಜನಪರವಾದ ನಿವೇಶ ಸ್ಥಳ ಮಂಜೂರು ಮಾಡಲು ಮುಂದಾಗಬೇಕು ಎಂದು ಹೇಳಿದರು.
ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಗೋಪಾಲ ನಾಯ್ಕ ದೇವಲ್ಕುಂದ, ಸಂಜೀವ ಹೆಮ್ಮಾಡಿ, ಶೀಲಾವತಿ ಪಡುಕೋಣೆ, ಪದ್ಮಾವತಿ ಶೆಟ್ಟಿ ಹಾಗೂ ಕುಶಲಾ ಉಪಸ್ಥಿತರಿದ್ದರು.