Advertisement
ಕುಂದಾಪುರ, ಬ್ರಹ್ಮಾವರ, ಕಾರ್ಕಳ ಸೇರಿದಂತೆ ಉಡುಪಿ ಜಿಲ್ಲೆಯ ಎಲ್ಲ ಶೈಕ್ಷಣಿಕ ವಲಯದಲ್ಲಿ ತಿಂಗಳಿಗೆ 3 ಬಾರಿ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರ ಸಿಬಂದಿಯಿಂದ ಚಿಕಿತ್ಸಾ ಶಿಬಿರ ನಡೆಯುತ್ತದೆ. ಅದೇ ರೀತಿ ಬೈಂದೂರು ವಲಯದ ಹೆಮ್ಮಾಡಿಯಲ್ಲಿ ಇಲ್ಲಿನ ಶಾಲೆಯ ಹಳೆಯ ಕಟ್ಟಡದಲ್ಲಿ ತಿಂಗಳಿಗೆ 3 ಶನಿವಾರ ಶಿಬಿರ ನಡೆಯುತ್ತದೆ.
Related Articles
Advertisement
ಅನಾರೋಗ್ಯ ಭೀತಿ
ಸ್ವಚ್ಛ ಮಾಡದೇ ಕೊಠಡಿಯು ಅಸ್ತವ್ಯಸ್ತವಾಗಿದೆ. ಇಲ್ಲಿಗೆ ಬಂದು ಹೋಗುವ ರೋಗಿಗಳು ಹಾಗೂ ಸಿಬಂದಿಗೆ ಮೈಯೆಲ್ಲ ತುರಿಕೆ ಶುರುವಾಗುತ್ತದೆ. ಚಿಕಿತ್ಸೆ ಕೊಡಲು ಬರುವ ನಮಗೆ ಅನಾರೋಗ್ಯ ಭೀತಿ ಕಾಡುತ್ತಿದೆ. ಸಂಬಂಧಪಟ್ಟವರು ಈ ಕೊಠಡಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಿ ಎನ್ನುವುದಾಗಿ ಇಲ್ಲಿನ ಶಿಬಿರಕ್ಕೆ ಆಗಮಿಸುವ ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರದ ಸಿಬಂದಿ ಮನವಿ ಮಾಡಿಕೊಂಡಿದ್ದಾರೆ.
ಕ್ರಮಕೈಗೊಳ್ಳಲಾಗುವುದು
ವಿಕಲಚೇತನ ಪುನರ್ವಸತಿ ಕೇಂದ್ರ ಸಿಬಂದಿಯಿಂದ ನಡೆಯುವ ಚಿಕಿತ್ಸಾ ಶಿಬಿರದ ಕೊಠಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈಗಾಗಲೇ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ನೀರಿನ ಸಂಪರ್ಕ ಸದ್ಯಕ್ಕೆ ಕಷ್ಟ. ಹೊಸತಾಗಿ ಪೈಪ್ ಲೈನ್ ಆಗಬೇಕಿದೆ. ಇದು ಶಿಕ್ಷಣ ಇಲಾಖೆ ಅಧೀನದ ಕೊಠಡಿಯಾಗಿದ್ದು, ಅವರಿಂದ ನಮಗೆ ಯಾವುದೇ ರೀತಿಯ ಸಹಕಾರ ಸಿಗುತ್ತಿಲ್ಲ. -ಯು. ಸತ್ಯನಾರಾಯಣ ರಾವ್, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷರು
ಪ್ರಶಾಂತ್ ಪಾದೆ