ತುಮಕೂರು: ಕಲ್ಪತರು ನಾಡಿನಲ್ಲಿ ಕುಡಿಯುವ ನೀರಿನ ಹಾಹಾಕಾರ ತೀವ್ರವಾಗುತ್ತಿರುವ ಸಂದರ್ಭ ದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ತುಮಕೂರಿನ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನದಿ ನೀರು ಹರಿದು ಬಂದಿದೆ. ನಗರ ಸೇರಿದಂತೆ ವಿವಿದ ಕಡೆಗಳಲ್ಲಿ ಕುಡಿಯುವ ನೀರಿನ ಆಸರೆ ಹೇಮಾವತಿ ನೀರೇ ಆಗಿದ್ದು ಜಿಲ್ಲೆಗೆ 25 ಟಿಎಂಸಿ ನೀರು ಬರಬೇಕಾಗಿದ್ದು ಕಳೆದ ಮುಂಗಾರಿನಲ್ಲಿ 19 ಟಿಎಂಸಿ ನೀರು ಹರಿದಿತ್ತು.
ಜಿಲ್ಲೆಗೆ ಇನ್ನೂ ನೀರು ಹರಿಯಬೇಕಾದ ಸಮಯದಲ್ಲಿ ಸರ್ಕಾರ ನೀರು ಹರಿಯುವುದನ್ನು ನಿಲ್ಲಿಸಿತ್ತು. ಈಗ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ವೇಳೆಯಲ್ಲಿನಮಗೆ ಬರಬೇಕಾಗಿರುವ ನೀರನ್ನು ಬಿಡಬೇಕೆಂದು ಜಿಲ್ಲೆಯ ಬಿಜೆಪಿ ಶಾಸಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿ ದ್ದರು. ಇದರಿಂದ ನೀರು ಹರಿದು ಬರುತ್ತಿರು ವುದು ಜನರಲ್ಲಿ ಸಂತಸ ಮೂಡಿಸಿದೆ.
ನಗರಕ್ಕೆ ಕುಡಿಯುವ ನೀರು ಒದಗಿಸುವ ಬುಗಡನಹಳ್ಳಿ ಕೆರೆಗೆ ಹೇಮಾವತಿ ನೀರು ತಲುಪುತ್ತಲೇ ಸಂತಸ ಗೊಂಡ ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಕುಡಿಯುವ ನೀರಿನ ಸಮಸ್ಯೆ ಇರುವ ವೇಳೆಯಲ್ಲಿ ಜಿಲ್ಲೆಗೆ ಹೇಮಾ ವತಿ ನೀರು ಹರಿಸಿದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು. ನಗರದ ಕುಡಿಯುವ ನೀರಿನ ಮೂಲವಾದ ಹೇಮಾವತಿ ನೀರು ಸೋಮವಾರ ಬುಗಡನಹಳ್ಳಿ ಕೆರೆಯನ್ನು ತಲುಪಿರುವುದು ಸಂತಸ ಮೂಡಿದೆ ಎಂದರು.
ಈ ಬೇಸಿಗೆಯ ತಾಪಕ್ಕೆ ಕೆರೆಯಲ್ಲಿದ್ದ ನೀರು ಖಾಲಿಯಾಗಿ ಪ್ರಸ್ತುತ ಬಗುಡದ ನೀರನ್ನು ಶುದ್ಧೀಕರಿಸಿ ತುಮಕೂರು ನಗರದ ನಾಗರಿಕರಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗ ಕೆರೆಯಲ್ಲಿ ನೀರು ಕಾಲಿಯಾಗುತ್ತಿದ್ದ ವೇಳೆಯಲ್ಲಿ ಹೇಗೆ ಮುಂದೆ ನೀರು ಕೊಡುವುದು ಎನ್ನುವ ಆತಂಕ ವಿತ್ತು ಎಂದು ಹೇಳಿದರು. ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ಹರಿಸುವುದರ ಮೂಲಕ ಕಲ್ಪತರು ನಾಡಿನ ಕುಡಿಯುವ ನೀರಿನ ಬವಣೆ ತಪ್ಪಿಸಲು ಸಹಾಯ ಮಾಡಿದ್ದಾರೆ.
ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ನೀರಿನ ಬವಣೆ ನಿವಾರಿಸಿದ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ಸಂಸದರಾದ ಜಿ.ಎಸ್. ಬಸವರಾಜ್, ಶಾಸಕರಾದ ಬಿ.ಸಿ. ನಾಗೇಶ್, ಮಸಾಲ ಜಯರಾಂ ಹಾಗೂ ತುಮಕೂರು ಜಿಲ್ಲೆಯ ಶಾಸಕರಿಗೂ ಅಭಿನಂದನೆ ಸಲ್ಲಿಸಿದರು.