Advertisement
ಅ.6 ರಂದು ಘಾಟ್ಕೊàಪರ್ ಪಶ್ಚಿಮದ ಅಸಲ್ಪಾದ ಶ್ರೀ ಕ್ಷೇತ್ರದ ಶ್ರೀ ಗೀತಾಂಬಿಕಾ ಸಭಾಗೃಹದಲ್ಲಿ ನಡೆದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ನೃತ್ಯ ಅಭಿನಯ ಕಲಾಕ್ಷೇತ್ರ ಇವುಗಳ ಜಂಟಿ ಆಶ್ರಯದಲ್ಲಿ ಜರಗಿದ ಕೃತಿಗಳ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಸುನಂದ ಪ್ರಕಾಶ್ ಮಾತನಾಡಿ, ಒಂದು ಕಾಲಕ್ಕೆ ದುರ್ಬಲ ಪ್ರಕಾರವಾಗಿದ್ದ ಕಥಾ ಪ್ರಕಾರವು ಇಂದು ಯಶಸ್ವಿ ಪ್ರಕಾರವಾಗಿ ಬೆಳೆದು ನಿಂತಿದೆ. ಬ್ಲೇಡ್ ಮಾಡುವ ಕೆಲಸವನ್ನು ಇಂದಿನ ಕಥೆಗಳು ಮಾಡಬೇಕು ಎಂದರು. ಸಮನಸ್ಸನ್ನು ಕಾಡುವ ಕವಿತೆಗಳು ಕಲ್ಯಾಣಿಯಲ್ಲಿ ಮಳೆ ಸಂಕಲನದಲ್ಲಿ ಇವೆ. ಲೇಖಕರಿಗೆ ವ್ಯಾಕರಣದ ಜತೆ ಅಂತ:ಕರಣ ಇರಲಿ ಎಂದು ಜೋಕಟ್ಟೆ ತಿಳಿಸಿದರು.
ಗಿರಿಜಾ ಅಮೀನ್, ಸದಾನಂದ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕು| ನಿಖೀತಾ ಸದಾನಂದ ಅಮೀನ್ ನಿರ್ದೇಶನದಲ್ಲಿ ನೃತ್ಯ ಅಭಿನಯ ಕಲಾಕ್ಷೇತ್ರದವರಿಂದ ನೃತ್ಯ ವೈಭವ ನಡೆಯಿತು. ಕು| ವಿದ್ಯಾ ರೋಹಿತ್ ಪೂಜಾರಿ ಅವರಿಂದ ವೀಣಾವಾದನ ನಡೆಯಿತು. ಕಲಾವಿದೆಯರು ಪ್ರಾರ್ಥನೆಗೈದರು. ಕಲಾವಿದ ಕಿರಣ ದೇಸಾಯಿ ಸಾಲಹಳ್ಳಿ ಅತಿಥಿಗಳನ್ನು ಪರಿಚಯಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಾ ಪೂಜಾರಿ ವಂದಿಸಿದರು.
ಇಂದು ಬರೆಯುವವರ ಸಂಖ್ಯೆ ಹೆಚ್ಚು ಇದೆ. ಆದರೆ ಓದುವ ಜನ ಕಡಿಮೆ. ಓದುವ ಹವ್ಯಾಸ ಕಡಿಮೆಯಾದಾಗ ಬರಹಗಾರರಿಗೆ ಪ್ರೋತ್ಸಾಹದ ಕೊರತೆಯಾಗುವುದು. ಪುಸ್ತಕ ಗೆಳೆಯ ಅಥವಾ ಪ್ರೇಯಸಿ ಇದ್ದಂತೆ. ಲೇಖಕರು ಎಷ್ಟು ಬರೆದೆವು ಎಂಬುವುದಕ್ಕಿಂತ ಮುಖ್ಯವಾಗಿ ಏನನ್ನು ಬರೆದಿದ್ದೇವೆ ಎಂಬ ಅರಿವಿನ ಎಚ್ಚರಿಕೆಯಿಂದ ಕೃತಿಗಳನ್ನು ರಚಿಸಬೇಕು.-ಕಡಂದಲೆ ಸುರೇಶ್ ಭಂಡಾರಿ, ಅಧ್ಯಕ್ಷರು, ಶ್ರೀ ಗೀತಾಂಬಿಕಾ ಸೇವಾ ಸಮಿತಿ ಅಸಲ್ಫಾ
ನಿಖೀತಾ ಅಮೀನ್ ಅವರು ಓರ್ವ ಪ್ರತಿಭಾವಂತೆಯಾಗಿದ್ದಾರೆ. ಕಲಾವಿದರಲ್ಲಿ ಗುಣವಂತಿಕೆ, ಧನವಂತಿಕೆ ಮತ್ತು ವಿದ್ಯಾವಂತಿಕೆ ಇದ್ದರೆ ಚೆಂದ. ಆವಾಗಲೇ ಕಲೆಯು ಪುನಃಶ್ಚೇತನಗೊಂಡು ಅದನ್ನು ಬೆಳೆಸಿ-ಉಳಿಸುವ ಹೃದಯ ಶ್ರೀಮಂತಿಕೆ ಬೆಳೆಯಲು ಸಾಧ್ಯ.
-ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್, ಸಂಸ್ಥಾಪಕಾಧ್ಯಕ್ಷರು, ಶ್ರೀ ಕೃಷ್ಣ ವಿಠuಲ ಪ್ರತಿಷ್ಠಾನ ಮುಂಬಯಿ
ಕಳೆದ 45 ವರ್ಷಗಳಿಂದ ಮುಂಬಯಿ ಮಣ್ಣು ನನ್ನಂಥವರನ್ನು ಸಾಹಿತಿಯನ್ನಾಗಿಸಿದಂತೆ ಹೇಮಾರನ್ನೂ ಈ ಮಣ್ಣು ಲೇಖಕಿಯನ್ನಾಗಿಸಿ ಬೆಳೆಸಿದೆ. ನಾವೂ ಎಲ್ಲೆಲ್ಲಿ ನೋಡುತ್ತೇವೆಯೋ ಆ ದೃಷ್ಟಿಕೋನದಲ್ಲಿ ಅಲ್ಲಲ್ಲಿ ಕಾವ್ಯ ಹುಟ್ಟುತ್ತದೆ.
-ವಿದ್ಯಾಧರ ಮುತಾಲಿಕ ದೇಸಾಯಿ,
ಅಧ್ಯಕ್ಷರು, ವಿದ್ಯಾಧರ ಕನ್ನಡ ಪ್ರತಿಷ್ಠಾನ ಚಿತ್ರ-ವರದಿ: ರೋನ್ಸ್ ಬಂಟ್ವಾಳ್