Advertisement
ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದ ಪ್ರಸಿದ್ಧ ಕವಿ ಗೈಬಿಶಾ ಮಕಾನದಾರ್ ಅವರು ಲಕ್ಷಕ್ಕಿಂತ ಹೆಚ್ಚು ಜಾನಪದ ಸೇರಿದಂತೆ ವಿವಿಧ ರೀತಿಯ ಕವನಗಳನ್ನು ರಚಿಸಿ ಹಾಡಿದ್ದಾರೆ. ಗಡಿನಾಡು ಕನ್ನಡಿಗರಾಗಿದ್ದರಿಂದ ಅವರ ಪ್ರತಿಭೆಯನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಗಳೆರಡೂ ಗುರುತಿಸದೆ ನಿರ್ಲಕ್ಷಿಸಿವೆ. ಇಂತಹ ಸಾಹಿತಿಯ ಆರ್ಥಿಕ ಸ್ಥಿತಿ ಬಹಳಷ್ಟು ಹದಗೆಟ್ಟಿದ್ದು, ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದೆ. ಇದೀಗ ತೀವ್ರ ಸಂಕಷ್ಟದಲ್ಲಿರುವ ಗೈಬಿಶಾ ಕುಟುಂಬಕ್ಕೆ ನೆರವು ನೀಡಲು ಆತ್ಮಾ ಸೋಷಿಯಲ್ ಫೌಂಡೇಶನ್ ಸೇರಿದಂತೆ ಹಲವಾರು ಮಂದಿ ಮುಂದೆ ಬಂದು ಮಾನವೀಯತೆ ಮೆರೆದಿದ್ದಾರೆ.
Related Articles
Advertisement
ರಾಗ ಸಂಯೋಜನೆ ಮಾಡುವ ಪಾಂಡಿತ್ಯ :
ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ಲಭಿಸಬೇಕಾಗಿದೆ. ಗೈಬಿಶಾ ಮುಸ್ಲಿಮರಾಗಿದ್ದರೂ ಅವರಲ್ಲಿ ಸಾಕಷ್ಟು ಆಧ್ಯಾತ್ಮದ ಜ್ಞಾನ ಗಂಗೆ ಹರಿಯುತ್ತಿದೆ. ತಮ್ಮ ಹಾಡುಗಳ ಮೂಲಕ ಸಮಾಜ ಪರಿವರ್ತನೆಯ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ವಿವಿಧ ರೀತಿಯ ಕವನಗಳನ್ನು ರಚಿಸಿರುವ ಕವಿ ಗೈಬಿಶಾ ಅವರಲ್ಲಿ ಸೂಕ್ತ ರಾಗ ಸಂಯೋಜನೆ ಮಾಡುವಂತ ಪಾಂಡಿತ್ಯವೂ ಇದೆ. ಅಲ್ಲದೆ ಪುರಾಣ, ಪ್ರವಚನ, ಶಾಸ್ತ್ರ ಹೇಳುವುದರಲ್ಲೂ ವಿಶೇಷ ಪಾಂಡಿತ್ಯವನ್ನು ಹೊಂದಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್ ಮೂಲಕ ಸುದ್ದಿಯು ಬಿತ್ತರ ಗೊಂಡ ಪರಿ ಣಾಮ ಮುಂಬಯಿ ಸೇರಿ ದಂತೆ, ಗಡಿನಾಡ ಕೊಲ್ಲಾಪುರ, ಸೊಲ್ಲಾಪುರದ ದಾನಿ ಗಳು, ಕನ್ನಡ ಪರ ಸಂಘಟನೆಗಳು, ಮಠ- ಮಂದಿರಗಳು ಗೈಬಿಶಾ ಕುಟುಂಬಕ್ಕೆ ಸಹಕರಿಸಲು ಮುಂದಾಗಿ ದ್ದಾರೆ. ಸಹಕರಿ ಸಲಿಚ್ಛಿಸುವವರು 9822749310, 9921085319 ಈ ನಂಬರ್‌ಗಳನ್ನು ಸಂಪರ್ಕಿಸಬಹುದು.
ಗಡಿನಾಡಿನ ಪ್ರತಿಭೆಗಳ ನೆರವಿಗೆ ಸರಕಾರಗಳು ಮುಂದಾಗಬೇಕು. ಅಲ್ಲದೆ ನನ್ನ ಕೃತಿಗಳು ಪ್ರಕಟವಾಗಬೇಕು. 2 ಲಕ್ಷಕ್ಕೂ ಅಧಿಕ ಹಾಡುಗಳು ರಚನೆಯಾಗಿವೆ. ಜಾತ್ರೆ, ಮಠ, ಮಂದಿರ ಸೇರಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಯಾ ಸ್ಥಳ, ವ್ಯಕ್ತಿ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಹಾಡುಗಳನ್ನು ರಚಿಸಿ ಹಾಡುತ್ತೇನೆ. ಕೊರೊನಾ ಹಿನ್ನೆಲೆ ಯಾವುದೆ ಕಾರ್ಯಕ್ರಮಗಳು ನನಗೆ ಸಿಗುತ್ತಿಲ್ಲ. ತೀವ್ರ ಸಂಕಷ್ಟದಲ್ಲಿರುವ ನನ್ನ ಕುಟುಂಬಕ್ಕೆ ಸರಕಾರದ ಸಹಾಯ ಧನ ಬೇಕಾಗಿದೆ. ಆತ್ಮಾ ಸೋಷಿಯಲ್ ಫೌಂಡೇಶನ್ ಮೂಲಕ ನೆರವು ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ. –ಗೈಬಿಶಾ ಮಕಾನ್ದಾರ್, (ಜಾನಪದ ಕವಿಗಳು ಅಂದೇವಾಡಿ)