Advertisement

ಕೋವಿಡ್‌ ವಾರಿಯರ್ಸ್‌ಗೆ ನೆರವಾಗಿ

10:06 AM Aug 11, 2020 | Suhan S |

ಕಾರಟಗಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಭಾರತ ವಿದ್ಯಾರ್ಥಿ ಫೆಡರೇಷನ್‌, ಅಖೀಲ ಭಾರತ ಕೃಷಿ ಫೆಡರೇಷನ್‌ ಸಂಘಟನೆ ಸದಸ್ಯರು ಸೋಮವಾರ ತಹಶೀಲ್ದಾರ್‌ ಕಚೇರಿಯಲ್ಲಿ ಮನವಿ ಸಲ್ಲಿಸಿದರು.

Advertisement

ವಿವಿಧ ಸಂಘಟನೆಗಳ ಪ್ರಮುಖರು ಮಾತನಾಡಿ, ಕೋವಿಡ್‌-19 ಪಿಡುಗು ದೇಶದಲ್ಲಿನ ಹಲವಾರು ರೈತರು, ಕೃಷಿಕೂಲಿಕಾರ್ಮಿಕರು ಸೇರಿದಂತೆ ಎಲ್ಲ ವ್ಯಾಪಾರ ಉದ್ಯೋಗದ ಮೇಲು ಬಿರುಗಾಳಿ ಬೀಸಿದಂತಾಗಿ ಜನಜೀವನ ದುಸ್ತರಗೊಳಿಸಿದೆ. ಅಲ್ಲದೆ ಕೋವಿಡ್‌ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಲಾ‌ಕ್‌ಡೌನ್‌ ಹೇರಿದ್ದರಿಂದ ದುಡಿಯುವ ಜನರನ್ನು ಕೂಡ ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿಸಿದೆ. ಇದರಿಂದಾಗಿ ದೇಶದ ವಿವಿಧ ಕೆಲಸ ಕಾರ್ಯ ನಿರ್ವಹಿಸುವ ಕೂಲಿಕಾರರು, ಕಾರ್ಮಿಕರು, ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸರಕಾರ ಕೂಡ ಜನತೆ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿಲ್ಲ. ಕೂಲಿಕಾರ ಕುಟುಂಬಗಳಿಗೆ, ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿಯೂ ನೀರ್ಲಕ್ಷ್ಯ ತೋರಿದೆ.

ಅಲ್ಲದೆ ಹಲವಾರಿ ರೀತಿಯ ಕಾನೂನು ಬದಲಾವಣೆ ಮಾಡುವ ಮೂಲಕ ತಿದ್ದುಪಡಿ ಜಾರಿಗೆ ತಂದು ತೀವ್ರ ಸಂಕಷ್ಟಕ್ಕೆ ದೂಡಿದೆ. ಆ. 10ರಂದು ಚಾರಿತ್ರಿಕ ಕ್ವಿಟ್‌ ಇಂಡಿಯಾ ದಿನಾಚರಣೆ ಸಂಸ್ಮರಣೆ ಅಂಗವಾಗಿ ಆ. 10ರಂದು ಭಾರತ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಬೇಡಿಕೆಗಳಿಗೆ ಒತ್ತಾಯಿಸಿ ಹೋರಾಟ ನಡೆಸಿದ್ದೇವೆ. ನಮ್ಮ ಹೋರಾಟ ಬೇಡಿಕೆಗಳ ಬಗ್ಗೆ ಕೇಂದ್ರ ಸರಕಾರ ಪಾರ್ಲಿಮೆಂಟ್‌ ಅಧಿವೇಶನ ಹಾಗೂ ರಾಜ್ಯ ಸರಕಾರ ವಿಧಾನಸಭೆ ಅಧಿವೇಶನ ಕರೆದು ಚರ್ಚಿಸಿ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕು ಎಂದು ಒತ್ತಾಯಿಸಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ಕಚೇರಿ ಶಿರಸ್ತೇದಾರ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆಗಳ ಪ್ರಮುಖರು, ಕೂಲಿಕಾರ ಸಂಘದ ಅಧ್ಯಕ್ಷ ಹನುಮಂತಪ್ಪ, ಸಿಐಟಿಯು ಅಧ್ಯಕ್ಷೆ ಅಮರಮ್ಮ, ಅಂಗನವಾಡಿ ಶಿಕ್ಷಕಿಯರಾದ ಗಂಗಮ್ಮ, ಲಕ್ಷ್ಮೀ ಸಜ್ಜನ, ಸುರೇಖಾ, ದುರ್ಗಾಬಾಯಿ, ಕಾಸೀಮ್‌ ಸಾಬ್‌, ಹೇಮಣ್ಣ, ಯಲ್ಲಪ್ಪ, ಶರಣಮ್ಮ, ಭಾಗ್ಯಲಕ್ಷ್ಮೀ, ಕನಕರಾಯ, ಹುಲಿಗೆಮ್ಮ, ತಾಯಮ್ಮ, ಜ್ಯೋತಿ, ಶೋಭಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next