Advertisement

ಸಂತ್ರಸ್ತರಿಗೆ ಅನುಕಂಪ ತೋರದೆ ನೆರವಾಗಿ

09:33 PM Aug 15, 2019 | Team Udayavani |

ಗುಡಿಬಂಡೆ: ರಾಜ್ಯದಲ್ಲಿ ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಅನುಕಂಪ ತೋರದೆ ಕೈಲಾದಷ್ಟು ಸಹಾಯ ಮಾಡುವುದರ ಮೂಲಕ ಅವರ ನೆರವಿಗೆ ಮುಂದಾಗಬೇಕೆಂದು ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು (ಕರ್ನಾಟಕ ಪಬ್ಲಿಕ್‌ ಶಾಲೆ) ಆವರಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವಯಿಂದ ಹಮ್ಮಿಕೊಂಡಿದ್ದ 73 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೆರವಾಗಬೇಕು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವಾಹ, ನೆರೆಯಿಂದಾಗಿ ಅನೇಕ ಗ್ರಾಮಗಳು ಮುಳುಗಡೆಯಾಗಿ ಸಾವಿರಾರು ಜನರು ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಂತಹವರಿಗೆ ಅನುಕಂಪ ತೋರದೆ ಮಾನವೀಯತೆ ದೃಷ್ಟಿಯಿಂದ ನೆರವಾಗವೇಕೆಂದು ಹೇಳಿದರು.

ಸೈನಿಕರಿಗೆ ಸಲಾಂ: ನೆರೆಯಿಂದಾಗಿ ಸಾವಿರಾರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ನಮ್ಮ ಹೆಮ್ಮೆಯ ಸೈನಿಕರು ತಮ್ಮ ಪ್ರಾಣ ಪಣಕ್ಕಿಟ್ಟು ಕಾರ್ಯಾಚರಣೆ ನಡೆಸಿ ಜನರನ್ನು ರಕ್ಷಿಸಿದ್ದಾರೆ. ಸೈನಿಕರಿಗೆ ನನ್ನದೊಂದು ಸಲಾಂ ಎಂದರು.

ದೇಶಪ್ರೇಮ ಮೂಡಿಸಿ: ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹಂಪಸಂದ್ರ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ಎಂ.ನಾರಾಯಣಸ್ವಾಮಿ, ಪೋಷಕರು ಮಕ್ಕಳಿಗೆ ಸ್ವಾತಂತ್ರ ಹೋರಾಟಗಾರರ ಜೀವನದ ಬಗ್ಗೆ ತಿಳಿಸಿ ಅವರ ತ್ಯಾಗ ಬಲಿದಾನಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಬೇಕು.

Advertisement

ದೇಶದ ರಕ್ಷಣೆಗೆ ತಮ್ಮ ಪ್ರಾಣ ಪಣಕ್ಕಿಟ್ಟು ಗಡಿ ಕಾಯುತ್ತಿರುವ ಯೋಧರಿಗೆ ನಾವು ಚಿರ ಋಣಿ ಆಗಿರಬೇಕು. ದೇಶಾಭಿಮಾನದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ಇಂದಿನ ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ದೇಶದ ಚರಿತ್ರೆ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ದೇಶಕ್ಕಾಗಿ ದುಡಿದ ಮಹಾನ್‌ ಪುರುಷರ ಹಾದಿಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಬಹುಮಾನ ವಿತರಣೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆರ್‌.ಹಾರಿಕ, ಎಲ್ಲೋಡು ಸರ್ಕಾರಿ ಪ್ರೌಢಶಾಲೆಯ ಜಿ.ಅಂಬಿಕಾ, ಸೋಮೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಿ.ಆರ್‌.ಮೌನಿಕಗೆ ಸರ್ಕಾರದಿಂದ ಬಂದಿರುವ ಲ್ಯಾಪ್‌ಟಾಪ್‌ಗ್ಳನ್ನು ನೀಡಿ ಸನ್ಮಾನಿಸಲಾಯಿತು.

ವಿವಿಧ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕ್ರೀಡೆ, ಬ್ಯಾಂಡ್‌ಸೆಟ್‌, ಪಥ ಸಂಚಲನ ಕಾರ್ಯಕ್ರಮಕ್ಕೆ ಮೆರಗು ನೀಡಿದವು. ತಹಶೀಲ್ದಾರ್‌ ಡಿ.ಹನುಮಂತರಾಯಪ್ಪ, ಬಿಇಒ ಡಿ.ಎನ್‌.ಸುಕನ್ಯ, ಪ.ಪಂ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್‌ ಕುಮಾರ್‌, ಆರಕ್ಷಕ ವೃತ್ತ ನಿರೀಕ್ಷಕ ಸುನಿಲ್‌ ಕುಮಾರ್‌,  ಉಪಾಧ್ಯಕ್ಷ ಬೈರಾರೆಡ್ಡಿ, ಪ.ಪಂ ಮಾಜಿ ಅಧ್ಯಕ್ಷ ರಿಯಾಜ್‌ ಪಾಷ, ಟಿಎಪಿಸಿಎಂಎಸ್‌ ಗಂಗಿರೆಡ್ಡಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ನರಸಿಂಹರೆಡ್ಡಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ನಾರಾಯಣಸ್ವಾಮಿ, ಟಿ.ಪಿ.ಒ ಎ.ನಾರಾಯಣಸ್ವಾಮಿ ಸೇರಿ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next